ಬಳ್ಳಾರಿ: ಪರೀಕ್ಷೆಗೆಂದು ಮನೆಯ ಅಂಗಳದಲ್ಲಿ ಓದುತ್ತಿದ್ದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಮ್ ಚವ್ಹಾಣನನ್ನು ಪೊಲೀಸರು ಬಂಧಿಸಿದ್ದಾರೆ. ಕಮಲಾಪುರ ಹೊನಬಟ್ಟಿ ತಾಂಡದಲ್ಲಿ ಬಾಲಕಿ ಮನೆಯ ಹೊರಗೆ ಕುಳಿತು ತಡರಾತ್ರಿವರೆಗೂ ಓದಿಕೊಳ್ಳುತ್ತಿದ್ದಳು. ಈ ವೇಳೆ ಬಂದ ಆರೋಪಿ ರಾಮ್, ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ರಕ್ಷಣೆಗಾಗಿ ಕಿರುಚಿಕೊಂಡಾಗ ನೆರೆಮನೆಯವರು ಬಂದು ಬಾಲಕಿಯನ್ನು ರಕ್ಷಿಸಿದ್ದಾರೆ. ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀವನದಲ್ಲಿ ಮನಸ್ಸಿಗೆ ಶಾಂತಿ ಇಲ್ಲ ಎಂದು ಹೇಳುವವರು ಈ ಕಥೆಯನ್ನು ಓದಿ, ಶಾಂತಿ ಎಲ್ಲಿ ಸಿಗುತ್ತದೆ ಎಂದು ನಿಮಗೆ ತಿಳಿಯುತ್ತದೆ.
ಮನಸ್ಸಿನ ಶಾಂತಿಗೆ ದಾರಿ ಜೀವನದಲ್ಲಿ ಮನಸ್ಸಿನ ಶಾಂತಿಯನ್ನು ಹುಡುಕುತ್ತಾ ಅಲೆದಾಡುವ ಅನೇಕ ಜನರು ನಮ್ಮ ನಡುವೆ ಇದ್ದಾರೆ. ಮನಸ್ಸಿನ ಶಾಂತಿ ಎಲ್ಲಿದೆ? ಒಬ್ಬ ಋಷಿ ತನ್ನ ಶಿಷ್ಯನಿಗೆ...








