ADVERTISEMENT
Friday, April 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅರ್.ಆರ್ ನಗರಕ್ಕೆ `ಡಿ ಬಾಸ್’ ಎಂಟ್ರಿ, ಶಿರಾಕ್ಕೆ ಹುಲಿಯಾ; ರಂಗೇರಿದ ಉಪಕದನ..!

Kariyappa N by Kariyappa N
October 29, 2020
in Newsbeat, Politics, Samagra karnataka, ರಾಜ್ಯ
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಇಂದು ಪ್ರಚಾರದ ಅಬ್ಬರ ಜೋರಾಗಲಿದ್ದು, ತಾರಾ ಮೆರೆಗು ಪಡೆಯಲಿದೆ.
ಅದರಲ್ಲೂ ಶಿರಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ, ನಳಿನ್‍ಕುಮಾರ್ ಕಟೀಲ್ ಸೇರಿದಂತೆ ಮೂರು ಪಕ್ಷಗಳ ಘಟಾನುಘಟಿಗಳು ಧೂಳೆಬ್ಬಿಸಲಿದ್ದಾರೆ.
ಇತ್ತ ಆರ್.ಆರ್ ನಗರದಲ್ಲಿ ಕುರುಕ್ಷೇತ್ರ ಚಿತ್ರದ ನಿರ್ಮಾಪಕರೂ ಆಗಿರುವ ಮುನಿರತ್ನ ಪರ ಡಿಬಾಸ್ ಖ್ಯಾತಿಯ ನಟ ದರ್ಶನ್ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನ ಪಾತ್ರದಲ್ಲಿ ನಟಿಸಿದ್ದ ದರ್ಶನ್ ನಟಿಸಿದ್ದರು. ಹೀಗಾಗಿ ಇಬ್ಬರೂ ಆತ್ಮೀಯರಾಗಿದ್ದು, ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ಕ್ಯಾಂಪೇನ್ ಮಾಡುತ್ತಿದ್ದಾರೆ.

darshan
ಕಳೆದ ವರ್ಷ ಮಂಡ್ಯದ ನಡೆದ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಪರ ಪ್ರಚಾರ ನಡೆಸಿದ್ದ ನಟ ದರ್ಶನ್, ಪ್ರಚಾರ ಕಣದಲ್ಲಿ ಭಾರಿ ಹವಾ ಎಬ್ಬಿಸಿದ್ದರು. ರಾಕಿಂಗ್ ಸ್ಟಾರ್ ಯಶ್ ಹಾಗೂ ದರ್ಶನ್‍ರ ಜೋಡಿ ಪ್ರಚಾರ ಮಂಡ್ಯ ಚುನಾವಣಾ ಕಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಅಂದು ಸಿಎಂ ಆಗಿದ್ದ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಗೆಲುವಿಗಾಗಿ ನಡೆಸಿದ ಕಸರತ್ತು ವಿಫಲವಾಗಿತ್ತು. ಯಶ್ ಹಾಗೂ ದರ್ಶನ್‍ರನ್ನು ಜೋಡೆತ್ತು, ಕಳ್ಳೆತ್ತು ಎಂದು ಕುಮಾರಸ್ವಾಮಿ ಟೀಕಿಸಿದ್ದನ್ನೇ ಅಸ್ತ್ರವಾಗಿ ಬಳಸಿಕೊಂಡು ತಮ್ಮ `ಮದರ್ ಇಂಡಿಯಾ’ಗೆ ಗೆಲುವಿಗೆ ಶ್ರಮಿಸಿದ್ದರು.

Related posts

ಐಪಿಎಲ್‌ನಲ್ಲಿ ಚಕ್ಕಿಂಗ್ ವಿವಾದ: ಕೃನಾಲ್ ಪಾಂಡ್ಯ ಬೌಲಿಂಗ್ ಶೈಲಿ ಕಾನೂನುಬಾಹಿರವೇ? ಬಿಸಿಸಿಐಗೆ ದೂರು ನೀಡಲಿದೆಯೇ ಸಿಎಸ್‌ಕೆ?

ಐಪಿಎಲ್‌ನಲ್ಲಿ ಚಕ್ಕಿಂಗ್ ವಿವಾದ: ಕೃನಾಲ್ ಪಾಂಡ್ಯ ಬೌಲಿಂಗ್ ಶೈಲಿ ಕಾನೂನುಬಾಹಿರವೇ? ಬಿಸಿಸಿಐಗೆ ದೂರು ನೀಡಲಿದೆಯೇ ಸಿಎಸ್‌ಕೆ?

April 10, 2026
ವಂದೇ ಮಾತರಂ’ ಹಾಡಲು ನಿರಾಕರಣೆ: “ಇಷ್ಟವಿಲ್ಲದಿದ್ದರೆ ಪಾಕಿಸ್ತಾನಕ್ಕೆ ಹೋಗಿ” ಎಂದ ಕಾಂಗ್ರೆಸ್!

ವಂದೇ ಮಾತರಂ’ ಹಾಡಲು ನಿರಾಕರಣೆ: “ಇಷ್ಟವಿಲ್ಲದಿದ್ದರೆ ಪಾಕಿಸ್ತಾನಕ್ಕೆ ಹೋಗಿ” ಎಂದ ಕಾಂಗ್ರೆಸ್!

April 10, 2026

rr nagar
ಆರ್.ಆರ್ ನಗರ ಕ್ಷೇತ್ರದಲ್ಲಿ ಮಂಡ್ಯದಲ್ಲಿ ಸೋತಿರುವ ನಿಖಿಲ್ ಕುಮಾರಸ್ವಾಮಿ ಒಂದು ಸುತ್ತಿನ ಪ್ರಚಾರ ನಡೆಸಿ ತೆರಳಿರುವ ಬೆನ್ನಲ್ಲೇ ಡಿಬಾಸ್ ದರ್ಶನ್ ಎಂಟ್ರಿ ಕೊಡುತ್ತಿದ್ದಾರೆ.
ಜತೆಗೆ ಮುನಿರತ್ನ ಪರ ನಟಿ ತಾರಾ, ಸಚಿವ ಡಾ.ಕೆ ಸುಧಾಕರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಸೇರಿದಂತೆ ಹಲವು ನಾಯಕರು ಪ್ರಚಾರ ನಡೆಸಲಿದ್ದಾರೆ.

ಶಿರಾಕ್ಕೆ ಮೂರು ಪಕ್ಷಗಳ ಘಟಾನುಘಟಿಗಳ ಎಂಟ್ರಿ
ಆರ್‍ಆರ್ ನಗರದಂತೆಯೇ ಶಿರಾದಲ್ಲಿ ಕೂಡ ಪ್ರಚಾರದ ಅಬ್ಬರ ಜೋರಾಗಿದೆ. ಇಂದು ಮೂರು ಪಕ್ಷಗಳ ಘಟಾನುಘಟಿಗಳು ಶಿರಾ ಕ್ಷೇತ್ರದಲ್ಲಿ ದೂಳೆಬ್ಬಿಸಲಿದ್ದಾರೆ.

sira camphain
ಮಾಜಿ ಸಚಿವ ಟಿ.ಬಿ ಜಯಚಂದ್ರ ಪರ ಹುಲಿಯಾ ಖ್ಯಾತಿಯ ಮಾಜಿ ಸಿಎಂ ಸಿದ್ದರಾಮಯ್ಯ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಮೊದಲು ಸುದ್ದಿಗೋಷ್ಠಿ ನಡೆಸಿ ನಂತರ ಕಳ್ಳಂಬೆಳ್ಳ ವ್ಯಾಪ್ತಿಯಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಪರ ಮತಬೇಟೆ ನಡೆಸಲಿದ್ದಾರೆ.

siddu prachara
ಜೆಡಿಎಸ್‍ನ ದಳಪತಿಗಳೂ ಕೂಡ ಇಂದು ಅಮ್ಮಾಜಮ್ಮ ಪರ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಕಳ್ಳಂಬೆಳ್ಳ ಸೇರಿದಂತೆ 15 ಗ್ರಾಮಗಳಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ.  ಇನ್ನೊಂದೆಡೆ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಕೂಡ ಜೆಡಿಎಸ್ ಅಭ್ಯರ್ಥಿ ಪರ ಮತಬೇಟೆ ನಡೆಸಲಿದ್ದಾರೆ.
ಕಮಲ ಪಕ್ಷ ಬಿಜೆಪಿಯಿಂದಲೂ ಶಿರಾ ಕ್ಷೇತ್ರದಲ್ಲಿ ಇಂದು ಅಬ್ಬರದ ಪ್ರಚಾರ ನಡೆಯಲಿದೆ. ನಿನ್ನೆಯಿಂದ ಶಿರಾದಲ್ಲೇ ಠಿಕಾಣಿ ಹೂಡಿರುವ ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಇಂದೂ ಪ್ರಚಾರ ಮುಂದುವರೆಸಲಿದ್ದಾರೆ. ಕಟೀಲ್ ಅಲ್ಲದೆ, ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ ಹಾಗೂ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರಚಾರ ನಡೆಸಲಿದ್ದಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: by election campaindboss darshankumaraswamimuniratnanalinkumar kateelRR NagarsiddaramaihSirat.bi jayachandra
ShareTweetSendShare
Join us on:

Related Posts

ಐಪಿಎಲ್‌ನಲ್ಲಿ ಚಕ್ಕಿಂಗ್ ವಿವಾದ: ಕೃನಾಲ್ ಪಾಂಡ್ಯ ಬೌಲಿಂಗ್ ಶೈಲಿ ಕಾನೂನುಬಾಹಿರವೇ? ಬಿಸಿಸಿಐಗೆ ದೂರು ನೀಡಲಿದೆಯೇ ಸಿಎಸ್‌ಕೆ?

ಐಪಿಎಲ್‌ನಲ್ಲಿ ಚಕ್ಕಿಂಗ್ ವಿವಾದ: ಕೃನಾಲ್ ಪಾಂಡ್ಯ ಬೌಲಿಂಗ್ ಶೈಲಿ ಕಾನೂನುಬಾಹಿರವೇ? ಬಿಸಿಸಿಐಗೆ ದೂರು ನೀಡಲಿದೆಯೇ ಸಿಎಸ್‌ಕೆ?

by Shwetha
April 10, 2026
0

ಐಪಿಎಲ್ 2026ರ ಆವೃತ್ತಿಯು ರೋಚಕ ಪಂದ್ಯಗಳ ಜೊತೆಗೆ ಇದೀಗ ಹೊಸದೊಂದು ವಿವಾದಕ್ಕೆ ಸಾಕ್ಷಿಯಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರಮುಖ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವರ...

ವಂದೇ ಮಾತರಂ’ ಹಾಡಲು ನಿರಾಕರಣೆ: “ಇಷ್ಟವಿಲ್ಲದಿದ್ದರೆ ಪಾಕಿಸ್ತಾನಕ್ಕೆ ಹೋಗಿ” ಎಂದ ಕಾಂಗ್ರೆಸ್!

ವಂದೇ ಮಾತರಂ’ ಹಾಡಲು ನಿರಾಕರಣೆ: “ಇಷ್ಟವಿಲ್ಲದಿದ್ದರೆ ಪಾಕಿಸ್ತಾನಕ್ಕೆ ಹೋಗಿ” ಎಂದ ಕಾಂಗ್ರೆಸ್!

by Shwetha
April 10, 2026
0

ಮಧ್ಯಪ್ರದೇಶದ ಇಂದೋರ್ ರಾಜಕೀಯದಲ್ಲಿ 'ವಂದೇ ಮಾತರಂ' ಗೀತೆಯ ವಿಚಾರವಾಗಿ ಭಾರೀ ಬಿರುಗಾಳಿ ಎದ್ದಿದೆ. ಮುನ್ಸಿಪಲ್ ಕಾರ್ಪೊರೇಷನ್ ಸಭೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಲು ನಿರಾಕರಿಸಿದ ಇಬ್ಬರು ಕಾಂಗ್ರೆಸ್ ಸದಸ್ಯೆಯರು, "ಇಸ್ಲಾಂನಲ್ಲಿ...

‘ಬಂಗಾಳಕ್ಕೆ ಇವೇ ನನ್ನ ಗ್ಯಾರಂಟಿಗಳು’.. ಮೋದಿ ವಾಗ್ದಾಳಿ

‘ಬಂಗಾಳಕ್ಕೆ ಇವೇ ನನ್ನ ಗ್ಯಾರಂಟಿಗಳು’.. ಮೋದಿ ವಾಗ್ದಾಳಿ

by Shwetha
April 10, 2026
0

ಪಶ್ಚಿಮ ಬಂಗಾಳದಲ್ಲಿ ಟಿಎಮ್'ಸಿ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಟಿಎಮ್'ಸಿ ಆಡಳಿತ ಖಾಸಗಿ ಉದ್ಯೋಗಗಳನ್ನು ಹಾಳುಮಾಡಿದ್ದು, ನುಸುಳುಕೋರರಿಗೆ ಉದ್ಯೋಗ ನೀಡಲಾಗಿದೆ ಎಂದು...

2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ದಾಖಲೆ ಮಟ್ಟದ 86% ಫಲಿತಾಂಶ

2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ದಾಖಲೆ ಮಟ್ಟದ 86% ಫಲಿತಾಂಶ

by Shwetha
April 10, 2026
0

2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ಈ ವರ್ಷ ದಾಖಲೆಯ ಮಟ್ಟದಲ್ಲಿ 86% ಫಲಿತಾಂಶ ಬಂದಿದೆ. ಕಳೆದ ವರ್ಷ 73.45% ಇದ್ದ ಫಲಿತಾಂಶಕ್ಕೆ ಹೋಲಿಸಿದರೆ,...

ದಿನ ಭವಿಷ್ಯ (09-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (10-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 10, 2026
0

ದಿನ ಭವಿಷ್ಯ: 10-04-2026 ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಮಿಶ್ರ ಫಲಗಳು ದೊರೆಯಲಿವೆ. ಉದ್ಯೋಗ ಕ್ಷೇತ್ರದಲ್ಲಿ ಕೆಲಸದ ಒತ್ತಡ ಹೆಚ್ಚಾಗಲಿದ್ದು ಸಹೋದ್ಯೋಗಿಗಳ ಸಹಕಾರ ಅಗತ್ಯವಾಗಿ ಬೇಕಾಗುತ್ತದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram