ನವದೆಹಲಿ : ಭಾರತದಲ್ಲಿ ಕೊರೊನಾ(Covid-19 India ) ಸೋಂಕಿನ ಆರ್ಭಟ ಮುಂದುವರಿದಿದ್ದು, ಇದೀಗ ಕೊರೊನಾ(Covid-19 India) ಸೋಂಕಿತರ ಸಂಖ್ಯೆ 68 ಲಕ್ಷದ ಗಡಿ ದಾಟಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ಪ್ರಕಾರ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 78,524 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
ನಿನ್ನೆ ಒಂದೇ ದಿನ ಕೊರೊನಾಗೆ 971 ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 68,35,656ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 1,05,526ಕ್ಕೆ ತಲುಪಿದೆ.
ಭಾರತದೊಂದಿಗಿನ ಕಾರ್ಯತಂತ್ರ ಸಂಬಂಧಗಳಿಗೆ ಜಪಾನ್ ಪ್ರಾಮುಖ್ಯತೆ – ಮೊಟೆಗಿ
ದೇಶದ ಒಟ್ಟು 68,35,656 ಕೊರೊನಾ ಸೋಂಕಿತರ ಪೈಕಿ ಸದ್ಯ 9,02,425 ಸಕ್ರಿಯ ಪ್ರಕರಣಗಳಿವೆ. 58,27,705 ಮಂದಿ ಹೆಮ್ಮಾರಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕಳೆದ 24 ಗಂಟೆಯಲ್ಲಿ 11,94,321 ಜನರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. ಅಕ್ಟೋಬರ್ 7ರವರೆಗೆ 8,34,65,975 ಸ್ಯಾಂಪಲ್ ಗಳನ್ನು ಟೆಸ್ಟ್ ಮಾಡಲಾಗಿದೆ.
ಇನ್ನು ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 14,578, ಕರ್ನಾಟಕದಲ್ಲಿ 10,947, ಕೇರಳ 10,606 ಪ್ರಕರಣಗಳು ದಾಖಲಾಗಿದೆ.
ಎಂ.ರಾಜೇಶ್ವರ ರಾವ್ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ)ನ ಹೊಸ ಉಪ ಗವರ್ನರ್
ಕರ್ನಾಟಕದಲ್ಲಿ ನಿನ್ನೆ ಒಂದೇ ದಿನ 10,947 ಮಂದಿಗೆ ಸೋಂಕು ಬಂದಿದ್ದು, ಆಸ್ಪತ್ರೆಯಿಂದ 9,832 ಮಂದಿ ಬಿಡುಗಡೆಯಾಗಿದ್ದಾರೆ.
113 ಮಂದಿ ಇಂದು ಕೊರೊನಾಗೆ ಬಲಿಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 6,68,652ಕ್ಕೆ ಏರಿಕೆಯಾಗಿದೆ.
ಒಟ್ಟು ಕೊರೊನಾ ಸೋಂಕಿತರ ಪೈಕಿ 5,42,906 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ 1,16,153 ಸಕ್ರೀಯ ಪ್ರಕರಣಗಳಿವೆ. ಒಟ್ಟು 9,574 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.









