ಬೆಂಗಳೂರು ಉಗ್ರರ ತಾಣವಾಗುತ್ತಿದೆ ಎಂಬ ಎಸ್ ಪಿಬಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಇದೀಗ ತೇಜಸ್ವಿ ಸೂರ್ಯ ಹೇಳಿಕೆಯನ್ನ ತೀವ್ರವಾಗಿ ಖಂಡಿಸಿರುವ ಆಮ್ ಆದ್ಮಿ ಪಾರ್ಟಿ ತೇಜಸ್ವಿ ಸೂರ್ಯ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಬೆಂಗಳೂರು ನಗರಕ್ಕೆ ರಾಷ್ಟ್ರೀಯ ಭದ್ರತಾ ದಳದ ಅವಶ್ಯಕತೆ ಖಂಡಿತ ಇದ್ದೇ ಇದೆ.
ಆದರೆ ಇದನ್ನೇ ನೆಪವಾಗಿಟ್ಟುಕೊಂಡು ತಮ್ಮ ರಾಜಕೀಯ ತಂತ್ರಗಾರಿಕೆಗಾಗಿ ಬೆಂಗಳೂರು ಭಯೋತ್ಪಾದಕರ ಅಡಗು ತಾಣವೆಂದು ಬಿಂಬಿಸುತ್ತಿರುವ ಸಂಸದ ತೇಜಸ್ವಿಯವರ ನಕಾರಾತ್ಮಕ ನಡೆ ತೀರಾ ಖಂಡನೀಯ.
ಬಿಜೆಪಿ ಆಡಳಿತವಿರುವ ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ನೀವು ಅಸುರಕ್ಷಿತರೇ?
ಕನ್ನಡಿಗರನ್ನು, ಪೊಲೀಸ್ ವ್ಯವಸ್ಥೆಯನ್ನು ಅವಮಾನಿಸಿರುವ ನೀವು ಕೂಡಲೇ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನೂ ಬೆಂಗಳೂರು ಪೊಲೀಸ್ ಕಮಿಷನರ್ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ನಾಯಕತ್ವದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಇಲಾಖೆಯನ್ನು ನಾವು ಹಾಗೂ ಕರ್ನಾಟಕದ ಜನತೆಗೆ ನಾವು ನಂಬುತ್ತೇವೆ.
ಈ ರಾಜ್ಯ ಮತ್ತು ಜನರನ್ನು ಸುರಕ್ಷಿತವಾಗಿಡುವಲ್ಲಿ ಕರ್ನಾಟಕ ಪೊಲೀಸರು ನಿಷ್ಪಕ್ಷವಾಗಿ ಕೆಲಸ ಮಾಡುತ್ತಿದ್ದಾರೆ, ಮಾಡಿದ್ದಾರೆ.
ನಿಮ್ಮ ಬೇಜವಾಬ್ದಾರಿ ಹೇಳಿಕೆಯಿಂದ ಬೆಂಗಳೂರು ಮತ್ತು ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯನ್ನು ಕಳಂಕಿತಗೊಳಿಸಿದ್ದೀರಿ.
ನಿಮ್ಮ ಅತಿರೇಕದ ಮಾತುಗಳನ್ನು ಖಂಡಿಸುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೇ ಪ್ರತಿ ಬಾರಿಯೂ ಕನ್ನಡಿಗರನ್ನು ಅವಮಾನಿಸುವ ಬಿಜೆಪಿಯವರು ಕನ್ನಡಿಗರನ್ನು ಸುರಕ್ಷಿತವಾಗಿಡಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಬಿಜೆಪಿಯವರು ಇಂತಹ ನಿಕೃಷ್ಟ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದು ಕನ್ನಡಿಗರನ್ನು, ಪೊಲೀಸ್ ವ್ಯವಸ್ಥೆಯನ್ನು ಅವಮಾನಿಸಿರುವ ಸಂಸದ ತೇಜಸ್ವಿ ಸೂರ್ಯ ಅವರ ಕ್ಷಮೆ ಕೋರಲೆ ಬೇಕು ಎಂದು ಒತ್ತಾಯಿಸಿದ್ದಾರೆ.