ರಾರಾ ಕ್ಷೇತ್ರದಲ್ಲಿ ಸಿಎಂ ರೋಡ್ ಶೋ ( B S Yeddyurappa campaigning ) : ದಡ್ಡು ಮುಟ್ಟಿಲ್ಲ, ಆಣೆ ಮಾಡ್ತೀನಿ ಎಂದ ಮುನಿರತ್ನ
ಬೆಂಗಳೂರು : ರಾಜರಾಜೇಶ್ವರಿ ಕ್ಷೇತ್ರದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಬಿಎಸ್ ವೈ ರೋಡ್ ಶೋ ( ( B S Yeddyurappa campaigning ) ಮೂಲಕ ಮತಬೇಟೆ ನಡೆಸುತ್ತಿದ್ದಾರೆ.
ಈ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಮುನಿರತ್ನ ಅವರನ್ನು 50-60 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು.
ಯಾವ ಕಾರಣಕ್ಕೂ ಶೇ. 70ಕ್ಕಿಂತ ಕಡಿಮೆ ಮತದಾನ ಆಗಬಾರದು. ಮುನಿರತ್ನರನ್ನು ಸಚಿವರನ್ನಾಗಿ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು.
ನಾವು ಜಾತಿ, ಕುಲ, ಗೋತ್ರ ಯಾವುದನ್ನೂ ನೋಡಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತರು ಅಂತ ಭೇದ ಭಾವ ಮಾಡಿಲ್ಲ. ಮುನಿರತ್ನ ಬಗ್ಗೆ ನಾವು ಏನೂ ಹೇಳಬೇಕಾಗಿಲ್ಲ.
ಅವರ ಕೆಲಸ ಏನು ಅಂತ ಎಲ್ಲರಿಗೂ ಗೊತ್ತಿದೆ ಎಂದ ಸಿಎಂ, ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಮನೆ ಇಲ್ಲದವರಿಗೆ ಮನೆ ಕಟ್ಟಿಸಿಕೊಡುವ ಜವಾಬ್ದಾರಿ ನನ್ನ ಹಾಗೂ ಮುನಿರತ್ನ ಮೇಲಿದೆ ಎಂದರು.
ಮುಖ್ಯಮಂತ್ರಿಗಳ ಬಳಿಕ ಬಿಜೆಪಿ ಅಭ್ಯರ್ಥಿ ಮುನಿರತ್ನ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಜತೆ ಸಿಎಂ ಬಿ.ಎಸ್.ಯಡಿಯೂರಪ್ಪ ನಮ್ಮ ಜೊತೆ ಸದಾ ಇರ್ತಾರೆ.
ಇದನ್ನೂ ಓದಿ : ಕಾರ್ಯಕರ್ತರಿಗಾಗಿ ಚಾಯ್ ವಾಲಾ ಆದ ಜಮೀರ್
ಮೈಸೂರು ರಸ್ತೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ತರುವ ಕನಸು ನನ್ನದು. ಈ ಕನಸಿಗೆ ಬಜೆಟ್ ನಲ್ಲಿ ಹಣ ಇಟ್ಟಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ ಮುನಿರತ್ನ, ಕ್ಷೇತ್ರದ ನೆಮ್ಮದಿ ಕೆಡಿಸೋದು ಬೇಡ. ಕ್ಷೇತ್ರದ ನೆಮ್ಮದಿಯ ವಾತಾವರಣ ಹೀಗೇ ಇರಲಿ.
ಡಿಜೆ, ಕೆಜಿ ಹಳ್ಳಿ ಪರಿಸ್ಥಿತಿ ನಮಗೆ ಆಗೋದು ಬೇಡ. ಅಲ್ಲಿ ಗಲಭೆ ಖಂಡಿಸಲು ಒಬ್ಬ ಕಾಂಗ್ರೆಸ್ ನಾಯಕ ಇಲ್ಲ ಎಂದು ಛೇಡಿಸಿದರು.
ಮುನಿರತ್ನ ಹಣ ಪಡೆದು ಬಿಜೆಪಿಗೆ ಸೇರಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ನನ್ನ ಬಗ್ಗೆ ಕೋಟಿ ಕೋಟಿ ಹಣ ಪಡೆದಿರುವ ಅಪಪ್ರಚಾರ ಮಾಡ್ತಿದ್ದಾರೆ.
ಅಪಪ್ರಚಾರ ಮಾಡೋರು ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಬರಲಿ. ನಾನೂ ಬರ್ತೀನಿ, ಪ್ರಮಾಣ ಮಾಡ್ತೀನಿ ನಾನು. ನಾನು ದುಡ್ಡು ತಗೊಂಡಿದ್ರೆ ಸರ್ವನಾಶ ಆಗಿ ಹೋಗಲಿ.
ನಾನು ದುಡ್ಡಿಗಾಗಿ ಬಿಜೆಪಿಗೆ ಬಂದಿದ್ರೆ ನನ್ನ ಜೊತೆ 16 ಜನ ಯಾಕೆ ಬರ್ತಿದ್ರು ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ನೀವು ಸರಿ ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ : ಕಾಂಗ್ರೆಸ್ ಗೆ ಮುನಿರತ್ನ ಟಾಂಗ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel