ರಾಜ್ಯದಲ್ಲಿ ಕ್ವಾರಂಟೈನ್ ನಲ್ಲಿರುವವರಿಗೆ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರ ಸಂದೇಶ ನೀಡಿದ್ದಾರೆ.
ಇಡೀ ವಿಶ್ವ ಇಂದು ಕೊರೋನಾ ವೈರಾಣುವಿನ ವಿರುದ್ಧ ಹೋರಾಡುತ್ತಿದೆ. ಈ ನಿಟ್ಟಿನಲ್ಲಿ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಆದೇಶದಂತೆ ಕರ್ನಾಟಕವೂ ಸೇರಿ ಇಡೀ ದೇಶ ಲಾಕ್ ಡೌನ್ ಆಗಿದೆ. ರಾಜ್ಯಸರ್ಕಾರ ಜನರ ಸುರಕ್ಷತೆಗಾಗಿ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಇನ್ನೂ 2 ವಾರಗಳ ಕಾಲ ಲಾಕ್ ಡೌನ್ ಜಾರಿಯಲ್ಲಿರಲಿದೆ. ನಿಮಗೆ ವಿಧಿಸಿರುವ ನಿರ್ಬಂಧಗಳನ್ನು ಶಿಸ್ತಿನಿಂದ ಪಾಲಿಸಿ, ಸೋಂಕು ಹರಡದಂತೆ ತಡೆಗಟ್ಟಿ. ದಯವಿಟ್ಟು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬೇಡಿ, ಮನೆಯಲ್ಲೇ ಇರಿ, ಸುರಕ್ಷತಾ ಕ್ರಮಗಳ ಪಾಲನೆ ಮಾಡಿ ಎಂದು ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮನವಿ ಮಾಡಿದ್ದಾರೆ.
ವಿದೇಶಿ ದೇಣಿಗೆಗೆ ಕೇಂದ್ರದ ಬ್ರೇಕ್: ಭಾರತದ ಆಂತರಿಕ ಮಸೂದೆಯನ್ನು ಕ್ರೈಸ್ತ ವಿರೋಧಿ ಎಂದ ಅಮೆರಿಕ ಸಂಸದ
ಭಾರತ ಸರ್ಕಾರವು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ (FCRA) ತರಲು ಉದ್ದೇಶಿಸಿರುವ ನೂತನ ತಿದ್ದುಪಡಿ ಮಸೂದೆ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಮಸೂದೆಯನ್ನು...








