25 ವರ್ಷಗಳ ನಂತರ ಮತ್ತೆ ಬಾಲಿವುಡ್ ಗೆ ಮರಳಿದ ವೆಂಕಟೇಶ್..!
ಟಾಲಿವುಡ್ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ಇದೀಗ ಬರೋಬ್ಬರಿ ಒಂದು ಕ್ವಾರ್ಟರ್ ನ ಬಳಿಕ ಅಂದ್ರೆ 25 ವರ್ಷಗಳ ಬಳಿಕ ಬಾಲಿವುಡ್ ಗೆ ಮರಳುತ್ತಿದ್ದಾರೆ.. ಹೌದು 25 ವರ್ಷಗಳ ನಂತರ ವೆಂಕಟೇಶ್ ಮತ್ತೆ ಬಾಲಿವುಡ್ ನಲ್ಲಿ ಸಿನಿಮಾ ಮಾಡೋ ಮನಸ್ಸು ಮಾಡಿದ್ದು, ಈ ಬಾರಿ ಸಲ್ಮಾನ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲು ರೆಡಿಯಾಗಿದ್ದಾರೆ..
ಹೌದು.. ಸಲ್ಮಾನ್ ಖಾನ್ ಅಂತಿಮ್ ಸಕ್ಸಸ್ ಖುಷಿಯಲ್ಲಿದ್ದಾರೆ.. ಜೊತೆಗೆ ಅವರ ಹೊಸ ಸಿನಿಮಾ ‘ಟೈಗರ್ 3’ ನ ಶೂಟಿಂಗ್ ಕೂಡ ಮುಗಿದಿದೆ.. ಇದೀಗ ತಮ್ಮ ಆಪ್ತ ಗೆಳೆಯ ಸಾಜಿದ್ ನಾಡಿಯಾವಾಲ ಬಂಡವಾಳ ಹೂಡ್ತಿರುವ ಹೊಸ ಚಿತ್ರದಲ್ಲಿ ಬಣ್ಣ ಹಚ್ಚಲು ರೆಡಿಯಾಗ್ತಿದ್ದಾರೆ.. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆಗೆ ವೆಂಕಟೇಶ್ ಸಹ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.
ಅಪ್ಪುಗಾಗಿ ರಾಜಕುಮಾರ್ ಹುಟ್ಟಿದ ಮನೆಯನ್ನು ಮ್ಯೂಸಿಯಮ್ ಮಾಡಲು ಹೊರಟ ಕುಟುಂಬ..!
ಸಲ್ಮಾನ್ ಖಾನ್ ಹಾಗೂ ವೆಂಕಟೇಶ್ ಹಳೆಯ ಸ್ನೇಹಿತರು. ಇಬ್ಬರೂ ಒಟ್ಟಿಗೆ ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿಸಿಎಲ್ ನಡೆದಾಗಲೂ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇನ್ನೂ ವಿಶೇಷ ಅಂದ್ರೆ ಈ ಸಿನಿಮಾಗೆ ಕನ್ನಡತಿ ಪೂಜಾ ಹೆಗ್ಡೆ ನಾಯಕಿಯಾಗಲಿದ್ದಾರೆ ಎನ್ನಲಾಗಿದೆ.. ಅಂದ್ಹಾಗೆ ಪೂಜಾ ಹೆಗ್ಡೆ ಸಲ್ಮಾನ್ ಗೆ ನಾಯಕಿಯಾದ್ರೆ , ವೆಂಕಟೇಶ್ ಗೆ ನಾಯಕಿಗಾಗಿ ಸೌತ್ ಇಂಡಿಯನ್ ಸ್ಟಾರ್ ನಟಿಯನ್ನು ಸಂಪರ್ಕಿಸಲಾಗಿದೆ ಎನ್ನಲಾಗುತ್ತಿದೆ.
ಅಂದ್ಹಾಗೆ 1993 ರಲ್ಲಿ ವೆಂಕಟೇಶ್ ತಕ್ದೀರ್ವಾಲ ಎಂಬ ಹಿಂದಿ ಸಿನಿಮಾದಲ್ಲಿ ನಟಿಸಿದರು. ಆ ಬಳಿಕದಿಂದ ಬಾಲಿವುಡ್ ನಿಂದ ಅಂತರ ಕಾಯ್ದುಕೊಂಡಿದ್ದ ‘ನಾರಪ್ಪ’ ಈಗ ಮತ್ತೆ ಬಾಲಿವುಡ್ ಗೆ ಕಮ್ ಬ್ಯಾಕ್ ಮಾಡ್ತಿದ್ದಾರೆ..







