ADVERTISEMENT
Friday, April 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

ನಾಕೌಟ್ ಹಂತದಲ್ಲಿ ಮೊದಲ ಬಾರಿಗೆ ಫೇಲ್ ಆದ ವಿರಾಟ್ ಕೊಹ್ಲಿ

ಇಂಗ್ಲೆಂಡ್ ವಿರುದ್ಧ ಫೇಲ್ ಆದ ಕಿಂಗ್

Author2 by Author2
June 27, 2024
in Sports, ಕ್ರಿಕೆಟ್, ಕ್ರೀಡೆ
Share on FacebookShare on TwitterShare on WhatsappShare on Telegram

ಟಿ20 ವಿಶ್ವಕಪ್ 2024 ರ ಎರಡನೇ ಸೆಮಿಫೈನಲ್ ಪಂದ್ಯ ಭಾರತ ಹಾಗೂ ಇಂಗ್ಲೆಂಡ್ ಮಧ್ಯೆ ನಡೆಯುತ್ತಿದ್ದು, ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದಿರುವ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿದೆ.

ಆದರೆ, ನಿರೀಕ್ಷೆಯಂತೆ ಮಳೆ ಅಡ್ಡಿಯಾಗಿದೆ. ಮಳೆ ಅಡ್ಡಿಯಾಗುವ ವೇಳೆಗೆ ಟೀಂ ಇಂಡಿಯಾ ಮೊದಲ 8 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 65 ರನ್ ಗಳಿಸಿತ್ತು. ರೋಹಿತ್ ಶರ್ಮಾ ಹೂಗ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಆಡುತ್ತಿದ್ದರು. ವಿರಾಟ್ ಕೊಹ್ಲಿ ಹಾಗೂ ರಿಷಬ್ ಪಂತ್ ಬೇಗನೆ ಪೆವಿಲಿಯನ್‌ ಸೇರಿದ್ದಾರೆ.

Related posts

ಅಭಿಮಾನಿಗಳಿಂದ ರಕ್ತದಾನ.. RCB ಗೆಲುವಿಗೆ ಶುಭಹಾರೈಕೆ!

ಅಭಿಮಾನಿಗಳಿಂದ ರಕ್ತದಾನ.. RCB ಗೆಲುವಿಗೆ ಶುಭಹಾರೈಕೆ!

March 29, 2026
RCB VS SRH : ಚಿನ್ನಸ್ವಾಮಿಯಲ್ಲಿ ಆರ್ ಸಿ ಬಿ ಅಬ್ಬರ ಕೊಹ್ಲಿ ಪಡಿಕ್ಕಲ್ ಜುಗಲ್ಬಂದಿಗೆ ಹೈದರಾಬಾದ್ ಧೂಳೀಪಟ

RCB VS SRH : ಚಿನ್ನಸ್ವಾಮಿಯಲ್ಲಿ ಆರ್ ಸಿ ಬಿ ಅಬ್ಬರ ಕೊಹ್ಲಿ ಪಡಿಕ್ಕಲ್ ಜುಗಲ್ಬಂದಿಗೆ ಹೈದರಾಬಾದ್ ಧೂಳೀಪಟ

March 29, 2026

ಆದರೆ, ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಭಾರೀ ಕಳಪೆ ಪ್ರದರ್ಶನಕ್ಕೆ ಕಾರಣವಾಗುತ್ತಿದ್ದಾರೆ. ಸೆಮಿಫೈನಲ್ಲಿ ಆದರೂ ಆಡಬಹುದು ಎಂಬ ನಿರೀಕ್ಷೆ ಮತ್ತೆ ಹುಸಿಯಾಗಿದೆ. ಈ ಹಿಂದೆ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದರು.
ಆದರೆ ಈ ಪಂದ್ಯದಲ್ಲಿ ಎಂದಿನಂತೆ ಆರಂಭಿಕರಾಗಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ, ಕೇವಲ 9 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಇನ್ನಿಂಗ್ಸ್ ಆರಂಭಿಸಿದಾಗಿನಿಂದಲೂ ರನ್ಗಾಗಿ ತಿಣುಕಾಡುತ್ತಿದ್ದ ಕೊಹ್ಲಿ, ಒಂದೇ ಒಂದು ಸಿಕ್ಸರ್ ಸಿಡಿಸಿ, ಕ್ಲೀನ್ ಬೌಲ್ಡ್ ಆಗಿ ಪೆವಲೀಯನ್ ಸೇರಿದರು.

ಟಿ20 ವಿಶ್ವಕಪ್‌ನ ನಾಕೌಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಗಳಿಸದೆ ಔಟಾಗಿರುವುದು ಇದೇ ಮೊದಲು. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನ 4 ನಾಕೌಟ್ ಪಂದ್ಯಗಳನ್ನು ಆಡಿದ್ದರು. ಈ ಎಲ್ಲ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದ್ದಾರೆ. ಆದರೆ ಈ ಬಾರಿ ವಿರಾಟ್ ಎರಡಂಕಿಯನ್ನೂ ದಾಟಲಿಲ್ಲ.

2014 ರ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 72 ರನ್ ಬಾರಿಸಿದ್ದ ವಿರಾಟ್, ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 77 ರನ್ ಗಳಿಸಿದ್ದರು. 2016 ರ ವಿಶ್ವಕಪ್‌ನಲ್ಲಿ ವಿಂಡೀಸ್ ವಿರುದ್ಧ ಅಜೇಯ 89 ರನ್, 2022 ರಲ್ಲಿ ಇಂಗ್ಲೆಂಡ್‌ ವಿರುದ್ಧ 50 ರನ್ ಗಳಿಸಿದ್ದರು.
ಆದರೆ, ವಿರಾಟ್ ಈ ಆವೃತ್ತಿ ಪೂರ್ತಿ ಕಳಪೆ ಪ್ರದರ್ಶನ ತೋರಿದ್ದಾರೆ. ಆಡಿರುವ 7 ಪಂದ್ಯಗಳಲ್ಲಿ ಕೇವಲ 75 ರನ್ ಮಾತ್ರ ಗಳಿಸಿದ್ದಾರೆ. ಐರ್ಲೆಂಡ್ ವಿರುದ್ಧ 1 ರನ್, ಪಾಕಿಸ್ತಾನ್ ವಿರುದ್ಧ 4, ಯುಎಸ್ಎ ವಿರುದ್ಧ 0, ಅಫ್ಘಾನಿಸ್ತಾನ ವಿರುದ್ಧ 24, ಬಾಂಗ್ಲಾದೇಶ ವಿರುದ್ಧ 37, ಆಸ್ಟ್ರೇಲಿಯಾ ವಿರುದ್ಧ 0, ಇಂಗ್ಲೆಂಡ್ ವಿರುದ್ಧ 9 ರನ್ ಗಳಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಬೇಸರಿಸಿಕೊಂಡಿದ್ದಾರೆ.

Tags: Virat Kohli failed in the knockout stage for the first time
ShareTweetSendShare
Join us on:

Related Posts

ಅಭಿಮಾನಿಗಳಿಂದ ರಕ್ತದಾನ.. RCB ಗೆಲುವಿಗೆ ಶುಭಹಾರೈಕೆ!

ಅಭಿಮಾನಿಗಳಿಂದ ರಕ್ತದಾನ.. RCB ಗೆಲುವಿಗೆ ಶುಭಹಾರೈಕೆ!

by Shwetha
March 29, 2026
0

2026ರ IPLನ ಮೊದಲ ಪಂದ್ಯವು ಬೆಂಗಳೂರಿನಲ್ಲಿ RCB & SRH ನಡುವೆ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಬೆಂಗಳೂರಿನ ಗಿರಿನಗರದ ರಾಷ್ಟೋತ್ಥಾನ ರಕ್ತ ಕೇಂದ್ರದಲ್ಲಿ ನೂರಾರು RCB...

RCB VS SRH : ಚಿನ್ನಸ್ವಾಮಿಯಲ್ಲಿ ಆರ್ ಸಿ ಬಿ ಅಬ್ಬರ ಕೊಹ್ಲಿ ಪಡಿಕ್ಕಲ್ ಜುಗಲ್ಬಂದಿಗೆ ಹೈದರಾಬಾದ್ ಧೂಳೀಪಟ

RCB VS SRH : ಚಿನ್ನಸ್ವಾಮಿಯಲ್ಲಿ ಆರ್ ಸಿ ಬಿ ಅಬ್ಬರ ಕೊಹ್ಲಿ ಪಡಿಕ್ಕಲ್ ಜುಗಲ್ಬಂದಿಗೆ ಹೈದರಾಬಾದ್ ಧೂಳೀಪಟ

by Shwetha
March 29, 2026
0

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹನ್ನೊಂದು ತಿಂಗಳ ಬಳಿಕ ಮತ್ತೆ ಕ್ರಿಕೆಟ್ ಹಬ್ಬ ಕಳೆಗಟ್ಟಿದೆ. ಮೈದಾನದೆಲ್ಲೆಡೆ ಕೆಂಪು ಸಾಗರವೇ ಹರಿದುಬಂದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ತಮ್ಮ...

ಈತ ಇರೋವರೆಗೂ ಟೀಂ ಇಂಡಿಯಾ ಟ್ರೋಫಿ ಗೆಲ್ಲೋದು ಪಕ್ಕಾ! ಫೈನಲ್ ನಲ್ಲಿ ಕಿವೀಸ್ ಬೇಟೆ ಆಡಿದ ಬೌಲರ್; ಈತನಿಗಿಂತ ಬೆಸ್ಟ್ ಯಾರಿಲ್ಲ ಎಂದ ಮಿಸ್ಟರ್ 360

ಈತ ಇರೋವರೆಗೂ ಟೀಂ ಇಂಡಿಯಾ ಟ್ರೋಫಿ ಗೆಲ್ಲೋದು ಪಕ್ಕಾ! ಫೈನಲ್ ನಲ್ಲಿ ಕಿವೀಸ್ ಬೇಟೆ ಆಡಿದ ಬೌಲರ್; ಈತನಿಗಿಂತ ಬೆಸ್ಟ್ ಯಾರಿಲ್ಲ ಎಂದ ಮಿಸ್ಟರ್ 360

by Shwetha
March 19, 2026
0

ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಇತ್ತೀಚೆಗೆ ನಡೆದ 2026ರ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ಐತಿಹಾಸಿಕ ಜಯ ಸಾಧಿಸುವ ಮೂಲಕ...

vvs lakshman and rahul dravid

ಅಹಂಕಾರದ ಪತನ.. ಆತ್ಮವಿಶ್ವಾಸದ ಉದಯ..! ಲಕ್ಷ್ಮಣ್ -ದ್ರಾವಿಡ್ ಮಹೋನ್ನತ ಇನಿಂಗ್ಸ್ ಗೆ ಬೆಳ್ಳಿ ಗರಿಯ ಹರುಷ..!

by admin
March 16, 2026
0

ಅಹಂಕಾರದ ಪತನ.. ಆತ್ಮವಿಶ್ವಾಸದ ಉದಯ..! ಲಕ್ಷ್ಮಣ್ -ದ್ರಾವಿಡ್ ಮಹೋನ್ನತ ಇನಿಂಗ್ಸ್ ಗೆ ಬೆಳ್ಳಿ ಗರಿಯ ಹರುಷ..! ಅದು 2001. ಮಾರ್ಚ್ 15. ಭಾರತ - ಆಸ್ಟ್ರೇಲಿಯಾ ನಡುವಿನ...

ವಿಶ್ವಕಪ್ ಗೆಲುವಿನ ಅಮಲಿನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಗೆ ಕಂಟಕವಾದ ಸಂಭ್ರಮಾಚರಣೆ

ವಿಶ್ವಕಪ್ ಗೆಲುವಿನ ಅಮಲಿನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಗೆ ಕಂಟಕವಾದ ಸಂಭ್ರಮಾಚರಣೆ

by Shwetha
March 13, 2026
0

ಭಾರತದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮವು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram