ನನ್ನನ್ನು ಮುಗಿಸಲು ವಿಜಯಪುರದಿಂದ ಬೆಂಗಳೂರಿನವರೆಗೆ ಕಾಯ್ತಿದ್ದಾರೆ : ಯತ್ನಾಳ್
ವಿಜಯಪುರ : ವಿಜಯಪುರದಿಂದ ಬೆಂಗಳೂರಿನವರೆಗೆ ನನ್ನ ಮುಗಿಸಿ ಬಿಡಬೇಕು ಅಂತಾ ಬಹಳ ಜನ ಕಾಯ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದ ಹೊರವಲಯದಲ್ಲಿ ನಡೆದ ಆಶ್ರಯ ಮನೆ ನಿರ್ಮಾಣ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಯತ್ನಾಳ್, ನಾನು ಮತ್ತು ಸೋಮಣ್ಣ ಬಹಳ ಆತ್ಮೀಯರು.
ಹಿಂದೆ ಜಗಳ ಆಡಿದ್ವಿ, ಈಗ ಒಂದಾಗಿದ್ದೇವೆ. ನಾವೆಲ್ಲ ಒಂದೇ ಕುಟುಂಬದವರು.
ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಜಗಳ ಆಗಿತ್ತು. ಈಗ ಎಲ್ಲವೂ ಒಳ್ಳೆಯದಾಗಿದೆ. ಆದರೂ ಕೆಲವರು ನನ್ನನ್ನು ಮುಗಿಸಬೇಕೆಂದು ಕುಂತಿದ್ದಾರೆ.
ವಿಜಯಪುರದಿಂದ ಬೆಂಗಳೂರಿನವರೆಗೆ ನನ್ನ ಮುಗಿಸಿ ಬಿಡಬೇಕು ಅಂತಾ ಬಹಳ ಜನ ಇದ್ದಾರೆ.
ಶಾಸಕ ಸಿದ್ದು ಸವದಿ ಅಸಭ್ಯ ವರ್ತನೆ: ಡಿಕೆಶಿ ಹೇಳಿದ್ದೇನು..?
ಆದ್ರೆ ಯತ್ನಾಳರನ್ನು ಮುಗಿಸೋಕೆ ಆಗೊಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ನನ್ನ ಹೊಡೆತಕ್ಕೆ 10 ಕಾರ್ಪೊರೇಷನ್ ಗಳಿಗೆ ಹಣ ಬಂದಿದೆ.
ನಾನು ಮಾತನಾಡಿದ್ದರಿಂದಲೇ ಒಂದಲ್ಲ 10 ಕಾರ್ಪೊರೇಷನ್ ಗಳಿಗೆ ಹಣ ಸಿಕ್ಕಿದೆ ಎಂದು ಪರೋಕ್ಷವಾಗಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ವೇಳೆ ಪಟಾಕಿ ನಿಷೇಧ ಬಗ್ಗೆ ಮಾತನಾಡಿ, ಕೇವಲ ಹಿಂದೂಗಳ ಹಬ್ಬ ಬಂದಾಗ ಮಾತ್ರ ಇಂಥ ನಿಷೇಧಗಳು ನೆನಪಿಗೆ ಬರುತ್ತವೆ.
‘ಬಂಡೆ’ ಪುಡಿಯಾಗಿದೆ, ‘ಹುಲಿಯಾ’ ಗೂಡು ಸೇರಿದೆ : ಕಟೀಲ್
ದಸರಾ, ದೀಪಾವಳಿಯಲ್ಲಿ ಕೊರೊನಾ ನೆಪ ಹೇಳಿ ಸರ್ಕಾರ ಪಟಾಕಿ ನಿಷೇಧ ಮಾಡುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಗರಂ ಆದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel