`ಯಡಿಯೂರಪ್ಪ ಹೋಗೋದು ಗ್ಯಾರಂಟಿ ಆಗಿರಬೇಕು’ : ಸಿದ್ದರಾಮಯ್ಯ
ಬೆಂಗಳೂರು : ಯಡಿಯೂರಪ್ಪ ಹೋಗೋದು ಗ್ಯಾರಂಟಿ ಆಗಿರಬೇಕು. ಹೀಗಾಗಿ, ತರಾತುರಿಯಲ್ಲಿ ನಿಗಮ ಮಂಡಳಿ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ನಾನು ಬಜೆಟ್ ಸಂದರ್ಭದಲ್ಲಿ ಅನಗತ್ಯ ವೆಚ್ಚ ಕಡಿಮೆ ಮಾಡಿ ಅಂತಾ ಸಲಹೆ ನೀಡಿದ್ದೆ. ಸರ್ಕಾರಕ್ಕೆ 105 ಜನನೂ ಮುಖ್ಯ, 17 ಮಂದಿಯೂ ಮುಖ್ಯ : ಎಂಟಿಬಿ
ರಾಜ್ಯದ ಅಭಿವೃದ್ಧಿಗೆ ಹೆಚ್ಚು ಹಣ ಕೊಡಬೇಕು ಅಂತ ಹೇಳಿದ್ದೆ. ವಿಧವಾ, ವೃದ್ಧಾಪ್ಯ ವೇತನ ನೀಡಲು ಹಣವಿಲ್ಲ. ಇಂತಹ ಸಂದರ್ಭದಲ್ಲಿ ಈ ನಿಗಮ ಮಂಡಳಿಗೆ ಅಧ್ಯಕ್ಷರನ್ನ ಯಾಕೆ ಮಾಡಿದ್ದಾರೋ ಗೊತ್ತಿಲ್ಲ ಎಂದರು.
ಬಹುಶಃ ಯಡಿಯೂರಪ್ಪ ಹೋಗೋದು ಗ್ಯಾರಂಟಿ ಆಗಿರಬೇಕು. ಹೀಗಾಗಿ, ತರಾತುರಿಯಲ್ಲಿ ನಿಗಮ ಮಂಡಳಿ ಮಾಡಿದ್ದಾರೆ. ದುಂದುವೆಚ್ಚಕ್ಕೆ ಕಡಿವಾಣ ಹಾಕುವುದನ್ನ ಬಿಟ್ಟು, ಅನಗತ್ಯವೆಚ್ಚಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.
ಹಣಕಾಸಿನ ಮುಗ್ಗಟ್ಟು ಇರುವಾಗ ನಿಗಮ ಮಂಡಳಿ ಮಾಡಿರೋದು ರಾಜ್ಯಕ್ಕೆ ಎಸಗಿರುವ ದ್ರೋಹ ಎಂದು ಬಿಎಸ್ ವೈ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.17 ಜನರಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ : ವಲಸಿಗರ ವಿರುದ್ಧ ರೇಣುಕಾಚಾರ್ಯ ಗರಂ
ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್ ಲೈನ್ ಕ್ಲಾಸ್ ನಡೆಸೋದಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದರಾಮಯ್ಯ, ಕೊರೊನಾ ಇರುವಂತಹ ಈ ಸಮಯದಲ್ಲಿ ಫೀಸ್ ನೀಡದಿದ್ರೆ ಆನ್ ಲೈನ್ ಕ್ಲಾಸ್ ಗಳನ್ನು ನಡೆಸೋದಿಲ್ಲ ಎಂಬುದು ಮೂರ್ಖತನ ಹಾಗೂ ಜನ ವಿರೋಧಿ ಕ್ರಮವಾಗಿದೆ.
ಇದನ್ನು ಸರಿಪಡಿಸಬೇಕಿದ್ದ ಸರ್ಕಾರ ಖಾಸಗಿ ಅವರ ಜೊತೆ ಶಾಮೀಲಾಗಿದೆ. ರಾಜ್ಯದಲ್ಲಿ ಸರ್ಕಾರ ಇಲ್ಲ. ಈ ಯಡಿಯೂರಪ್ಪನವರ ಸರ್ಕಾರ ಬರೀ ಲೂಟಿ ಮಾಡುವ ಸರ್ಕಾರ ಎಂದು ಆರೋಪಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel