ಈ ಬಾರಿಯ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಲೋಗೋ, ಹೊಸ ಹುರುಪಿನಿಂದ ಅಖಾಡಕ್ಕೆ ಇಳಿಯಲಿದೆ. ಕಳೆದೆರಡು ದಿನಗಳಿಂದ ಹರಿದಾಡ್ತಿದ್ದ ಅಂತೆ-ಕಂತೆಗಳಿಗೆಲ್ಲಾ ಆರ್ ಸಿಬಿ ಬ್ರೇಕ್ ಹಾಕಿ ಎಲ್ಲದಕ್ಕೂ ಉತ್ತರ ಕೊಟ್ಟಿದೆ. ರಾಯಲ್ ಚಾಲೆಂಜರ್ಸ್ ಮರಳಿ ಸಾಮಾಜಿಕ ಜಾಲತಾಣಗಳಿಗೆ ಎಂಟ್ರಿ ಕೊಟ್ಟಿದ್ದು, ವಿ ಆರ್ ಬ್ಯಾಕ್ ಅಂತಿದ್ದಾರೆ. ಇದರ ಜೊತೆಗೆ 13ನೇ ಸೀಸನ್ ನ ಲೋಗೋದಲ್ಲೂ ಕೂಡ ಬದಲಾವಣೆ ಮಾಡಿದೆ. ನ್ಯೂ ಆರ್ ಸಿಬಿ, ನ್ಯೂ ಲೋಗೋ, ನ್ಯೂ ಡಿಕೇಡ್ ಅಂತಾ ಕ್ಯಾಪ್ಶನ್ ಕೊಟ್ಟು ಆರ್ ಸಿಬಿ ತನ್ನ ಟ್ವಿಟ್ಟರ್ ಪೇಜ್ ನಲ್ಲಿ ಹಂಚಿಕೊಂಡಿದೆ.
ಎರಡು ದಿನಗಳಿಂದೆ ಆರ್ ಸಿಬಿಯ ಎಲ್ಲಾ ಸೋಷಿಯಲ್ ಮೀಡಿಯಾಗಳಲ್ಲಿ ಪ್ರೊಫೈಲ್ ಪಿಕ್ ಗಳು ಹಾಗೂ ಕವರ್ ಫೋಟೋಗಳು ನಾಪತ್ತೆಯಾಗಿದ್ದವು. ಇದಕ್ಕೆ ಕಾರಣ ಏನು ಎಂದು ಆರ್‌ಸಿಬಿ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದರು. ಈ ಬಾರಿ ಆರ್ ಸಿಬಿಯ ಲೋಗೋ ಹಾಗೂ ಹೆಸರಿನಲ್ಲಿ ಭಾರೀ ಬದಲಾವಣೆ ಆಗುತ್ತೆ ಅಂತಾ ಹೇಳಲಾಗಿತ್ತು. ಅದರಂತೆ ಆರ್ ಸಿಬಿ ಮತ್ತೆ ಸೋಷಿಯಲ್ ಮೀಡಿಯಾಗೆ ವಿನೂತನ ಹೆಜ್ಜೆಯೊಂದಿಗೆ ವಾಪಸ್ ಆಗಿದೆ.