ಇಸ್ರೇಲ್-ಇರಾನ್ ನಡುವಿನ ಯುದ್ಧ ಆರಂಭವಾಗಿ ಒಂದು ತಿಂಗಳತ್ತ ಸಾಗುತ್ತಿರುವ ನಡುವೆಯೇ, ಈಗ ಯೆಮನ್ ಕೂಡ ಈ ಸಂಘರ್ಷಕ್ಕೆ ಪ್ರವೇಶಿಸಿದೆ. ಇದೇ ಮೊದಲ ಬಾರಿಗೆ ಯೆಮನ್ನಿಂದ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಈ ದಾಳಿಯನ್ನು ಇಸ್ರೇಲ್ ಅಧಿಕಾರಿಗಳು ಖಚಿತಪಡಿಸಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಯೆಮನ್ನ ಹೌತಿ ಪಡೆಗಳು, ಇರಾನ್ ಮೇಲೆ ದಾಳಿ ಮಾಡಲು ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ಪಡೆಗಳು ಕೆಂಪು ಸಮುದ್ರದಲ್ಲಿ ಚಟುವಟಿಕೆ ನಡೆಸಿದರೆ, ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿವೆ.
ಈ ಬೆಳವಣಿಗೆಯೊಂದಿಗೆ ಮಧ್ಯಪ್ರಾಚ್ಯದ ಯುದ್ಧವು ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದ್ದು, ಜಾಗತಿಕ ಮಟ್ಟದಲ್ಲೂ ಆತಂಕ ಹೆಚ್ಚಿಸಿದೆ.







