ADVERTISEMENT
Saturday, February 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಅಂಬಾನಿಗೆ 1 ಲಕ್ಷ ಕೋಟಿ ಲಾಭ ಮಾಡಿಕೊಟ್ಟಿದ್ದೇಕೆ, ಬಿಎಸ್‌ಎನ್‌ಎಲ್ ಕೊಂದಿದ್ದೇಕೆ: ಮೋದಿ ಸರ್ಕಾರದ ವಿರುದ್ಧ ಸಚಿವ ಲಾಡ್ ಕೆಂಡಾಮಂಡಲ

Shwetha by Shwetha
February 21, 2026
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಹುಬ್ಬಳ್ಳಿ: ದೇಶದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಂಸ್ಥೆಯನ್ನು ಮೂಲೆಗುಂಪು ಮಾಡಿ, ಖಾಸಗಿ ಉದ್ಯಮಿ ಅಂಬಾನಿಯವರ ಜಿಯೋ ಸಂಸ್ಥೆಗೆ ಅತೀ ಹೆಚ್ಚು ಲಾಭ ಮಾಡಿಕೊಡಲಾಗಿದೆ ಎಂದು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ನೀತಿ ಮತ್ತು ಕಾರ್ಪೊರೇಟ್ ಪರವಲವುಗಳನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

ಅಂಬಾನಿ ಮತ್ತು ಅದಾನಿ ಪರ ಆಡಳಿತವೇಕೆ

Related posts

ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಅರೆಸ್ಟ್

ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಅರೆಸ್ಟ್

February 21, 2026
ಮೋಸ್ಟ್ ವಾಂಟೆಡ್ ಉಗ್ರನ ಸುಳಿವು ನೀಡಿದರೆ ₹5 ಲಕ್ಷ ಬಹುಮಾನ ಘೋಷಣೆ

ಮೋಸ್ಟ್ ವಾಂಟೆಡ್ ಉಗ್ರನ ಸುಳಿವು ನೀಡಿದರೆ ₹5 ಲಕ್ಷ ಬಹುಮಾನ ಘೋಷಣೆ

February 21, 2026

ಕೇಂದ್ರ ಸರ್ಕಾರವು ದೇಶದ ಹಿತಾಸಕ್ತಿಗಿಂತ ಉದ್ಯಮಿಗಳ ಹಿತಾಸಕ್ತಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಲಾಡ್ ಆರೋಪಿಸಿದರು. ಅಂಬಾನಿಯವರ ಕಂಪನಿಗೆ ಸುಮಾರು 1 ಲಕ್ಷ ಕೋಟಿ ರೂಪಾಯಿ ಲಾಭ ಮಾಡಿಕೊಡಲಾಗಿದೆ. ಆದರೆ, ಅಂಬಾನಿಯವರು ದೇಶಕ್ಕೆ ಏನು ಮಹತ್ತರ ಕೊಡುಗೆ ನೀಡಿದ್ದಾರೆ? ಎಂದು ಪ್ರಶ್ನಿಸಿದರು. 2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಬಿಎಸ್‌ಎನ್‌ಎಲ್ (BSNL) ಸಂಸ್ಥೆಯು ದೇಶದ ಟೆಲಿಕಾಂ ವಲಯದಲ್ಲಿ ಅಗ್ರಸ್ಥಾನದಲ್ಲಿತ್ತು ಮತ್ತು ಸುಮಾರು 35,000 ಟವರ್‌ಗಳನ್ನು ಹೊಂದಿತ್ತು. ಆದರೆ ಜಿಯೋ ಮಾರುಕಟ್ಟೆಗೆ ಬಂದ ನಂತರ ಬಿಎಸ್‌ಎನ್‌ಎಲ್ ಪರಿಸ್ಥಿತಿ ಏನಾಗಿದೆ? ಆ 35 ಸಾವಿರ ಟವರ್‌ಗಳನ್ನು ಅಂಬಾನಿಯವರಿಗೆ ಧಾರೆ ಎರೆಯಲಾಗಿದೆ. ಲಾಭದಾಯಕವಾಗಿದ್ದ ಬಿಎಸ್‌ಎನ್‌ಎಲ್ ಸಂಸ್ಥೆಯನ್ನು ವ್ಯವಸ್ಥಿತವಾಗಿ ಮುಗಿಸಿ, ಜಿಯೋವನ್ನು ಮೊದಲ ಸ್ಥಾನಕ್ಕೆ ತಂದವರು ಯಾರು? ಇದಕ್ಕೆ ಯಾರು ಉತ್ತರ ಕೊಡುತ್ತಾರೆ ಎಂದು ನೇರವಾಗಿ ಪ್ರಶ್ನಿಸಿದರು.

ಫೋಟೋ ಪ್ರಚಾರದಿಂದ ದೇಶಕ್ಕೆ ಏನು ಲಾಭ

ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯ ಬಗ್ಗೆಯೂ ಲಾಡ್ ವ್ಯಂಗ್ಯವಾಡಿದರು. ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಕರೆತಂದು ಫೋಟೋ ತೆಗೆಸಿಕೊಂಡಾಕ್ಷಣ ದೇಶಕ್ಕೆ ಏನು ಲಾಭ ಬಂತು? ಇರಾನ್ ನಿಂದ ತೈಲ ಖರೀದಿಸಬಾರದು, ರಷ್ಯಾದಿಂದ ಆಯಿಲ್ ತರಬಾರದು ಎಂದು ಹೇಳುತ್ತೀರಿ. ಕೇವಲ ಬಾಯಿ ಮಾತಲ್ಲಿ ದೇಶ ಮುಖ್ಯ ಎಂದು ಹೇಳಿದರೆ ಸಾಲದು. ಬೆಳಗ್ಗೆ ಎದ್ದ ತಕ್ಷಣ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿ ಓಡಾಡಿದರೆ ದೇಶದ ಅಭಿವೃದ್ಧಿ ಆಗುವುದಿಲ್ಲ. ವಾಸ್ತವದಲ್ಲಿ ದೇಶದ ಆರ್ಥಿಕತೆಗೆ ಮತ್ತು ಜನಸಾಮಾನ್ಯರಿಗೆ ಏನು ಲಾಭವಾಗಿದೆ ಎಂಬುದನ್ನು ತೋರಿಸಿ ಎಂದು ಕಿಡಿಕಾರಿದರು.

ಬಿಜೆಪಿಯವರ ರೆಸಾರ್ಟ್ ರಾಜಕಾರಣ ಮರೆತಿದ್ದಾರಾ

ರಾಜ್ಯದ ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸಕ್ಕೆ ತೆರಳಿರುವ ಬಗ್ಗೆ ಬಿಜೆಪಿ ನಾಯಕರು ಮಾಡುತ್ತಿರುವ ಟೀಕೆಗಳಿಗೆ ಸಚಿವ ಲಾಡ್ ತಿರುಗೇಟು ನೀಡಿದರು. ನಮ್ಮ ಹತ್ತಿಪ್ಪತ್ತು ಶಾಸಕರು ವಿದೇಶಕ್ಕೆ ಹೋಗಿದ್ದಾರೆ, ಅಲ್ಲಿಗೆ ಹೋಗಿ ಅವರು ರಾಜಕಾರಣ ಮಾಡಲು ಸಾಧ್ಯವೇ? ಅಥವಾ ಅಲ್ಲಿನ ಚುನಾವಣೆಯಲ್ಲಿ ಮತ ಹಾಕಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಶಾಸಕರು ವೈಯಕ್ತಿಕವಾಗಿ ಹೋಗಿದ್ದಾರೋ ಅಥವಾ ಇನ್ಯಾವುದೇ ಕಾರಣಕ್ಕೆ ಹೋಗಿದ್ದಾರೋ ಎಂಬ ಮಾಹಿತಿ ನನಗಿಲ್ಲ. ಆದರೆ, ಬಿಜೆಪಿಗರು ಅಧಿಕಾರದಲ್ಲಿದ್ದಾಗ ಅವರ ಶಾಸಕರು ಎಲ್ಲೆಲ್ಲಿ ಹೋಗಿದ್ದರು, ಯಾವ ರೆಸಾರ್ಟ್ ಗಳಲ್ಲಿ ತಂಗಿದ್ದರು, ಅವರ ಪ್ರವಾಸಗಳು ಹೇಗಿದ್ದವು ಎಂಬುದರ ಬಗ್ಗೆ ನಾವೂ ಪಟ್ಟಿ ಬಿಡುಗಡೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ವಿದೇಶಕ್ಕೆ ಹೋಗಿ ರಾಜ್ಯದ ರಾಜಕಾರಣ ಮಾಡಲು ಬರುವುದಿಲ್ಲ ಎಂಬ ಸಾಮಾನ್ಯ ಜ್ಞಾನ ಟೀಕಿಸುವವರಿಗೆ ಇರಬೇಕು ಎಂದು ಅವರು ಹೇಳಿದರು.

ShareTweetSendShare
Join us on:

Related Posts

ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಅರೆಸ್ಟ್

ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಅರೆಸ್ಟ್

by Shwetha
February 21, 2026
0

ಮುಡಾ (MUDA) ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಡಾ ಮಾಜಿ ಆಯುಕ್ತ ನಟೇಶ್ ಮುಂಬಡ್ತಿ ಪಡೆಯಲು ಹಣ ನೀಡಿರುವುದಾಗಿ ಗಂಭೀರ ಆರೋಪ ಮಾಡಿದ್ದ...

ಮೋಸ್ಟ್ ವಾಂಟೆಡ್ ಉಗ್ರನ ಸುಳಿವು ನೀಡಿದರೆ ₹5 ಲಕ್ಷ ಬಹುಮಾನ ಘೋಷಣೆ

ಮೋಸ್ಟ್ ವಾಂಟೆಡ್ ಉಗ್ರನ ಸುಳಿವು ನೀಡಿದರೆ ₹5 ಲಕ್ಷ ಬಹುಮಾನ ಘೋಷಣೆ

by Shwetha
February 21, 2026
0

ಮೋಸ್ಟ್ ವಾಂಟೆಡ್ ಉಗ್ರ ಶಂಕಿತ ಜುನೈದ್ ಅಹಮದ್‌ ಬಗ್ಗೆ ಸುಳಿವು ನೀಡಿದವರಿಗೆ ₹5 ಲಕ್ಷ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಏಜೆನ್ಸಿ (NIA) ಘೋಷಿಸಿದೆ. ಕಳೆದ ಮೂರು...

ಕಮಿಷನ್ ಚೋರ್ ಸರ್ಕಾರ ಕಾಮ್ ಚೋರ್ ಮಂತ್ರಿಗಳು: ಸಿಎಂ ಸಿದ್ದರಾಮಯ್ಯ ಸಂಪುಟದ ವಿರುದ್ಧ ಆರ್ ಅಶೋಕ್ ಕೆಂಡಾಮಂಡಲ

ಕಮಿಷನ್ ಚೋರ್ ಸರ್ಕಾರ ಕಾಮ್ ಚೋರ್ ಮಂತ್ರಿಗಳು: ಸಿಎಂ ಸಿದ್ದರಾಮಯ್ಯ ಸಂಪುಟದ ವಿರುದ್ಧ ಆರ್ ಅಶೋಕ್ ಕೆಂಡಾಮಂಡಲ

by Shwetha
February 21, 2026
0

ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ...

ಬಾಂಗ್ಲಾ ಮಾತ್ರವಲ್ಲ ಭಾರತದಲ್ಲೂ ಹಿಂದೂಗಳ ಸ್ಥಿತಿ ಭಯಾನಕವಾಗಿದೆ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀಗಳ ಖಡಕ್ ಎಚ್ಚರಿಕೆ

ಬಾಂಗ್ಲಾ ಮಾತ್ರವಲ್ಲ ಭಾರತದಲ್ಲೂ ಹಿಂದೂಗಳ ಸ್ಥಿತಿ ಭಯಾನಕವಾಗಿದೆ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀಗಳ ಖಡಕ್ ಎಚ್ಚರಿಕೆ

by Shwetha
February 21, 2026
0

ಉಡುಪಿ: ನೆರೆಹೊರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ವರದಿಗಳು ಬರುತ್ತಿರುವ ಬೆನ್ನಲ್ಲೇ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಭಾರತದ ವರ್ತಮಾನದ ಸ್ಥಿತಿಗತಿಯ...

ನಕಲಿ ಉತ್ಪನ್ನಗಳಿಗೆ ಬ್ರೇಕ್… KMF ಮಾಸ್ಟರ್ ಪ್ಲಾನ್, ನಂದಿನಿ ಮೇಲೆ QR ಕೋಡ್

ನಕಲಿ ಉತ್ಪನ್ನಗಳಿಗೆ ಬ್ರೇಕ್… KMF ಮಾಸ್ಟರ್ ಪ್ಲಾನ್, ನಂದಿನಿ ಮೇಲೆ QR ಕೋಡ್

by Shwetha
February 21, 2026
0

ನಕಲಿ ಉತ್ಪನ್ನಗಳ ಹಾವಳಿಗೆ ಕಡಿವಾಣ ಹಾಕಲು ಕರ್ನಾಟಕ ಹಾಲು ಮಹಾಸಂಘ (KMF) ಮಹತ್ವದ ಕ್ರಮಕ್ಕೆ ಮುಂದಾಗಿದೆ. ನಂದಿನಿ ಬ್ರಾಂಡ್ ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ QR ಕೋಡ್ ಅಳವಡಿಸುವ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram