ಸುಮ್ ಸುಮ್ನೆ ನಮ್ಮ ತಂಟೆಗೆ ಬಂದ್ರೆ ಹುಷಾರ್.. ಸಿ.ಪಿ. ಯೋಗೇಶ್ವರ್‍ಗೆ ಡಿ.ಕೆ. ಸುರೇಶ್ ವಾರ್ನಿಂಗ್
ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ತಿರುಗೇಟು ನೀಡಿದ್ದಾರೆ. ಇಷ್ಟು ದಿನ ಯೋಗೇಶ್ವರ್ ಹುಚ್ಚಾಸ್ಪತ್ರೆಯಲ್ಲಿ ಮಲಗಿದ್ರು. ಈಗ ಎದ್ದು ಬಂದಿದ್ದಾರೆ. ಬಿಜೆಪಿಯವರು ಅವರನ್ನು ಸರಿಯಾಗಿ ಟೆಸ್ಟ್ ಮಾಡಿಸಿಲ್ಲ ಎಂದು ಡಿ.ಕೆ ಸುರೇಶ್ ಯೋಗೇಶ್ವರ್ ವಿರುದ್ಧ ಕಿಡಿ ಕಾರಿದ್ದಾರೆ.
15 ದಿನಗಳ ಹಿಂದೆ ಸಿಎಂ ಬದಲಾಯಿಸಲು ಅಲೆದಾಟ ನಡೆಸಿದ್ರು. ಅದಕ್ಕಾಗಿ ಶಾಸಕರನ್ನು ಭೇಟಿಯಾಗಿದ್ದರು ಎಂದು ಡಿ.ಕೆ. ಸುರೇಶ್ ಆರೋಪಿಸಿದ್ದಾರೆ. ನಿಮ್ಮ ಪಕ್ಷಕ್ಕೆ ನೀವು ಮೊದಲು ನಿಷ್ಠೆಯಿಂದ ಇರಿ. ಚಿಲ್ಲರೆ ರಾಜಕಾರಣ ಮಾಡಬೇಡಿ. ಹಾಗೇ ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ನಮ್ಮ ತಂಟೆಗೆ ಬಂದ್ರೆ ಕ್ಷೇತ್ರದ
ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ.
ನಮ್ಮ ಮತ್ತು ಎಚ್.ಡಿ. ಕುಮಾರಸ್ವಾಮಿ ನಡುವೆ ಯಾವುದೇ ಜಗಳವಿಲ್ಲ. ನಾವು ಒಂದೇ ಜಿಲ್ಲೆಯವರು. ಜಿಲ್ಲೆಯ ಅಭಿವೃದ್ದಿಗಾಗಿ ಜೊತೆಯಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಡಿ.ಕೆ. ಸುರೇಶ್ ಹೇಳಿದ್ದಾರೆ. ಇದಕ್ಕು ಮೊದಲು ರಾಮನಗರದಲ್ಲಿ ಡಿಕೆ ಬದ್ರರ್ಸ್ ಜೆಡಿಎಸ್ ಪಕ್ಷವನ್ನು ಮುಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಪ್ರಭಾವ ಕುಗ್ಗಿಸುವಂತಹ ಯತ್ನ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್‍ಗಿಂತ ಡಿ.ಕೆ. ಸುರೇಶ್ ಅವರ ಹಾವಳಿ ರಾಮನಗರದಲ್ಲಿ ಜಾಸ್ತಿ ಎಂದು ಎಚ್‍ಡಿಕೆ ಆರೋಪಿಸಿದ್ದರು. ಆದ್ರೆ ಎಚ್‍ಡಿಕೆ ಹೇಳಿಕೆಗೆ ಡಿ.ಕೆ. ಸುರೇಶ್ ಸಂಯಮದಿಂದಲೇ ಉತ್ತರ ನೀಡಿದ್ದಾರೆ.







