ರಾಮನಗರ : ಕಾಂಗ್ರೆಸ್ ಎನ್ನುವುದು ಬ್ರಿಟಿಷರು ಬಿಟ್ಟ ಸಂಸ್ಥೆಯಾಗಿದೆ. ಆ ಪಕ್ಷದ ಮೊದಲ ಅಧ್ಯಕ್ಷರು ಸಹ ಬ್ರಿಟಿಷ್ನವರೇ ಆಗಿದ್ದರು ಎಂದು ಕಂದಾಯ ಸಚಿವ ಆರ್. ಅಶೋಕ್ ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡಿದ್ದಾರೆ.
ಇಂದು ರೇಷ್ಮೆ ನಾಡು ರಾಮನಗರದಲ್ಲಿ ಮಾತನಾಡಿದ ಸಚಿವ ಆರ್. ಅಶೋಕ್ ಕಾಂಗ್ರೆಸ್ ಪಕ್ಷ ನಿರಂತರವಾಗಿ ಜೆಡಿಎಸ್ ಪಕ್ಷಕ್ಕೆ ಮೋಸ ಮಾಡುತ್ತಾ ಬಂದಿದೆ. ಅಲ್ಲದೆ ದೇವೆಗೌಡರನ್ನು ಪ್ರಧಾನ ಮಂತ್ರಿಸ್ಥಾನದಿಂದ ಕೆಳಗಿಳಿಸಿದ್ದೇ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ನ ಮೋಸ ಜಾಲ ಜೆಡಿಎಸ್ಗೆ ಗೊತ್ತಾಗಿದೆ.
ಹಿಂದೆ ಒಮ್ಮೆ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡು ಆಡಳಿತ ನಡೆಸಿದ್ದೇವೆ. ಅಭಿವೃದ್ಧಿಗೆ ಜೆಡಿಎಸ್ ಸಹಕಾರ ನೀಡಿದರೆ, ಮೈತ್ರಿ ವಿಚಾರ ಮುಂದೆ ನೋಡೊಣ ಎಂದು ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ.








