ಬೆಂಗಳೂರು : ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 130 ರಿಂದ 150 ಸ್ಥಾನ ಗೆದ್ದು, ಇನ್ನೂ 20 ವರ್ಷ ಕಾಂಗ್ರೆಸ್ ಪಕ್ಷವನ್ನ ವಿಪಕ್ಷದಲ್ಲೇ ಕೂರಿಸುವುದೇ ನನ್ನ ಗುರಿ.
ಅದನ್ನ ನಾನು ಮಾಡೇ ತೀರುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಾಂಗ್ರೆಸ್ ಗೆ ಸವಾಲ್ ಹಾಕಿದ್ದಾರೆ.
ಶನಿವಾರ ವಿಧಾಸನಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ನಡೆದ ಚರ್ಚೆ ವೇಳೆ ಸದನ ರಣರಂಗವಾಗಿತ್ತು.
ಆಡಳಿತರೂಢ ಬಿಜೆಪಿ ವಿರೋಧ ಪಕ್ಷ ಕಾಂಗ್ರೆಸ್ ಯುದ್ಧ ಸೇನಾನಿಗಳಂತೆ ಒಬ್ಬರ ಮೇಲೆ ಒಬ್ಬರು ವಾಗ್ಬಾಣಗಳನ್ನು ಬಿಟ್ಟರು.
ಈ ವೇಳೆ ಸಿದ್ದರಾಮಯ್ಯ ಬಿಡಿಎ ವಸತಿ ಯೋಜನೆ ಬಗ್ಗೆ ಮಾಡಿದ ಆರೋಪದ ಬಗ್ಗೆ ಮಾತನಾಡುತ್ತ ಸಿಎಂ, ಬಿಡಿಎ ವಸತಿ ಯೋಜನೆಯಲ್ಲಿ ನೀವು ಮಾಡಿರುವ ಆರೋಪ ಕುರಿತು ನೀವು ಸಿಬಿಐಗಾದರೂ ಹೋಗಿ, ಹೈಕೋರ್ಟ್ ಗಾದರೂ ಹೋಗಿ, ಲೋಕಾಯುಕ್ತಕ್ಕಾದರೂ ಹೋಗಿ, ಆರೋಪದ ಬಗ್ಗೆ ಒಂದಂಶ ಸತ್ಯಾಂಶ ಇದ್ದರೂ ರಾಜೀನಾಮೆ ನೀಡುತ್ತೇನೆ.
ನಾಳೆ ಕರ್ನಾಟಕ ಬಂದ್ : ಏನಿರುತ್ತೆ.. ಏನಿರಲ್ಲ..?
ನನ್ನ ಗುರಿಯೇನಿದ್ದರೂ ರಾಜ್ಯದ ಅಭಿವೃದ್ಧಿಯಷ್ಟೆ. ಈ ದೃಷ್ಟಿಯಿಂದ ದೆಹಲಿಗೆ ಹೋಗಿ ಪ್ರಧಾನಿ ಭೇಟಿ ಮಾಡಿ ಬಂದಿದ್ದೇನೆ.
10 ದಿನದಲ್ಲಿ ನಮ್ಮ ನಿರೀಕ್ಷೆಯಂತೆ ಕೇಂದ್ರದಿಂದ ಆರ್ಥಿಕ ನೆರವು ಬರಲಿದೆ. ಕೇಂದ್ರ ಸರ್ಕಾರಕ್ಕೆ ನಮ್ಮ ಸರ್ಕಾರದ ಮೇಲೆ ವಿಶ್ವಾಸ ಇಲ್ಲ ಎಂಬ ಆರೋಪದಲ್ಲಿ ಹುರಳಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮುಂದುವರಿದು ಕಾಂಗ್ರೆಸ್ ವಿರುದ್ಧ ಬೆಂಕಿಕಾರಿದ ಸಿಎಂ, ಲೋಕಸಭೆಯಲ್ಲಿ ನೀವು ಗೆದ್ದಿರುವುದು ಎಷ್ಟು. ರಾಜ್ಯದಲ್ಲಿ 25ರಲ್ಲಿ ಬಿಜೆಪಿ ಗೆದ್ದಿದೆ.
ವಿಧಾನಸಭೆಯಲ್ಲಿ 15ರಲ್ಲಿ 12 ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ. ಜನರ ವಿಶ್ವಾಸ ಇಲ್ಲದೆ ಗೆದ್ದಿದ್ದೇವೆ. ಉತ್ತಮ ಮಳೆಯಾಗಿದೆ.
ಒಳ್ಳೆಯ ಬೆಳೆಯ ನಿರೀಕ್ಷೆಯಲ್ಲಿದ್ದೇವೆ. ಎಲ್ಲಾ ವರ್ಗದ ಜನ ನಮ್ಮ ಜೊತೆಯಲ್ಲಿದ್ದಾರೆ ಎಂದು ಗುಡುಗಿದರು.








