ಸ್ಯಾಂಡಲ್ ವುಡ್ ಸೇರಿದಂತೆ ಕಾಲಿ, ಬಾಲಿ ಹಾಗೂ ಟಾಲಿವುಡ್ ನಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಕಿಚ್ಚ ಸುದೀಪ್ ಗೆ ಕಪ್ಪು ಚುಕ್ಕೆ ಎದುರಾಗಿದೆ. ಇತ್ತೀಚೆಗೆ “ರಮ್ಮಿ” ಆಟವೊಂದರ ಜಾಹೀರಾತು ವಿನಲ್ಲಿ ಕಾಣಿಸಿಕೊಂಡಿದ್ದು, ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಡಬೇಕಿದ್ದ ನಟರೊಬ್ಬರು ಹೀಗೆ ಜೂಜಾಟ ಜಾಹೀರಾತು ಮೂಲಕ ಪ್ರೋತ್ಸಾಹಿಸುವುದು ಎಷ್ಟು ಸರಿ ಎಂದು ಕನ್ನಡ ಪರ ಸಂಘಟನೆಯೊಂದು ಹೋರಾಟಕ್ಕಿಳಿದಿದೆ. ಹಲವು ನಟರು ತಮ್ಮ ಆದ ರೀತಿಯಲ್ಲಿ ಒಳ್ಳೆಯ ಸಂದೇಶಗಳನ್ನು ನೀಡಿದ್ದಾರೆ. ಆದರೆ ಸುದೀಪ್ ಜೂಜಾಟದ ಸಂದೇಶ ನೀಡುತ್ತಿರುವುದು ತಪ್ಪು ಎಂದು ಸರ್ವ ಸಂಘಟನೆ ಕಾರ್ಯಕರ್ತರು ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದಾರೆ. ಇನ್ನು ಕೂಡಲೇ ಜಾತಿರಾತಿನಿಂದ ಸುದೀಪ್ ಹೊರ ಬರದಿದ್ದರೆ ಮನೆ ಮುಂದೆ ಪ್ರತಿಭಟಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ಕ್ಷಣ ಕ್ಷಣದ ಸುದ್ದಿಯ ಮಾಹಿತಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡಿ








