ಬ್ರಿಟನ್ ನಲ್ಲಿ ಮತ್ತೆ ಸಂಪೂರ್ಣ ಲಾಕ್ಡೌನ್ ಘೋಷಣೆ..!
ಬ್ರಿಟನ್: ಇಡೀ ವಿಶ್ವದ್ಯಾಂತ ಸದ್ಯ ಬ್ರಿಟನ್ ಮೂಲದ ರೂಪಾಂತರಿ ಕೊರೊನಾ ವೈರಸ್ ಆತಂಕ ಎದುರಾಗಿದೆ. ಭಾರತದಲ್ಲೂ ಇಂದು ಮತ್ತೆ 20 ಜನರಲ್ಲಿ ಹೊಸ ಚವೈರಸ್ ಕಾಣಿಸಿಕೊಂಡಿದೆ. ಈ ಮೂಲಕ ರೂಪಾಂತರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 58ಕ್ಕೇರಿದೆ. ಅದ್ರಂತೆ ಇಡೀ ವಿಶ್ವದ ಹಲವು ದೇಶಗಳಲ್ಲಿ ಹೊಸ ತಳಿ ವೈರಸ್ ಆತಂಕ ಹೆಚ್ಚಾಗುತ್ತಲೇ ಇದೆ. ಬ್ರಿಟನ್ ನಲ್ಲೂ ರೂಪಾಂತರಿ ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ಮತ್ತೊಮ್ಮೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಹೌದು ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸರ್ ಅವರು, ಇಂಗ್ಲೆಂಡ್’ನಲ್ಲಿ ಮತ್ತೊಮ್ಮೆ ಸಂಪೂರ್ಣ ಲಾಕ್ಡೌ ಘೋಷಣೆ ಮಾಡಿದ್ದಾರೆ. ಫೆಬ್ರವರಿ ಮಧ್ಯದವರೆಗೂ ಲಾಕ್ಡೌನ್ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಭಾರತದಲ್ಲಿ ಮತ್ತೆ 20 ಜನರಿಗೆ `ರೂಪಾಂತರಿ’ ಕೊರೊನಾ : ಸೋಂಕಿತರ ಸಂಖ್ಯೆ 58ಕ್ಕೇರಿಕೆ
ಬುಧವಾರದಿಂದ ಎಲ್ಲಾ ಶಾಲಾ-ಕಾಲೇಜುಗಳು ಬಂದ್ ಆಗಲಿವೆ. ಇಂಗ್ಲೆಂಡ್’ನಲ್ಲಿ ಕೊರೋನಾ ಮರಣ ದರ ಅತ್ಯಧಿಕವಾಗಿದ್ದು, ಈಗಾಗಲೇ ಮುಕ್ಕಾಲು ಭಾಗದಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆಂದು ಹೇಳಲಾಗುತ್ತಿದೆ. ಆದ್ದರಿಂದ ಮೊದಲ ಲಾಕ್ಡೌನ್ ಗಿಂತಲೂ ಕಠಿಣ ನಿಯಮಗಳು ಈ ಬಾರಿ ಜಾರಿಯಾಗಲಿದೆ ಎನ್ನಲಾಗ್ತಿದೆ. ಮೂಲಗಳ ಪ್ರಕಾರ ಈಗಾಗಲೇ ಕೊರೋನಾ ಸೋಂಕಿನಿಂದಾಗಿ ಸುಮಾರು 27 ಸಾವಿರ ಜನರು ಆಸ್ಪತ್ರೆಯಲ್ಲಿದ್ದಾರೆ. ಕಳೆದ ವರ್ಷ ಏಪ್ರಿಲ್ ನಲ್ಲಿ ಕಾಣಿಸಿಕೊಂಡ ಮೊದಲನೇ ಅಲೆಯಿಂದಾಗಿ ಶೇ.40 ಕ್ಕೂ ಹೆಚ್ಚು ಜನರು ಗಂಭೀರ ಸ್ಥಿತಿಗೆ ತಲುಪಿದ್ದಾರೆ. ಕಳೆದ ಮಂಗಳವಾರ 80 ಸಾವಿರಕ್ಕು ಹೆಚ್ಚು ಜನರು ಕೇವಲ 24 ಗಂಟೆಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel