ADVERTISEMENT
Tuesday, February 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಾಜ್ಯದಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಹೆಚ್ಚಿನ ಆದ್ಯತೆ – ಕೃಷಿ ಸಚಿವ ಬಿ.ಸಿ. ಪಾಟೀಲ್ ಭರವಸೆ

admin by admin
July 15, 2020
in Newsbeat, Samagra karnataka, ರಾಜ್ಯ
Share on FacebookShare on TwitterShare on WhatsappShare on Telegram

ಬೆಂಗಳೂರು,ಜು.15: ಪ್ರಸ್ತುತ ಒಟ್ಟು ಕೃಷಿ ಮತ್ತು ಸಂಬಂಧಿತ ಉತ್ಪನ್ನಗಳಲ್ಲಿ ಕೇವಲ ಶೇಕಡಾ 3-5 ರಷ್ಟು ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಲಾಗುತ್ತಿದ್ದು,2025 ರ ವೇಳೆಗೆ ಅದನ್ನು ಶೇಕಡಾ 25 ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ನಬಾರ್ಡ್ ಹಾಗೂ ಅಸ್ಸೋಚಾಮ್ (ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ) ಆಯೋಜಿಸಿರುವ, “ಕರ್ನಾಟಕ ರಾಜ್ಯದಲ್ಲಿ ಕೃಷಿ ಮತ್ತು ಆಹಾರ ಸಂಸ್ಕರಣಾ ಉದ್ಯಮಗಳ ಮೇಲೆ ಕೋವಿಡ್ -19 ನ ಪರಿಣಾಮಗಳು ಇರುವ ಸವಾಲುಗಳು, ಅವಕಾಶಗಳು ಮತ್ತು ಉತ್ತಮ ಭವಿಷ್ಯಕ್ಕಾಗಿ ಮುಂದಿನ ದಾರಿ” ಎನ್ನುವ ವಿಷಯಾಧಾರಿತ ವೆಬಿನಾರ್ ಉದ್ಘಾಟಿಸಿ ಸಚಿವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮ ನಿರ್ಭರ್ ಯೋಜನೆಗಾಗಿ 10,000 ಕೋಟಿ ರೂ.ಗಳನ್ನು ಆಹಾರ ಸಂಸ್ಕರಣೆಗೆ ಮತ್ತು ಆರ್ಥಿಕ ಕೊರತೆಯನ್ನು ನೀಗಿಸಲು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ನೀಡಿದ್ದಾರೆ.
ಹಲವಾರು ಕೃಷಿ ಸುಧಾರಣೆಗಳನ್ನು ತರುವಲ್ಲಿ ಕರ್ನಾಟಕವು ಮೊದಲರಾಜ್ಯವಾಗಿದ್ದು ಎಪಿಎಂಸಿಗಳಿಗೆ ಇ-ಟ್ರೇಡಿಂಗ್ ಅನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ ಎಂದು ಅವರು ಮಾಹಿತಿ ನೀಡಿದರು.

Related posts

India AI Impact Summit: Prime Minister Narendra Modi visits Jio Pavilion

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ: ಜಿಯೋ ಪೆವಿಲಿಯನ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

February 16, 2026
What is eyesight? Are you suffering from it a lot, and if so, how can you get rid of it?

ಕಣ್ಣುದೃಷ್ಟಿ ಎಂದರೇನು? ಇದರಿಂದ ತುಂಬಾ ಸಮಸ್ಯೇಯಿಂದ ಬಳಲುತ್ತಿದ್ದಿರಾ ಹಾಗಿದ್ದರೆ ಅದರ ನಿವಾರಣೆ ಹೇಗೆ…?

February 16, 2026

ವೈಜ್ಞಾನಿಕ ಸಂಗ್ರಹಣೆ, ಸಂಸ್ಕರಣೆ, ಪ್ಯಾಕೇಜಿಂಗ್, ಬ್ರ್ಯಾಂಡಿಂಗ್, ಮೌಲ್ಯವರ್ಧನೆ ಮತ್ತು ಮಾರ್ಕೆಟಿಂಗ್ ಬಗ್ಗೆ ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳೆರಡೂ ಗಮನಹರಿಸುತ್ತಿದ್ದು ಈ ವೆಬ್‌ನಾರ್ ಅನ್ನು ಸರಿಯಾದ ಸಮಯದಲ್ಲಿ ಆಯೋಜಿಸಿದ್ದಕ್ಕಾಗಿ ಮಾನ್ಯ ಸಚಿವರು ನಬಾರ್ಡ್ ಮತ್ತು ಅಸೋಚಮ್‌ಗೆ ಧನ್ಯವಾದ
ಗಳನ್ನು ಅರ್ಪಿಸಿದರು.
ಕೋವಿಡ್ ಸಮಯದಲ್ಲಿ ರೈತರಿಗೆ ತೊಂದರೆಯಾಗದಿರಲು ಕೃಷಿ ಚಟುವಟಿಕೆಗಳು ಸಮರ್ಪಕವಾಗಿ ನಡೆಯಲು ಹಸಿರು ಪಾಸ್ಗಳನ್ನು ವಿತರಿಸಿ,ಅಗ್ರಿ ವಾರ್ ರೂಮ್ ಪ್ರಾರಂಭಿಸಿ, ಭತ್ತದ ಕೊಯ್ಲು ಯಂತ್ರಗಳು ಸೇರಿದಂತೆ ಕೃಷಿ ಉಪಕರಣಗಳ ಖರೀದಿ ಸರಬರಾಜಿಗೆ ಅನುಕೂಲ ಮಾಡಿಕೊಡಲಾಯಿತು. .ಕೋವಿಡ್ -19 ನಿರ್ಬಂಧಿತ ಲಾಕ್ ಡೌನ್ ಅವಧಿಯಲ್ಲಿ, ಕರ್ನಾಟಕದಲ್ಲಿ ಎಫ್‌ಪಿಒಗಳು ಮತ್ತು ಹಾಪ್‌ಕಾಮ್ಸ್ ಮತ್ತು ಕೆವಿಕೆಗಳನ್ನು ಕೃಷಿ ಮತ್ತು ತೋಟಗಾರಿಕ ಉತ್ಪಾದನೆಗಳ ನೇರ ಮಾರುಕಟ್ಟೆಗಾಗಿ ಬಳಸಿಕೊಳ್ಳಲಾಯಿತು ಮತ್ತು ಗ್ರಾಹಕರಿಗೆ ಅದನ್ನು ಪೂರೈಸಲು ವ್ಯವಸ್ಥೆ ಮಾಡಲಾಯಿತು. ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಮೂವತ್ತು ದಿನಗಳ‌ಪ್ರವಾಸ ಕೈಗೊಂಡು ಆಹಾರ ಸಂಸ್ಕರಣಾ ಘಟಕಗಳು, ಶೀತಲ ಶೇಖರಣಾ ಘಟಕಗಳು ಮತ್ತು ಗೋದಾಮುಗಳು ಮತ್ತು ಕೆಸಿಸಿಗಳು, ಎಫ್‌ಪಿಒಗಳು ಮತ್ತು ಕೆವಿಕೆಗಳ ಮಹತ್ವವನ್ನು ಅರಿತು ಅವುಗಳನ್ನು ಕರ್ನಾಟಕದಲ್ಲಿ ಬಲಪಡಿಸಲು ನಿರ್ಧರಿಸಿದೆ ಎಂದರು.
ರಾಜ್ಯವು ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಾಮರ್ಥ್ಯ ಸುಧಾರಣೆ ಗೋದಾಮುಗಳು ಮತ್ತು ಕೋಲ್ಡ್ ಸ್ಟೋರೇಜ್ಗಳಲ್ಲಿ ಪ್ಯಾಕಿಂಗ್ ಮಾಡುವಂತಹ ಮೌಲ್ಯವರ್ಧಿತ ಸೇವೆಗಳನ್ನು ನೀಡಲು ಚಿಂತನೆ ನಡೆದಿದೆ. ಕರ್ನಾಟಕ ಸರ್ಕಾರವು ಆಹಾರ ಉದ್ಯಾನವನಗಳು ಮತ್ತು ಕೃಷಿ ಉದ್ಯಾನವನಗಳಲ್ಲಿ ಉಗ್ರಾಣ ಮತ್ತು ಲಾಜಿಸ್ಟಿಕ್ ಹಬ್ ಅನ್ನು ಸ್ಥಾಪಿಸಲು ಚಿಂತನೆ ನಡೆಸುತ್ತಿರುವುದಾಗಿ ಕೃಷಿ ಸಚಿವರು ಮಾಹಿತಿ ನೀಡಿದರು.
ಆನ್‌ಲೈನ್ ವ್ಯಾಪಾರ ಮಾರುಕಟ್ಟೆ ವೇದಿಕೆಯೊಂದಿಗೆ ಉಪ ಮಾರುಕಟ್ಟೆಗಳಾಗಿ ಸಾಮಾಗ್ರಿಗಳ ಸಂಗ್ರಹಕ್ಕೆ ಕೋಲ್ಡ್ ಸ್ಟೋರೇಜ್‌ಗಳನ್ನು ನಿರ್ವಹಿಸಲು ಸಿದ್ಧತೆ ನಡೆಸಲಾಗಿದೆ. ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಮಾರಾಟಕ್ಕಾಗಿ ಆನ್‌ಲೈನ್ ವೇದಿಕೆಗೆ ಸಿದ್ಧತೆ ನಡೆದಿದೆ ಎಂದು ವಿವರಿಸಿದರು.

ಈ ವೆಬ್‌ನಾರ್ ಭರವಸೆಯ ಭಾಗವಾಗಿದೆ. ಕರ್ನಾಟಕ ಕೃಷಿ ಉದ್ಯಾನವನಗಳು ಮತ್ತು ಆಹಾರ ಉದ್ಯಾನವನಗಳಲ್ಲಿ ಗೋದಾಮು ಮತ್ತು ಲಾಜಿಸ್ಟಿಕ್ ಹಬ್‌ಗಳನ್ನು ಸ್ಥಾಪಿಸಲು ಸಹಾಯ ಮಾಡುವ ಮೂಲಕ ಅವರು ಕರ್ನಾಟಕಕ್ಕೆ ಅಸೋಚಮ್‌ ಬೆಂಬಲವನ್ನು ನೀಡಲಿದ್ದಾರೆ ಎಂದರು.

ಪ್ರಸಕ್ತ 2020-21ರಲ್ಲಿ ಇನ್ನೂ 100 ಎಫ್‌ಪಿಒಗಳನ್ನು ಸ್ಥಾಪಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸುತ್ತಿದೆ. ಭಾರತದಲ್ಲಿ 10,000 ಎಫ್‌ಪಿಒಗಳನ್ನು ಸ್ಥಾಪಿಸಲು ಭಾರತ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ ಮಾರ್ಗಸೂಚಿಗಳು ಕರ್ನಾಟಕದಲ್ಲಿ ಎಫ್‌ಪಿಒಗಳನ್ನು ಮತ್ತಷ್ಟು ಬಲಪಡಿಸಲಿವೆ.ಎಪಿಎಂಸಿ ಕಾಯ್ದೆಯಲ್ಲಿ ಇತ್ತೀಚೆಗೆ ತರಲಾದ ತಿದ್ದುಪಡಿಯು ಕೃಷಿ ಉದ್ಯಾನವನಗಳು ಮತ್ತು ಆಹಾರ ಉದ್ಯಾನವನಗಳನ್ನು ಖಾಸಗಿ ಮಾರುಕಟ್ಟೆಗಳಾಗಿ ಬಳಸಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ ಮತ್ತು ರೈತರು ಮತ್ತು ಎಫ್‌ಪಿಒಗಳನ್ನು ಕೃಷಿ ಉದ್ಯಾನವನಗಳು ಮತ್ತು ಆಹಾರ ಉದ್ಯಾನವನಗಳೊಂದಿಗೆ ಸಂಪರ್ಕಿಸಬಹುದು.ಇದರಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆಗಳು ಮತ್ತು ಪೂರೈಕೆ ಸಿಗುತ್ತದೆ .
ಕೆಪೆಕ್ (ಕರ್ನಾಟಕ ರಾಜ್ಯ ಕೃಷಿ ಉತ್ಪಾದನಾ ಸಂಸ್ಕರಣೆ ಮತ್ತು ರಫ್ತು ನಿಗಮ) ದ ಅಧ್ಯಕ್ಷರೂ ಆಗಿರುವ ಅವರು, ಕೆಪೆಕ್ ಪ್ರಗತಿಯನ್ನು ಪರಿಶೀಲಿಸಿದ್ದು ರಾಜ್ಯದಲ್ಲಿ ಕೆಪೆಕ್‌ನ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳ ಒಳಗೆ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.

ಎಂಎಸ್‌ಎಂಇಗಳು ಮತ್ತು ಕೃಷಿ ಮೂಲಸೌಕರ್ಯಗಳನ್ನು ಬಲಪಡಿಸಲು ವಿಶೇಷವಾಗಿ ಒದಗಿಸಲಾಗಿರುವ ಆತ್ಮ ನಿರ್ಭರ್ ಅಭಿಯಾನದಲ್ಲಿ ಲಭ್ಯವಿರುವ ಹಣವನ್ನು ಬಳಸಿಕೊಳ್ಳಬಹುದು. ಅಗ್ರಿ ಪಾರ್ಕ್ , ಫುಡ್ ಪಾರ್ಕ್ ಸಮುದ್ರ ಆಹಾರ ಉದ್ಯಾನಗಳು, ಅಕ್ಕಿ ಮತ್ತು ಮೆಕ್ಕೆ ಜೋಳದ ತಂತ್ರಜ್ಞಾನ ಉದ್ಯಾನಗಳು, ಶೀತಲ ಶೇಖರಣಾ ಘಟಕಗಳು, ಗೋದಾಮುಗಳು, ಕೃಷಿ ಲಾಜಿಸ್ಟಿಕ್ ಹಬ್‌ಗಳು, ಲಾಜಿಸ್ಟಿಕ್ ಉದ್ಯಾನವನಗಳು, ಸರ್ಕಾರವನ್ನು ಸ್ಥಾಪಿಸಲು ಕರ್ನಾಟಕದ ಮೂಲಸೌಕರ್ಯ ಯೋಜನೆಗಳಿಗೆ ಹಣವನ್ನು ಬಳಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕೃಷಿ ಸಚಿವರು ಸ್ಪಷ್ಟಪಡಿಸಿದರು.

ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಸಿಇಒ ಅಶೋಕ್ ದಳವಾಯಿ ಮಾತನಾಡಿ,ರೈತರ ಆದಾಯ ಹೆಚ್ಚಳಕ್ಕೆ ರೈತರಿಗೆ ಉತ್ಪನ್ನಗಳನ್ನಿ ಮಾರಾಟ ಮಾಡಲು ಅವಕಾಶ ನೀಡಬೇಕು. ಗ್ರಾಹಕ ಅಥವಾ ಗ್ರಾಹಕರು ಬಯಸಿದ ರೀತಿ, ಮುಕ್ತ ಮಾರುಕಟ್ಟೆ ಒದಗಿಸಿ ಮತ್ತು ರೈತರನ್ನು ಬಲಪಡಿಸಬೇಕು.ಎಲ್ಲಾ ಇಲಾಖೆಗಳು ಮತ್ತು ಮಾರ್ಕೆಟಿಂಗ್ ಸಂಸ್ಥೆಗಳನ್ನು ಸಂಯೋಜಿಸಬೇಕು ಎಂದರು.
ವೆಬಿನಾರ್‌ನಲ್ಲಿ ಕರ್ನಾಟಕ ಪ್ರಾದೇಶಿಕ ಕಚೇರಿ ಮುಖ್ಯಸ್ಥ ನೀರಜ್ ಕುಮಾರ್ ವರ್ಮಾ,ಕರ್ನಾಟಕ ಅಸೋಚಮ್ ಮುಖ್ಯಸ್ಥ ಬಿ.ವಿ.ನಾಯ್ಡು, ಪ್ರಮುಖರಾದ ಕೃಷ್ಣಕುಮಾರ್ ಜೋಷಿ,ಪ್ರಮೋದ್ ಹಳ್ದೆ,ಡಾ.ಸುರೇಶ್ ಕುಮಾರ್ ಕೆ.ಬಿ, ಶಿವಾನಂದ ರೈ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Tags: Agriculture MinisterASSOCHAMASSOCHAM WebinarB C Patilpm narendra modi
ShareTweetSendShare
Join us on:

Related Posts

India AI Impact Summit: Prime Minister Narendra Modi visits Jio Pavilion

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ: ಜಿಯೋ ಪೆವಿಲಿಯನ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

by admin
February 16, 2026
0

• ಆಕಾಶ್ ಅಂಬಾನಿ ಅವರು ಜಿಯೋದ ಎಐ ಪರಿಸರ ವ್ಯವಸ್ಥೆಯ ಬಗ್ಗೆ ಪ್ರಧಾನಮಂತ್ರಿಯವರಿಗೆ ವಿವರಿಸಿದರು • ಜಿಯೋ ಇಂಟೆಲಿಜೆನ್ಸ್ ನಿಂದ ಜಿಯೋ ಆರೋಗ್ಯ ಎಐ ವರೆಗಿನ ಅನೇಕ...

What is eyesight? Are you suffering from it a lot, and if so, how can you get rid of it?

ಕಣ್ಣುದೃಷ್ಟಿ ಎಂದರೇನು? ಇದರಿಂದ ತುಂಬಾ ಸಮಸ್ಯೇಯಿಂದ ಬಳಲುತ್ತಿದ್ದಿರಾ ಹಾಗಿದ್ದರೆ ಅದರ ನಿವಾರಣೆ ಹೇಗೆ…?

by admin
February 16, 2026
0

ಶ್ರೀ ಕಟೀಲು ದುರ್ಗಪರಮೇಶ್ವರೀ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ...

If you cut your nail and place it here, it will bring you money and also ward off the evil eye.

ಉಗುರನ್ನು ಕತ್ತರಿಸಿ ಇಲ್ಲಿ ಹಾಕಿದರೆ ಹಣದ ಮಳೆಯ ಜೊತೆಗೆ ಕೆಟ್ಟ ದೃಷ್ಟಿಯು ಕೂಡ ದೂರವಾಗುತ್ತದೆ..

by admin
February 16, 2026
0

ಇದರಲ್ಲಿ ನಿಮ್ಮ ಬೆರಳಿನ ಉಗುರನ್ನು ಕತ್ತರಿಸಿ ಹಾಕಿ ಪವಾಡ ನೋಡಿ ಇದರ ಬಗ್ಗೆ ಕನಸಿನಲ್ಲೂ ಕಲ್ಪನೆ ಮಾಡಲು ಸಾಧ್ಯವಿಲ್ಲ ಯಾವುದೇ ಕೈಯಲ್ಲಿರುವ ಬೆರಳುಗಳು ಒಂದೇ ರೀತಿ ಇಲ್ಲ,...

ishan kishan

ಶ್ರೀಲಂಕಾದಲ್ಲಿ ಹರ ಹರ ಮಹದೇವ..! ಭಾರತದಲ್ಲಿ ಓಂ ನಮಃ ಶಿವಾಯಃ..! ಪಾಕಿಸ್ತಾನದಲ್ಲಿ ಓಂ ಶಾಂತಿಃ ಶಾಂತಿಃ..ಶಾಂತಿಃ..!

by admin
February 16, 2026
0

ಶ್ರೀಲಂಕಾದಲ್ಲಿ ಹರ ಹರ ಮಹದೇವ..! ಭಾರತದಲ್ಲಿ ಓಂ ನಮಃ ಶಿವಾಯಃ..! ಪಾಕಿಸ್ತಾನದಲ್ಲಿ ಓಂ ಶಾಂತಿಃ ಶಾಂತಿಃ..ಶಾಂತಿಃ..! ಇದೆಂಥಾ ಕಾಕತಾಳೀಯ.. ಹೇಳಿ ಕೇಳಿ.. ಶ್ರೀಲಂಕಾ ಹರ ಹರ ಮಹದೇವನ...

ಸಾರಿಗೆ ಪ್ರಯಾಣಿಕರಿಗೆ ಮತ್ತೊಂದು ಬರೆ: ಕೆಎಸ್ಆರ್‌ಟಿಸಿ ಲಗೇಜ್ ದರ ದಿಢೀರ್ ಏರಿಕೆ ಇಂದಿನಿಂದ ಜಾರಿ

ಸಾರಿಗೆ ಪ್ರಯಾಣಿಕರಿಗೆ ಮತ್ತೊಂದು ಬರೆ: ಕೆಎಸ್ಆರ್‌ಟಿಸಿ ಲಗೇಜ್ ದರ ದಿಢೀರ್ ಏರಿಕೆ ಇಂದಿನಿಂದ ಜಾರಿ

by Shwetha
February 16, 2026
0

ಬೆಂಗಳೂರು: ರಾಜ್ಯದ ಜನತೆಗೆ ಸಾರಿಗೆ ಇಲಾಖೆ ಮತ್ತೊಂದು ಶಾಕ್ ನೀಡಿದೆ. ಸಾರಿಗೆ ಬಸ್ ಪ್ರಯಾಣಿಕರಿಗೆ ಮತ್ತು ಪಾರ್ಸೆಲ್ ಸೇವೆ ಬಳಸುವವರಿಗೆ ದಿಢೀರ್ ಹೊರೆ ಎನ್ನುವಂತೆ, ಕರ್ನಾಟಕ ರಾಜ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram