ADVERTISEMENT
Thursday, March 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Uncategorized

ಕೂದಲಿಗಷ್ಟೇ ಅಲ್ಲ, ಚರ್ಮದ ಕಾಂತಿ ಹೆಚ್ಚಿಸಲು ಮತ್ತು ಕೊಬ್ಬು ಕರಗಿಸಲೂ ಸಹಕಾರಿ ಸೀಗೆ

admin by admin
July 20, 2020
in Uncategorized
Share on FacebookShare on TwitterShare on WhatsappShare on Telegram

ಕೂದಲಿಗಷ್ಟೇ ಅಲ್ಲ, ಚರ್ಮದ ಕಾಂತಿ ಹೆಚ್ಚಿಸಲು ಮತ್ತು ಕೊಬ್ಬು ಕರಗಿಸಲೂ ಸಹಕಾರಿ ಸೀಗೆ

ನಿಮಗೆಲ್ಲಾ ಎಣ್ಣೆಯ ಪರಮ ಶತ್ರು ಸೀಗೆಯು ಬಗ್ಗೆ ಗೊತ್ತೇ ಇರುತ್ತದೆ. ತಲೆ ಕೂದಲಿಗೆ ಎಣ್ಣೆ ಹಚ್ಚಿಕೊಂಡು ಸೀಗೇಪುಡಿಯನ್ನು ಎರೆದು ಸ್ನಾನ ಮಾಡಿದರೆ ಜಿಡ್ಡಿನ ಲವಲೇಶವೂ ಇಲ್ಲದಂತೆ ತೊಳೆಯುವ ಅತ್ಯಂತ ಪ್ರಬಲ ಮಾರ್ಜಕ ಸೀಗೆ. ಇದು ಲೆಗ್ಯುಮಿನೋಸೀ ಕುಟುಂಬದ ವಿಮೋಸೀ ಎನ್ನುವ ಉಪಕುಟುಂಬಕ್ಕೆ ಸೇರುವ ಅಕೇಸಿಯ ಕಾನ್ಸಿನ್ನ ಎಂಬ ಪ್ರಭೇದದ ಮುಳ್ಳಿನ ಮರಬಳ್ಳಿ. ಸೀಗೆಗೆ ಇಂಗ್ಲೀಷಿನಲ್ಲಿ ಹರ್ಬಾರಿಯಂ ಎಂದು ಕರೆದರೆ, ಹಿಂದಿಯಲ್ಲಿ ಶೀಕಾಕಾಯ್ ಎನ್ನಲಾಗುತ್ತದೆ, ಶೀಕಾ ಎಂದರೆ ಕೂದಲು ಮತ್ತು ಕಾಯ್ ಅಂದರೆ ಹಣ್ಣು. ನಮ್ಮ ಅತ್ಯಂತ ಪ್ರಾಚೀನ ಮಾರ್ಜಕವಾದ ಸೀಗೆ ನಮ್ಮ ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ಬೇಲಿಗಳಲ್ಲಿ ಬಳ್ಳಿಗಳನ್ನು ಹಬ್ಬಿಸಿ ಬೆಳೆಯುತ್ತಾರೆ. ಅಕೇಸಿಯ ಪೆನ್ನೇಟ ಎನ್ನುವ ಹೆಸರಿನ ಸೀಗೆಯ ಮತ್ತೊಂದು ಜಾತಿಯಿದೆ ಇದು ಕಾಡು ಸೀಗೆ.

Related posts

ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಶ್ಲೋಕವನ್ನು ನಿತ್ಯ ಪಠಿಸಿ ಚಮತ್ಕಾರ ನೋಡಿ

ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಶ್ಲೋಕವನ್ನು ನಿತ್ಯ ಪಠಿಸಿ ಚಮತ್ಕಾರ ನೋಡಿ

January 4, 2026
Know the Importance of Chanting Navagraha Mantra on This Auspicious Day

ನವಗ್ರಹ ಮಂತ್ರ ದಿನ ಪಠಿಸುವುದರ ಮಹತ್ವ ತಿಳಿಯಿರಿ

December 20, 2025

ಸೀಗೆ ನಮ್ಮ ಆಯುರ್ವೇದಿಕೆ ಔಷದ ಪದ್ಧತಿಯಲ್ಲೂ ಸಾಕಷ್ಟು ಮಹತ್ವವಿದೆ. ಸೀಗೆಯ ಎಲೆಗಳು ಮತ್ತು ತೊಗಟೆಯನ್ನು ಒಣಗಿಸಿ ಪುಡಿ ಮಾಡಿ ನೀರಿನ ಮಿಶ್ರಣದಲ್ಲಿ ಹದವಾಗಿ ಬೆರೆಸಿ ಗಟ್ಟಿಯಾಗಿ ಹಸಿ ಹಿಟ್ಟಿನಂತಾಗಿಸಿ ನಿಯಮಿತವಾಗಿ ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಕೇಶದ ಕಾಂತಿ ಹೆಚ್ಚುತ್ತದೆ, ಕೂದಲು ಉದುರುವ, ತಲೆ ಹೊಟ್ಟು, ಹೇನಿನ ಸಮಸ್ಯೆ ದೂರವಾಗುತ್ತದೆ. ಸೀಗೆಯ ಸೊಪ್ಪಿನಲ್ಲಿ ಅದ್ಭುತ ಔಷದೀಯ ಗುಣಗಳಿವೆ. ಇದರ ಸೊಪ್ಪಿನಲ್ಲಿ ಹಲವು ಖಾದ್ಯಗಳನ್ನು ಮಾಡುವ ಪದ್ಧತಿ ನಮ್ಮ ದಕ್ಷಿಣ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಇದೆ.

ಆಯುರ್ವೇದಿಕ್ ವೈದ್ಯರ ಪ್ರಕಾರ ಸೀಗೆಸೊಪ್ಪು ಅತ್ಯುತ್ತಮವಾದ ಡಯಟ್ ಆಹಾರ. ದೇಹದ ತೂಕ ಇಳಿಸಲು, ಕೊಬ್ಬ ಕರಗಿಸಲು, ಹಾಗೂ ಸುಸ್ತಾದಾಗ ಹೆಚ್ಚಿನ ಶಕ್ತಿ ನೀಡಲು ಇದರ ಸೊಪ್ಪಿನ ಪದಾರ್ಥಗಳು ಉಪಯೋಗಕಾರಿ. ಸೀಗೆ ಸೊಪ್ಪಿನ ಸಾರನ್ನು ವಾರದಲ್ಲಿ ಒಮ್ಮೆಯಾದರೂ ಮಾಡಿ ಬಳಸಿದರೆ ಸ್ಥೂಲಕಾಯ ಸಮಸ್ಯೆಯೇ ಎದುರಾಗುವುದಿಲ್ಲ. ನಮ್ಮ ಗ್ರಾಮೀಣ ಭಾಗಗಳಲ್ಲಿ ಬಾಣಂತಿಯರಿಗೆ ಸೀಗೆಸೊಪ್ಪಿನ ಸಾರು ಉಣಬಡಿಸಲಾಗುತ್ತದೆ. ನಿಯಮಿತವಾಗಿ ಸೀಗೆ ಸೊಪ್ಪಿನ ಸಾರು ಸೇವಿಸುವುದರಿಂದ ನಿದ್ರಾಹೀನತೆ ದೂರವಾಗುತ್ತದೆ. ಸೀಗೆಯನ್ನು ಪುಡಿ ಮಾಡಿ ತಲೆ ಕೂದಲಿನ ಜೊತೆ ದೇಹದ ಭಾಗಗಳಿಗೂ ಲೇಪಿಸಿಕೊಂಡು ಸ್ನಾನ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.

ಮಾಹಿತಿ ಮತ್ತು ಲೇಖನ: ಅಂಬಿಕಾ ಸೀತೂರು

Tags: AyurvedafruitHerbarium in Englishseege in kannadaShikakai in Hindi
ShareTweetSendShare
Join us on:

Related Posts

ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಶ್ಲೋಕವನ್ನು ನಿತ್ಯ ಪಠಿಸಿ ಚಮತ್ಕಾರ ನೋಡಿ

ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಶ್ಲೋಕವನ್ನು ನಿತ್ಯ ಪಠಿಸಿ ಚಮತ್ಕಾರ ನೋಡಿ

by Author2
January 4, 2026
0

ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಶ್ಲೋಕವನ್ನು ನಿತ್ಯ ಪಠಿಸಿ ಚಮತ್ಕಾರ ನೋಡಿ ಪ್ರತಿನಿತ್ಯ ಮುಂಜಾನೆ ಈ ಒಂದು ಶಕ್ತಿಶಾಲಿಯಾದ ಅಂತಹ ನರಸಿಂಹ...

Know the Importance of Chanting Navagraha Mantra on This Auspicious Day

ನವಗ್ರಹ ಮಂತ್ರ ದಿನ ಪಠಿಸುವುದರ ಮಹತ್ವ ತಿಳಿಯಿರಿ

by Saaksha Editor
December 20, 2025
0

ನಮ್ಮ ಜಾತಕದಲ್ಲಿರುವ ನವಗ್ರಹಗಳು ನಮ್ಮ ಜೀವನದಲ್ಲಿ ನಡೆಯುವ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ವಿಷಯಗಳನ್ನು ನಿರ್ಧರಿಸುತ್ತವೆ. ನಾವು ಯಾವುದೇ ದೇವಸ್ಥಾನಕ್ಕೆ (Temple) ಭೇಟಿ ನೀಡಿದರೂ ನವಕೃಷ್ಣರನ್ನು ಪೂಜಿಸುವುದಿಲ್ಲ. ...

Even dull kids can become intelligent chant Saraswati mantra

ಮೂರ್ಖ ಮಕ್ಕಳು ಕೂಡ ವಿದ್ಯಾವಂತರಾಗಲು ಈ ಉಪಾಯ ಮಾಡಿ

by Saaksha Editor
November 10, 2025
0

ಕೆಲವೊಂದು ಬಾರಿ ತರಗತಿಯಲ್ಲಿ ಚೆನ್ನಾಗಿ ಓದುತ್ತಿದ್ದ ಮಕ್ಕಳು ಮಂಕಾಗುತ್ತಾರೆ, ಇನ್ನು ಕೆಲವೊಂದು ಬಾರಿ ತರಗತಿಯಲ್ಲಿ ಕೂತಿದ್ದರು ಸಹ ಮನಸ್ಸು ಮಾತ್ರ ಬೇರೆ ಕಡೆ ಇರುತ್ತದೆ ಮತ್ತು ವಿದ್ಯಾಭ್ಯಾಸದ...

India vs West Indies 2nd Test: Blue Boys Close to Victory Match Highlights

ಭಾರತ-ವಿಂಡೀಸ್‌ 2ನೇ ಟೆಸ್ಟ್‌- ಗೆಲುವಿನ ಸನೀಹದಲ್ಲಿ ಬ್ಲೂ ಬಾಯ್ಸ್‌

by Saaksha Editor
October 13, 2025
0

ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ (Team India) ಗೆಲುವಿನ ಸನೀಹದಲ್ಲಿದೆ. ಪಂದ್ಯ ಐದನೇ ದಿನ  ಟೀಮ್‌ ಇಂಡಿಯಾಗೆ ಬೇಕಾಗಿರೋದು ಕೇವಲ 58 ರನ್‌...

ನವರಾತ್ರಿಯ ನವದಿನಗಳ ಅರ್ಥ ಹಾಗೂ ಮಹತ್ವ ತಿಳಿಯಿರಿ

ನವರಾತ್ರಿಯ ನವದಿನಗಳ ಅರ್ಥ ಹಾಗೂ ಮಹತ್ವ ತಿಳಿಯಿರಿ

by Saaksha Editor
September 26, 2025
0

'ರಾತ್ರಿ' ಎಂದರೆ ಆಗುತ್ತಿರುವ ಬದಲಾವಣೆ. ದೇವಿಯ ಒಂದು ಹೆಸರು ‘ಕಾಲರಾತ್ರಿ’ ಎಂದಾಗಿದೆ. ‘ಕಾಲರಾತ್ರಿ’ ಎಂದರೆ. ಕಾಲಪುರುಷನಲ್ಲಿ ಬದಲಾವಣೆ ಮಾಡುವವಳು. ತಿರುಗುವುದು ಪೃಥ್ವಿಯ ಗುಣಧರ್ಮವಾಗಿದೆ. ಪೃಥ್ವಿಯು ತಿರುಗುತ್ತಿರುವುದರಿಂದ. ಬದಲಾವಣೆಗಳು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram