ADVERTISEMENT
Monday, August 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ದೇಶ - ವಿದೇಶ

2025ರ ಬಾಕ್ಸಾಫೀಸ್ ರಣರಂಗದಲ್ಲಿ ಸ್ಟಾರ್ ವಾರ್ ಠುಸ್: ಕೋಟಿ ಕೋಟಿ ಸುರಿದರೂ ಮಣ್ಣುಮುಕ್ಕಿದ 10 ಬಿಗ್ ಬಜೆಟ್ ಚಿತ್ರಗಳು

2025 : 10 big budget films that failed despite spending crores of rupees

Shwetha by Shwetha
December 14, 2025
in ದೇಶ - ವಿದೇಶ, Cinema, National, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಸಿನಿಮಾ ಎನ್ನುವುದು ಬಣ್ಣದ ಲೋಕ ಮಾತ್ರವಲ್ಲ ಅದೊಂದು ಭಯಾನಕ ಜೂಜು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಬೆಳ್ಳಿಪರದೆ ಮೇಲೆ ಅದೃಷ್ಟ ಪರೀಕ್ಷೆಗೆ ಇಳಿದವರು ರಾತ್ರೋರಾತ್ರಿ ಕುಬೇರರಾಗುವುದು ಎಷ್ಟು ಸತ್ಯವೋ ಅಷ್ಟೇ ವೇಗವಾಗಿ ಪಾತಾಳಕ್ಕೆ ಕುಸಿಯುವುದು ಕೂಡ ಕಟುಸತ್ಯ. 2025ರ ಸಾಲಿನಲ್ಲಿ ಭಾರತೀಯ ಚಿತ್ರರಂಗದ ಲೆಕ್ಕಾಚಾರವೇ ಬುಡಮೇಲಾಗಿದೆ. ಬಾಲಿವುಡ್, ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್ ಹಾಗೂ ಮಾಲಿವುಡ್ ಅಂಗಳದಲ್ಲಿ ಸ್ಟಾರ್ ಡಮ್ ನಂಬಿಕೊಂಡು ಬಂದ ಎಷ್ಟೋ ಸಿನಿಮಾಗಳು ಈ ವರ್ಷ ಬಾಕ್ಸಾಫೀಸ್‌ನಲ್ಲಿ ಉಸಿರು ಚೆಲ್ಲಿವೆ.

ಕೇವಲ ಸ್ಟಾರ್ ನಟರ ಕಟೌಟ್ ನೋಡಿ, ಹಾಲಿನ ಅಭಿಷೇಕ ಮಾಡಿ ಸಿನಿಮಾ ನೋಡುವ ಕಾಲ ಹೋಯಿತು. ಕಂಟೆಂಟ್ ಇಲ್ಲದಿದ್ದರೆ ಎಂತ ದೊಡ್ಡ ಸೂಪರ್ ಸ್ಟಾರ್ ಸಿನಿಮಾ ಆದರೂ ಪ್ರೇಕ್ಷಕ ಪ್ರಭು ತಿರಸ್ಕರಿಸುತ್ತಾನೆ ಎಂಬುದಕ್ಕೆ 2025 ಸಾಕ್ಷಿಯಾಗಿದೆ. ಸಲ್ಮಾನ್ ಖಾನ್, ರಾಮ್‌ಚರಣ್, ಪವನ್ ಕಲ್ಯಾಣ್, ಕಮಲ್ ಹಾಸನ್ ಅಂತಹ ದಿಗ್ಗಜ ನಟರ ಸಿನಿಮಾಗಳೇ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿವೆ. ನಿರ್ಮಾಪಕರ ಜೇಬಿಗೆ ಕತ್ತರಿ ಬಿದ್ದಿದೆ. ಅಬ್ಬಬ್ಬಾ ಎನ್ನುವಂತೆ ಹೈಪ್ ಕ್ರಿಯೇಟ್ ಮಾಡಿ ಅಷ್ಟೇ ಹೀನಾಯವಾಗಿ ಸೋಲುಂಡ ಆ ಟಾಪ್ 10 ಸಿನಿಮಾಗಳ ವಿವರ ಇಲ್ಲಿದೆ ನೋಡಿ.

Related posts

todays-rashi-bhavishya-kannada-03-august-2026

Astro-ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ

August 3, 2026
ಮೋದಿ ಒಬ್ಬ ನಿಜವಾದ ಸರ್ವಾಧಿಕಾರಿ ಆಗಲು ವಿಫಲರಾಗಿದ್ದಾರೆ- ಇಂದಿರಾ ಗಾಂಧಿಯಿಂದ ಸರ್ವಾಧಿಕಾರ ಕಲಿಯಿರಿ: ರಾಹುಲ್ ಗಾಂಧಿ ವಿರುದ್ಧ ಶೆಹಜಾದ್ ಪೂನಾವಾಲಾ ವಾಗ್ದಾಳಿ

ಮೋದಿ ಒಬ್ಬ ನಿಜವಾದ ಸರ್ವಾಧಿಕಾರಿ ಆಗಲು ವಿಫಲರಾಗಿದ್ದಾರೆ- ಇಂದಿರಾ ಗಾಂಧಿಯಿಂದ ಸರ್ವಾಧಿಕಾರ ಕಲಿಯಿರಿ: ರಾಹುಲ್ ಗಾಂಧಿ ವಿರುದ್ಧ ಶೆಹಜಾದ್ ಪೂನಾವಾಲಾ ವಾಗ್ದಾಳಿ

August 3, 2026

1. ಸಿಕಂದರ್: ಬಾಕ್ಸಾಫೀಸ್ ಸುಲ್ತಾನನಿಗೆ ಬಲವಾದ ಪೆಟ್ಟು

ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಹಾಗೂ ಗಜಿನಿ ಖ್ಯಾತಿಯ ಎ ಆರ್ ಮುರುಗದಾಸ್ ಕಾಂಬಿನೇಷನ್ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿತ್ತು. ರಶ್ಮಿಕಾ ಮಂದಣ್ಣ ಸಾಥ್ ನೀಡಿದ್ದ ಈ ಆಕ್ಷನ್ ಥ್ರಿಲ್ಲರ್ ಬಾಕ್ಸಾಫೀಸ್‌ನಲ್ಲಿ ಮ್ಯಾಜಿಕ್ ಮಾಡುವಲ್ಲಿ ವಿಫಲವಾಯಿತು. ಸಾಜಿದ್ ನಾಡಿಯಾದ್ವಾಲಾ ಅವರ ಕೋಟಿ ಕೋಟಿ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಸಿನಿಮಾ ಸೋಲಿನ ಬಳಿಕ ನಿರ್ದೇಶಕ ಮತ್ತು ನಟರ ನಡುವಿನ ಆರೋಪ ಪ್ರತ್ಯಾರೋಪಗಳು ಬೀದಿಗೆ ಬಂದಿದ್ದವು. 2025ರ ಬಹುನಿರೀಕ್ಷಿತ ಚಿತ್ರವಾಗಿದ್ದ ಇದು ರಿಲೀಸ್‌ಗೂ ಮುನ್ನವೇ ಪೈರಸಿ ಭೂತಕ್ಕೆ ಬಲಿಯಾಗಿ ದೊಡ್ಡ ಹೊಡೆತ ನೀಡಿತು. ಬರೋಬ್ಬರಿ 90 ಕೋಟಿ ರೂಪಾಯಿ ನಷ್ಟ ಅನುಭವಿಸಿ ಸಿಕಂದರ್ ಸೋಲೊಪ್ಪಿಕೊಂಡಿತು.

2. ಗೇಮ್ ಚೇಂಜರ್: ಶಂಕರ್ ಲೆಕ್ಕಾಚಾರ ಉಲ್ಟಾ ಪಲ್ಟಾ

ಗ್ಲೋಬಲ್ ಸ್ಟಾರ್ ರಾಮ್‌ಚರಣ್ ಮತ್ತು ಬ್ರಹ್ಮಾಂಡ ನಿರ್ದೇಶಕ ಶಂಕರ್ ಒಂದಾಗಿದ್ದಾರೆ ಎಂದಾಗ ಭಾರತೀಯ ಚಿತ್ರರಂಗವೇ ತಿರುಗಿ ನೋಡಿತ್ತು. 2025ರ ಸಂಕ್ರಾಂತಿ ಹಬ್ಬಕ್ಕೆ ಬಂದ ಈ ಚಿತ್ರ ಬಾಕ್ಸಾಫೀಸ್‌ನ ಗೇಮ್ ಬದಲಿಸುವ ಬದಲು ನಿರ್ಮಾಪಕ ದಿಲ್ ರಾಜು ಅವರ ಹಣೆಬರಹವನ್ನೇ ಬದಲಿಸಿತು. ಚರಣ್ ದ್ವಿಪಾತ್ರ ಮತ್ತು ಕಿಯಾರಾ ಗ್ಲಾಮರ್ ಕೂಡ ಸಿನಿಮಾವನ್ನು ಉಳಿಸಲಿಲ್ಲ. ಫಿಲ್ಮ್ ನಗರ್ ಮೂಲಗಳ ಪ್ರಕಾರ ಈ ಚಿತ್ರ ಬರೋಬ್ಬರಿ 100 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದು ಹೇಳಲಾಗುತ್ತಿದೆ.

3. ಥಗ್ ಲೈಫ್: ಮಣಿರತ್ನಂ ಮ್ಯಾಜಿಕ್ ವರ್ಕೌಟ್ ಆಗಲಿಲ್ಲ

ನಾಯಗನ್ ನಂತರ ಕಮಲ್ ಹಾಸನ್ ಮತ್ತು ಮಣಿರತ್ನಂ ಜೋಡಿ ಮತ್ತೆ ಒಂದಾಗಿದ್ದೇ ಒಂದು ಸಂಚಲನವಾಗಿತ್ತು. ಆದರೆ ಥಗ್ ಲೈಫ್ ಬಾಕ್ಸಾಫೀಸ್‌ನಲ್ಲಿ ಲೈಫ್ ಕಂಡುಕೊಳ್ಳುವಲ್ಲಿ ಸೋತಿತು. ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಕಮಲ್ ಹಾಸನ್ ಹೇಳಿಕೆಗಳು ಕೂಡ ಸಿನಿಮಾದ ಮೇಲೆ ಪರಿಣಾಮ ಬೀರಿತು. ಸ್ವತಃ ಕಮಲ್ ನಿರ್ಮಾಣದ ಈ ಚಿತ್ರ ಅಂದಾಜು 100 ಕೋಟಿ ನಷ್ಟದ ಸುಳಿಗೆ ಸಿಲುಕಿತು. ಸಿಂಬು ಮತ್ತು ತ್ರಿಷಾ ಇದ್ದರೂ ಚಿತ್ರವನ್ನು ದಡ ಸೇರಿಸಲಾಗಲಿಲ್ಲ.

4. ವಾರ್ 2: ಸ್ಟಾರ್ ವಾರ್ ನಲ್ಲಿ ಸೋತ ಹೃತಿಕ್ ಎನ್‌ಟಿಆರ್

2025ರ ಸ್ವಾತಂತ್ರ್ಯ ದಿನಾಚರಣೆಯಂದು ತೆರೆಕಂಡ ಬಾಲಿವುಡ್ ಮತ್ತು ಟಾಲಿವುಡ್ ಸ್ಟಾರ್‌ಗಳ ಸಂಗಮದ ವಾರ್ 2 ನಿರೀಕ್ಷೆಯ ಮಟ್ಟ ಮುಟ್ಟಲಿಲ್ಲ. ಹೃತಿಕ್ ರೋಷನ್ ಮತ್ತು ಜ್ಯೂ ಎನ್‌ಟಿಆರ್ ಅಬ್ಬರಕ್ಕೆ ರಜನಿಕಾಂತ್ ಅವರ ಕೂಲಿ ಸಿನಿಮಾ ಅಡ್ಡಗಾಲಾಗಿ ನಿಂತಿತು. ಸ್ಪೈ ಯೂನಿವರ್ಸ್‌ನ ಈ ಅದ್ದೂರಿ ಚಿತ್ರ ನಿರ್ಮಾಪಕರಿಗೆ 60 ರಿಂದ 70 ಕೋಟಿ ರೂಪಾಯಿ ನಷ್ಟ ತಂದಿಟ್ಟಿತು ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕಿದ್ದಾರೆ.

5. ಎಮರ್ಜೆನ್ಸಿ: ಕಂಗನಾ ಕ್ರಾಂತಿ ನಡೆಯಲಿಲ್ಲ
ಬಾಲಿವುಡ್ ಕ್ವೀನ್ ಕಂಗನಾ ರಾಣಾವತ್ ಅವರ ಮಹತ್ವಾಕಾಂಕ್ಷೆಯ ಎಮರ್ಜೆನ್ಸಿ ಚಿತ್ರ 2025ರ ಆರಂಭದಲ್ಲೇ ತೆರೆಗೆ ಬಂದು ವಿವಾದಗಳಿಂದಲೇ ಸುದ್ದಿ ಮಾಡಿತ್ತು. ಆದರೆ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಲ್ಲದೆ ಬಿಕೋ ಎನ್ನುವಂತಾಯಿತು. 60 ಕೋಟಿ ಬಜೆಟ್‌ನ ಈ ಚಿತ್ರ ಕೇವಲ 20 ಕೋಟಿ ಗಳಿಸಲು ಹೆಣಗಾಡಿತು. ಪುಣ್ಯಕ್ಕೆ ನೆಟ್‌ಫ್ಲಿಕ್ಸ್ ಸಂಸ್ಥೆ ದೊಡ್ಡ ಮೊತ್ತಕ್ಕೆ ಓಟಿಟಿ ಹಕ್ಕು ಖರೀದಿಸಿದ್ದರಿಂದ ನಿರ್ಮಾಪಕರು ಸ್ವಲ್ಪ ನಿಟ್ಟುಸಿರು ಬಿಡುವಂತಾಯಿತು.

6. ಹರಿಹರ ವೀರಮಲ್ಲು: ಪವರ್ ಸ್ಟಾರ್ ಅಭಿಮಾನಿಗಳಿಗೆ ನಿರಾಸೆ

ಆಂಧ್ರ ರಾಜಕೀಯದಲ್ಲಿ ಪವನ್ ಕಲ್ಯಾಣ್ ಗೆದ್ದಿರಬಹುದು ಆದರೆ ಸಿನಿಮಾ ರಂಗದಲ್ಲಿ ಈ ವರ್ಷ ಅವರಿಗೆ ಲಕ್ ಕೈಕೊಟ್ಟಿದೆ. ಬಹುಕಾಲದಿಂದ ನಿರ್ಮಾಣ ಹಂತದಲ್ಲಿದ್ದ ಹರಿಹರ ವೀರಮಲ್ಲು ಅಂತಿಮವಾಗಿ 2025ರಲ್ಲಿ ತೆರೆಕಂಡಾಗ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬಜೆಟ್ ಮಿತಿ ಮೀರಿದ್ದರಿಂದ ಚಿತ್ರ ಭಾರೀ ನಷ್ಟ ಅನುಭವಿಸಿತು. ಇತ್ತ ಒಜಿ ಚಿತ್ರಕ್ಕೆ ಒಳ್ಳೆಯ ಟಾಕ್ ಸಿಕ್ಕರೂ ಕಮರ್ಷಿಯಲ್ ಆಗಿ ನಿರ್ಮಾಪಕರಿಗೆ ನಷ್ಟವಾಯಿತು ಎನ್ನಲಾಗುತ್ತಿದೆ.

7. ಕಣ್ಣಪ್ಪ: ಭಕ್ತಿ ಚಿತ್ರಕ್ಕೆ ಸಿಗಲಿಲ್ಲ ಮುಕ್ತಿ

ಮಂಚು ವಿಷ್ಣು ಮಹತ್ವಾಕಾಂಕ್ಷೆಯ ಕಣ್ಣಪ್ಪ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಮೋಹನ್ ಬಾಬು ನಿರ್ಮಾಣದ ಈ ಚಿತ್ರದಲ್ಲಿ ಸ್ಟಾರ್‌ಗಳ ದಂಡೇ ಇತ್ತು. ಕನ್ನಡದ ಶಿವಮೆಚ್ಚಿನ ಕಣ್ಣಪ್ಪ ಚಿತ್ರದಿಂದ ಸ್ಫೂರ್ತಿ ಪಡೆದಿದ್ದರೂ ಮೇಕಿಂಗ್ ಮತ್ತು ಕಥೆಯಲ್ಲಿ ಎಡವಿದ ಪರಿಣಾಮ ಬಾಕ್ಸಾಫೀಸ್‌ನಲ್ಲಿ ಹೀನಾಯ ಸೋಲು ಕಂಡಿತು.

8. ರೆಟ್ರೋ: ಸೂರ್ಯ ಪ್ರಯೋಗ ವಿಫಲ

ತಮಿಳು ನಟ ಸೂರ್ಯ ಅವರ ವಿಭಿನ್ನ ಪ್ರಯತ್ನದ ರೆಟ್ರೋ ಸಿನಿಮಾ ಪ್ರೇಕ್ಷಕರ ತಲೆಗೆ ಹೋಗಲಿಲ್ಲ. ಕನ್ನಿಮಾ ಹಾಡು ಸೃಷ್ಟಿಸಿದ ಹೈಪ್ ಸಿನಿಮಾ ಉಳಿಸಲು ಸಾಲಲಿಲ್ಲ. ಪೂಜಾ ಹೆಗ್ಡೆ ಮತ್ತು ಸೂರ್ಯ ಕೆಮಿಸ್ಟ್ರಿ ವರ್ಕೌಟ್ ಆದರೂ ಕಥೆಯಲ್ಲಿನ ದೋಷದಿಂದ ಸಿನಿಮಾ ನೆಲಕಚ್ಚಿತು.

ಇನ್ನುಳಿದಂತೆ ತಲಾ ಅಜಿತ್ ಅವರ ವಿಡಾಮುಯರ್ಚಿ, ವಿಜಯ್ ದೇವರಕೊಂಡ ನಟನೆಯ ಕಿಂಗ್‌ಡಮ್, ಚಿಯಾನ್ ವಿಕ್ರಂ ಅಭಿನಯದ ವೀರಧೀರ ಶೂರನ್, ರಾಮ್ ಪೊತಿನೇನಿ ಅವರ ಆಂಧ್ರಕಿಂಗ್ ತಾಲೂಕ, ದುಲ್ಕರ್ ಸಲ್ಮಾನ್ ನಟನೆಯ ಕಾಂತ ಹಾಗೂ ಮಮ್ಮುಟಿ ಅವರ ಬಾಜೂಕಾ ಸಿನಿಮಾಗಳು ಕೂಡ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡದೆ ಸೋಲೊಪ್ಪಿಕೊಂಡಿವೆ. ಒಟ್ಟಿನಲ್ಲಿ 2025ನೇ ಇಸವಿ ದೊಡ್ಡ ಬಜೆಟ್ ಮತ್ತು ಸ್ಟಾರ್ ನಟರ ಸಿನಿಮಾಗಳಿಗೆ ಕರಾಳ ವರ್ಷವಾಗಿ ಕಾಡಿದೆ. ಕೇವಲ ಹಣ ಸುರಿದರೆ ಸಾಲದು ಕಥೆಯಲ್ಲಿ ದಮ್ಮಿರಬೇಕು ಎಂದು ಪ್ರೇಕ್ಷಕರು ಮತ್ತೊಮ್ಮೆ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ.

ShareTweetSendShare
Join us on:

Related Posts

todays-rashi-bhavishya-kannada-03-august-2026

Astro-ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ

by admin
August 3, 2026
0

ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ ಪಂಡಿತ್ ಜ್ಞಾನೇಶ್ವರ್ ರಾವ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ...

ಮೋದಿ ಒಬ್ಬ ನಿಜವಾದ ಸರ್ವಾಧಿಕಾರಿ ಆಗಲು ವಿಫಲರಾಗಿದ್ದಾರೆ- ಇಂದಿರಾ ಗಾಂಧಿಯಿಂದ ಸರ್ವಾಧಿಕಾರ ಕಲಿಯಿರಿ: ರಾಹುಲ್ ಗಾಂಧಿ ವಿರುದ್ಧ ಶೆಹಜಾದ್ ಪೂನಾವಾಲಾ ವಾಗ್ದಾಳಿ

ಮೋದಿ ಒಬ್ಬ ನಿಜವಾದ ಸರ್ವಾಧಿಕಾರಿ ಆಗಲು ವಿಫಲರಾಗಿದ್ದಾರೆ- ಇಂದಿರಾ ಗಾಂಧಿಯಿಂದ ಸರ್ವಾಧಿಕಾರ ಕಲಿಯಿರಿ: ರಾಹುಲ್ ಗಾಂಧಿ ವಿರುದ್ಧ ಶೆಹಜಾದ್ ಪೂನಾವಾಲಾ ವಾಗ್ದಾಳಿ

by Shwetha
August 3, 2026
0

ಬಿಜೆಪಿಯ ಪ್ರಖರ ವಾಗ್ಮಿ ಮತ್ತು ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಮ್ಮ ಎಕ್ಸ್ ಖಾತೆಯ ಪರಿಚಯದ ಪುಟದಿಂದ (Bio) ಬಿಜೆಪಿ ರಾಷ್ಟ್ರೀಯ ವಕ್ತಾರ ಎಂಬ ಉಲ್ಲೇಖವನ್ನು...

ಹಾಕಿ ತಂಡದ ಜರ್ಸಿಗೆ ಕೇಸರಿ ಬಣ್ಣ: ಕ್ರೀಡೆಯಲ್ಲೂ ರಾಜಕೀಯ ಬೆರೆಸಬೇಡಿ ಎಂದು ಕೇಂದ್ರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

ಹಾಕಿ ತಂಡದ ಜರ್ಸಿಗೆ ಕೇಸರಿ ಬಣ್ಣ: ಕ್ರೀಡೆಯಲ್ಲೂ ರಾಜಕೀಯ ಬೆರೆಸಬೇಡಿ ಎಂದು ಕೇಂದ್ರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

by Shwetha
August 3, 2026
0

ಭಾರತೀಯ ಹಾಕಿ ತಂಡದ ಸಾಂಪ್ರದಾಯಿಕ ನೀಲಿ ಬಣ್ಣದ ಜರ್ಸಿಯನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿರುವುದಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ...

ವಿದ್ಯಾರ್ಥಿಗಳಿಗೆ ನಿಮ್ಮ ಕ್ಷಮಾದಾನ ಬೇಡ ಕ್ಷಮೆಯಾಚನೆ ಬೇಕು- ಮಕ್ಕಳು ಕಳೆದುಕೊಂಡ ಪಾಲಕರನ್ನು ಭೇಟಿ ಮಾಡುವ ದಿಟ್ಟತನ ನಿಮಗಿಲ್ಲ: ಮೋದಿ ವಿಡಿಯೋ ವಿರುದ್ಧ ರಾಹುಲ್ ಕಿಡಿ

ವಿದ್ಯಾರ್ಥಿಗಳಿಗೆ ನಿಮ್ಮ ಕ್ಷಮಾದಾನ ಬೇಡ ಕ್ಷಮೆಯಾಚನೆ ಬೇಕು- ಮಕ್ಕಳು ಕಳೆದುಕೊಂಡ ಪಾಲಕರನ್ನು ಭೇಟಿ ಮಾಡುವ ದಿಟ್ಟತನ ನಿಮಗಿಲ್ಲ: ಮೋದಿ ವಿಡಿಯೋ ವಿರುದ್ಧ ರಾಹುಲ್ ಕಿಡಿ

by Shwetha
August 3, 2026
0

ಭ್ರಷ್ಟತೆಯಿಂದ ಕೂಡಿದ ಪರೀಕ್ಷಾ ವ್ಯವಸ್ಥೆಯನ್ನು ದೇಶದ ಯುವಜನತೆಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳ ಕ್ಷಮೆ ಯಾಚಿಸಬೇಕೇ ಹೊರತು ಅವರಿಗೆ ಕ್ಷಮಾದಾನ ನೀಡುವುದಲ್ಲ ಎಂದು ಕಾಂಗ್ರೆಸ್...

5 ವರ್ಷದಲ್ಲಿ ಮನೆ ಕಟ್ಟದಿದ್ದರೆ ಸೈಟ್ ಜಪ್ತಿ:ಮೂಲಸೌಕರ್ಯವಿಲ್ಲದೆ ಮನೆ ಕಟ್ಟಲು ಹೇಗೆ ಸಾಧ್ಯ?ಸರ್ಕಾರದ ಹೊಸ ನಿಯಮಕ್ಕೆ ಬೆಂಗಳೂರಿಗರ ತೀವ್ರ ಆಕ್ರೋಶ

5 ವರ್ಷದಲ್ಲಿ ಮನೆ ಕಟ್ಟದಿದ್ದರೆ ಸೈಟ್ ಜಪ್ತಿ:ಮೂಲಸೌಕರ್ಯವಿಲ್ಲದೆ ಮನೆ ಕಟ್ಟಲು ಹೇಗೆ ಸಾಧ್ಯ?ಸರ್ಕಾರದ ಹೊಸ ನಿಯಮಕ್ಕೆ ಬೆಂಗಳೂರಿಗರ ತೀವ್ರ ಆಕ್ರೋಶ

by Shwetha
August 3, 2026
0

ಖಾಲಿ ನಿವೇಶನಗಳನ್ನು ಹೊಂದಿರುವ ಮಾಲೀಕರಿಗೆ ರಾಜ್ಯ ಸರ್ಕಾರ ಶಾಕ್ ನೀಡಲು ಮುಂದಾಗಿದೆ. ಐದು ವರ್ಷಗಳ ಒಳಗಾಗಿ ಮನೆ ನಿರ್ಮಿಸದಿದ್ದರೆ ಅಂತಹ ನಿವೇಶನಗಳನ್ನು ಸರ್ಕಾರವೇ ವಾಪಸ್ ಪಡೆಯುವುದು ಅಥವಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram