ಟಾಲಿವುಡ್ ಮೆಗಾ ರಾಯುಡು ಚಿರಂಜೀವಿ ಸಹೋದರ ನಾಗಬಾಬು ಸದಾ ಸಾಮಾಜಿಕ ಜಾಲತಾಲಗಳಲ್ಲಿ ಆಕ್ಟೀವ್ ಆಗಿರುತ್ತಾರೆ. ಕೆಲ ದಿನಗಳಿಂದ ಹಿಂದೆ ನಟಸಿಂಹ ಬಾಲಕೃಷ್ಣಗೆ ಟ್ವಿಟ್ಟರ್ ನಲ್ಲಿ ಟಾಂಗ್ ಕೊಟ್ಟು ಸುದ್ದಿಯಾಗಿದ್ದ ನಾಗಬಾಬು ಇದೀಗ ಮತ್ತೆ ಸುದ್ದಿಯಾಗಿದ್ದಾರೆ.
ಸೋಶಿಯಲ್ ಮಿಡಿಯಾದಲ್ಲಿ ಸದಾ ಒಂದಿಲ್ಲೊಂದು ವಿಚಾರಕ್ಕೆ ಟ್ವೀಟ್ ಮಾಡಿ ಸುದ್ದಿಯಲ್ಲಿರುವ ಮೆಗಾ ಬ್ರದರ್ ಈಗ ‘ಹಿಂದುವಾಗಿ ಹುಟ್ಟುದಕ್ಕಿಂತಲೂ ಕತ್ತೆಯಾಗಿ ಹುಟ್ಟಬಹುದಿತ್ತು’ ಎಂದಿದ್ದಾರೆ. ಆದ್ರೆ ಇಲ್ಲಿ ಅವರು ಹಿಂದು ಧರ್ಮವನ್ನು ಟೀಕಿಸಿಲ್ಲ. ಬದಲಾಗಿ ಕಾಶ್ಮೀರ ಪಂಡಿತ್ ಅಜಯ್ ಹತ್ಯೆ ಪ್ರಕರಣ ಬಗ್ಗೆ ಮಾತನಾಡಿದ್ದಾರೆ.
ನಾಗಬಾಬು ಅವರ ಟ್ವೀಟ್ ನಲ್ಲಿ.. ಕಾಶ್ಮೀರ ಪಂಡಿತ್ ಅಜಯ್ ಹತ್ಯೆ ಬಗ್ಗೆ ನನಗೆ ನಿನ್ನೆ ತಿಳಿಯಿತು. ಕಾಶ್ಮೀರದಲ್ಲಿ ಒಬ್ಬ ಹಿಂದು ಪಂಡಿತ್ ಅಜಯ್ ಎಂಬುವವರನ್ನ ಸಾಯಿಸಿದ್ದಾರೆಂದು. ಪರವಾಗಿಲ್ಲ ಕೊಂದಿರುವುದು ಹಿಂದು ಪಂಡಿತರನ್ನಲ್ಲವಾ ಏನು ತೊಂದರೆ ಇಲ್ಲ, ನಾವೇನು ಬೇಜಾರು ಮಾಡಿಕೊಳ್ಳುವುದು ಬೇಡ. ಘಟನೆ ನಡೆದಿರುವುದು ದೂರದ ಕಾಶ್ಮೀರದಲ್ಲಿ ತಾನೆ. ಅಲ್ಲೆಲ್ಲೋ ಕಪ್ಪು ವರ್ಣೀಯನನ್ನು ಕೊಂದರೆ ನಮ್ಮ ಭಾರತೀಯರಿಗೆ ಕೋಪ ಬರುತ್ತದೆ. ಆದರೆ ಭಾರತೀಯನೊಬ್ಬನನ್ನು ಕೊಂದರೆ ಜಾತ್ಯಾತೀತವಾದಿಗಳು ಸ್ಪಂದಿಸುವುದಿಲ್ಲ. ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಸುದ್ದಿಯನ್ನು ಕವರ್ ಮಾಡುವುದಿಲ್ಲ. ಹಿಂದು ಸಂಸ್ಥೆಗಳಿಗಾದರೂ ಈ ಬಗ್ಗೆ ಜವಾಬ್ದಾರಿ ಇರಬೇಕಿತ್ತು. ನಮ್ಮ ರಕ್ತ ಹೆಪ್ಪುಗಟ್ಟೋಗಿದೆ. ಈ ದೇಶದಲ್ಲಿ ‘ಹಿಂದುವಾಗಿ ಹುಟ್ಟುವ ಬದಲು ಕತ್ತೆಯಾಗಿ ಹುಟ್ಟುಬಹುದಿತ್ತು’ ಎಂದು ಯಾರೋ ಮಹಾನುಭಾವ ಹೇಳಿದ ಮಾತು ನಿಜ ಎನಿಸುತ್ತದೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮುಂದುವರಿದು ಅಜಯ್ ಹತ್ಯೆಗೆ ಕಾರಣರಾದವರನ್ನು ಬಂಧಿಸಿ ಶಿಕ್ಷಿಸಬೇಕೆಂದಿರುವ ನಾಗಬಾಬು, ಹಿಂದುತ್ವ, ಹಿಂದು ಸಂಸ್ಕೃತಿಯನ್ನು ಉಳಿಸೋಣ ಎಂದು ಕರೆ ನೀಡಿದ್ದಾರೆ. ಹಾಗೇ ಮೋದಿ ಅವರಿಗೆ ಮನವಿ ಸಹ ಮಾಡಿದ್ದು, ಎಲ್ಲಾ ಧರ್ಮಗಳಿಗೆ ಸಮಾನ ಹಕ್ಕು, ಸಮಾನ ನಿಯಮಗಳನ್ನು ರೂಪಿಸಿ, ಮತಬ್ಯಾಂಕ್ ರಾಜಕಾರಣ ಬೇಡ ಎಂದಿದ್ದಾರೆ.