ತಮ್ಮ ಹಾಟ್ ಲುಕ್ ಹಾಗೂ ಗ್ಲಾಮರ್ ನಿಂದಲೇ ಲಕ್ಷಾಂತರ ಅಭಿಮಾನಿಗಳ ನಿದ್ದೆಗೆಡಿಸಿರುವ ಬಾಲಿವುಡ್ನ ಬಾರ್ಬಿ ಡಾಲ್ ನಟಿ ಕತ್ರೀನಾ ಕೈಫ್ ಗೆ ಇಂದು 37 ನೇ ಹುಟ್ಟುಹಬ್ಬದ ಸಂಭ್ರಮ. ಬಾಲಿವುಡ್ ಟಾಪ್ ನಟಿಯರಲ್ಲಿ ಒಬ್ಬರೆನಿಸಿಕೊಂಡಿರುವ ಬ್ಯೂಟಿ ಕ್ವೀನ್ ಕತ್ರೀನಾ ಜನ್ಮದಿನಕ್ಕೆ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳ ಮೂಲಕ ಶುಭಾಷಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಇನ್ನೂ ಅನೇಕ ನಟರು ಸಹ ಕ್ಯಾಟ್ ಬರ್ತ್ಡೆಗೆ ವಿಷ್ ಮಾಡಿದ್ದಾರೆ.
ಕತ್ರೀನಾ ಅವರ ತಂದೆ ಮೊಹಮ್ಮದ್ ಕೈಫ್, ತಾಯಿ ಸುಜೇನ್, ಇವರಿಗೆ 3 ಜನ ಅಕ್ಕಂದಿರಿದ್ದಾರೆ ( ಸ್ಟೆಪ್ ಹೇನ್, ಕ್ರಿಸ್ಟೀನ್, ನತಾಶಾ), ಮೂವರು ತಂಗಿಯರಿದ್ದಾರೆ ( ಮೆಲಿಸ್ಸಾ, ಇಸಾಬೆಲ್, ಸೋನಿಯಾ) ಹಾಗೂ ಇವರ ಅಣ್ಣ ಮೈಕಲ್. ಇನ್ನೂ ಕತ್ರೀನಾ ಅವರ ತಂಗಿ ಇಸಾಬೆಲ್ ಸಹ ಮಾಡಲ್ ಹಾಗೂ ನಟಿಯಾಗಿದ್ದಾರೆ. ಕತ್ರಿನಾ ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಅವರ ತಂದೆ ಹಾಗೂ ತಾಯಿ ಡಿವೋರ್ಸ್ ಪಡೆದುಕೊಂಡಿದ್ದರು. ಆದ್ರೆ ಈ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಕತ್ರೀನಾ – “ನಾನೂ ಈ ವಿಚಾರವಾಗಿ ಎಂದಿಗೂ ಬೇಸರಗೊಂಡಿಲ್ಲ. ನನಗೆ ಜೀವನದಲ್ಲಿ ತುಂಬಾ ಬೆಂಬಲಿಸುವ ಸ್ನೇಹಿತರು ಹಾಗೂ ಹಿತೈಶಿಗಳಿದ್ದಾರೆ. ಸದಾ ಇಲ್ಲದೇ ಇರುವುದರ ಬಗ್ಗೆ ಯೋಚಿಸಿ ಕೊರಗುವುದಕ್ಕಿಂತ ನಮ್ಮ ಬಳಿ ಇರುವುದರ ಬಗ್ಗೆ ಸಂತೋಷ ಪಡಬೇಕು” ಎಂದು ಹೇಳಿಕೊಂಡಿದ್ದರು.
ಮೂಲತಹ ಬ್ರಿಟನ್ ನವರಾದ ಕತ್ರೀನಾರ ಮೂಲ ಹೆಸರು ಕತ್ರೀನಾ ತುರ್ಖೋಟ್. ಇಂಗ್ಲಿಷ್ ನಟಿಯಾದರು ಬಾಲಿವುಡ್ ನಲ್ಲಿ ತಮ್ಮ ಆಕ್ಟಿಂಗ್ ಕೆರಿಯರ್ ಪ್ರಾರಂಭಿಸಿದರು. 2003ರಲ್ಲಿ ತೆರೆಕಂಡ ಬೂಮ್ ಚಿತ್ರದ ಮೂಲಕ ಕತ್ರೀನಾ ಬಾಲಿವುಡ್ ಗೆ ಎಂಟ್ರಿಕೊಟ್ಟರು. ಲಂಡನ್ ನಲ್ಲಿ ಕತ್ರೀನಾ ಕೈಫ್ ರನ್ನ ಫ್ಯಾಷನ್ ಶೋ ಒಂದರಲ್ಲಿ ನೋಡಿದ್ದ ಫಿಲ್ಮ್ ಮೇಕರ್ ಕೈಝದ್ ಗುಸ್ತಾದ್ ಅವರು ಈ ಚಿತ್ರಕ್ಕೆ ಕತ್ರೀನಾರನ್ನು ಕಾಸ್ಟ್ ಮಾಡಿದ್ರು. ಆದ್ರೆ ಆ ಚಿತ್ರ ಅಷ್ಟರ ಮಟ್ಟಿಗೆ ಹೆಸರು ಗಳಿಸಿಕೊಟ್ಟಿರಲಿಲ್ಲ. ಅಲ್ದೇ ಹಿಂದಿ ಭಾಷೆ ಸರಿಯಾಗಿ ಮಾತನಾಡಲು ಬಾರದ ಕಾರಣಕ್ಕೆ ಕತ್ರೀನಾ ಅವರನ್ನು ಕಾಸ್ಟ್ ಮಾಡಲು ಅನೇಕ ನಿರ್ಮಾಪಕರು ಹಿಂದೇಟು ಹಾಕಿದ್ರು. ಆದ್ರೆ ಕತ್ರಿನಾ ತೆಲುಗಿನ ಮಲ್ಲೇಶ್ವರಿ ಚಿತ್ರದಲ್ಲಿ ನಟಿಸಿದ ಬಳಿಕ ಬಾಲಿವುಡ್ ನಲ್ಲಿ ಅವರಿಗೆ ಅನೇಕ ಆಫರ್ ಗಳು ಹುಡುಕಿಕೊಂಡು ಬಂದವು. ಬಳಿಕ ಮೇನೆ ಪ್ಯಾರ್ ಕ್ಯೂ ಕಿಯಾ, ನಮಸ್ತೇ ಲಂಡನ್ ಹೀಗೆ ಹಲವಾರು ಬಾಕ್ಸ್ ಆಫೀಸ್ ಹಿಟ್ ಚಿತ್ರಗಳಲ್ಲಿ ನಟಿಸಿ ಕತ್ರಿನಾ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ರು.
ಬಾಲಿವುಡ್ ಚಿತ್ರರಂಗದಲ್ಲಿ ಗುರುತಿಸಿಕೊಂಡು ಸಾಕಷ್ಟು ಹೆಸರು ಮಾಡಿರುವ ಕತ್ರೀನಾ ಮಲಯಾಳಂನಲ್ಲೂ ನಟಿಸಿದ್ದಾರೆ. ಐವಿ ಶವಿ ಆಕ್ಷನ್ ಕಟ್ ಹೇಳಿದ್ದ ಬಲರಾಂ/ ತೊಡರ್ದಾಸ್ ಚಿತ್ರದಲ್ಲಿ ಸುಪ್ರಿಯಾ ಮೆನನ್ ಪಾತ್ರದಲ್ಲಿ ಅಭಿಮಾನಿಗಳ ಮನಗೆದಿದ್ದಾರೆ. ಹೀಗೆ ಸಾಲು ಸಾಲು ಸಿನೆಮಾಗಳಲ್ಲಿ ಸಾಕಷ್ಟು ಹೆಸರು ಮಾಡಿರುವ ಕತ್ರೀನಾ ಪ್ರಸ್ತುತ ಬಾಲಿವುಡ್ ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಫ್ಯಾನ್ಸ್ ಗಳ ಹಾಟ್ ಫೇವರೇಟ್ ಆಗಿದ್ದಾರೆ. ಸಲ್ಮಾನ್ ಖಾನ್, ಶಾರೂಖ್ ಖಾನ್, ಅಕ್ಷಯ್ ಕುಮಾರ್ ರಂತಹ ಸೂಪರ್ ಸ್ಟಾರ್ ಗಳ ಜೊತೆಗೆ ಕತ್ರೀನಾ ಪರದೆ ಶೇರ್ ಮಾಡಿದ್ದಾರೆ… ಇದೀಗ ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿಯಲ್ಲಿ ಕತ್ರೀನಾ ಅಭಿನಯಿಸಿದ್ದಾರೆ. ಆದ್ರೆ ಕೊರೊನಾ ಬಿಕ್ಕಟ್ಟಿನಿಂದಾಗಿ ಚಿತ್ರ ಬಿಡುಗಡೆಗೆ ವಿಘ್ನೆ ಎದುರಾಗಿತ್ತು. ಇದೀಗ ದೀಪಾವಳಿ ವೇಳೆಗೆ ಚಿತ್ರ ಡಿಜಿಟಲ್ ಮೀಡಿಯಾದಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಬರಿ ಸಿನಿಮಾಗಳಲ್ಲಿ ನಟನೆ ಅಷ್ಟೇ ಅಲ್ಲದೆ ಐಟಂ ಸಾಂಗ್ ಗಳಿಗೆ ಡ್ಯಾನ್ಸ್ ಮಾಡಿ ಪಡ್ಡೆಹೈಕಳ ಹಾರ್ಟ್ ಬೀಟ್ ಹೆಚ್ಚಿಸಿರುವ ಕ್ಯಾಟ್, ಡ್ಯಾನ್ಸ್ ಐಕಾನ್ ಎನಿಸಿಕೊಂಡಿದ್ದಾರೆ. ಅದ್ರಲ್ಲೂ ಚಿಕ್ಕನಿ ಚಮ್ಮೇಲಿ , ಕಮಲಿ ಸಾಂಗ್ಸ್ ನಲ್ಲಿ ಕತ್ರಿನಾ ಡ್ಯಾನ್ಸ್ ಗೆ ಫಿದಾ ಆಗದವರೇ ಇಲ್ಲ. ಹೀಗೆ ಹೊರಗಿನಿಂದ ಬಂದು ಭಾರತದಲ್ಲಿ ಭದ್ರಬುನಾದಿ ರೂಪಿಸಿಕೊಂಡು ಈಗ ನಮ್ಮವರೇ ಆಗಿರುವ ಕತ್ರಿನಾಗೆ ಹುಟ್ಟು ಹಬ್ಬದ ಶುಭಾಷಯಗಳು. Happy Birthday Katrina Kaif..