chandu
ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟ ಚಂದು ಬಿ ಗೌಡ (chandu) ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ತಮ್ಮ ಬಹುಕಾಲದ ಗೆಳತಿ ಶಾಲಿನಿ ನಾರಾಯಣ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಕನ್ನಡದ ಕಿರುತೆರೆ ಮತ್ತು ಬೆಳ್ಳಿ ಪರದೆಮೇಲೆಯೂ ಮಿಂಚುತ್ತಿರುವ ನಟ ಚಂದು ಇದೇ ತಿಂಗಳು ಅಕ್ಟೋಬರ್ 29ರಂದು ಶಾಲಿನಿಯವರೊಂದಿಗೆ ಹಸೆಮಣೆಯೇರಲಿದ್ದಾರೆ.
ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ಚಂದು ಶಾಲಿನಿ ಅವರನ್ನ ವರಿಸಲಿದ್ದಾರೆ.
ಚಂದು ಅವರ ಕೈಹಿಡಿಯುತ್ತಿರುವ ಶಾಲಿನಿ ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಈ ಜೋಡಿ ಸುಮಾರು 4 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಇದೀಗ ಅಂತಿಮವಾಗಿ ವಿವಾಹ ಬಂಧನಕ್ಕೆ ಒಳಗಾಗಲು ಸಜ್ಜಾಗಿದೆ.
ಇನ್ನೂ ನಟ ಚಂದು ತೆಲುಗು ಧಾರಾವಾಹಿಯಲ್ಲಿಯೂ ಮಿಂಚುತ್ತಿದ್ದಾರೆ.
ತೆಲುಗಿನ ಸೂಪರ್ ಹಿಟ್ ತ್ರಿನಯನಿ ಧಾರವಾಹಿಯಲ್ಲಿ ಚಂದು ನಟಿಸುತ್ತಿದ್ದಾರೆ. ಬೇರೆ ಭಾಷೆಯಲ್ಲೂ ಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ.
ಚಂದು ಕಿರುತೆರೆ ಅಷ್ಟೇ ಅಲ್ಲ ಬಿಗ್ ಸ್ಕ್ರೀನ್ ಮೇಲೂ ಮಿಂಚುತ್ತಿದ್ದಾರೆ.
ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದಲ್ಲಿ ಚಂದು ಕಾಣಿಸಿಕೊಳ್ತಿದ್ದಾರೆ.
ಈ ಮೂಲಕ ಮೊದಲ ಬಾರಿಗೆ ಚಂದು ನೆಗೆಟಿವ್ ಶೇಡ್ ಗೆ ಬಣ್ಣ ಹಚ್ಚಿದ್ದಾರೆ.
ಇನ್ನೂ ಚಂದು ಅವರು ಕುಷ್ಕ, ಜಾಕ್ ಪಾಟ್, ಕಮರೊಟ್ಟು ಚಕ್ ಪೋಸ್ಟ್, ಶ್ರೀ ಸೇರಿದಂತೆ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ಇನ್ನೂ ಸರಳವಾಗಿ ಶಾಸ್ತ್ರೋಕ್ತವಾಗಿ ಚಂದು ಅವರು ಶಾಲಿನಿ ಅವರ ಕೊರಳಿಗೆ ಮಾಂಗಲ್ಯಧಾರಣೆ ಮಾಡಲಿದ್ದಾರೆ.
ನಟಿ ಪ್ರಣಿತಾ ಸುಭಾಷ್ ಹೆಸರಲ್ಲಿ ಲಕ್ಷ ಲಕ್ಷ ಪಂಗನಾಮ: ದೂರು ದಾಖಲು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel