DK shivkumar Daughter
ಐಶ್ವರ್ಯ, ಅಮರ್ಥ್ಯ ಅದ್ಧೂರಿ ನಿಶ್ಚಿತಾರ್ಥ : ಬಿಎಸ್ ವೈ, ಸಿದ್ದರಾಮಯ್ಯ, ಅಶೋಕ್ ಭಾಗಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಮನೆಯಲ್ಲಿ ಇಂದು ನಿಶ್ಚಿತಾರ್ಥದ ಸಂಭ್ರಮ ಮನೆ ಮಾಡಿದೆ. ಡಿಕೆಶಿ ಪುತ್ರಿ ಐಶ್ವರ್ಯ ಹಾಗೂ ಕಾಫಿ ಡೇ ಸಿದ್ಧಾರ್ಥ್ ಹೆಗ್ಡೆ ಪುತ್ರ ಅಮರ್ಥ್ಯ ಸುಬ್ರಮಣ್ಯ ಹೆಗ್ಡೆ ಅವರ ಅದ್ಧೂರಿ ನಿಶ್ಚಿತಾರ್ಥ ಅತ್ಯಂತ ಸಡಗರ ಹಾಗೂ ಶಾಸ್ತ್ರೋಕ್ತವಾಗಿ ನೆರವೇರಿತು. ಕೊರೊನಾ ಕಾರಣ ಕಡಿಮೆ ಜನರಿಗೆ ಆಹ್ವಾನ ನೀಡಲಾಗಿತ್ತು. ಸಮಾರಂಭದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ಸಚಿವರಾದ ಆರ್ ಅಶೋಕ್ , ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ರು. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಖಾಸಗಿ ಹೋಟೆಲ್ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು. ಸುಮಾರು 250 ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಇನ್ನೂ ಅತಿಥಿಗಳಿಗಾಗಿ ಹೋಟೆಲ್ ನಲ್ಲಿ 50 ರೂಮ್ ಗಳು ಬುಕ್ ಆಗಿವೆ.
ಸಂಪುಟ ವಿಸ್ತರಣೆ ಯಾವಾಗ..? ನಳಿನ್ ಕುಮಾರ್ ಕಟೀಲ್ ಹೇಳಿದ್ದೇನು..!
ಬೆಳಗ್ಗೆ 11 ಗಂಟೆಗೆ ನಿಶ್ಚಿತಾರ್ಥ ನಡೆಯಿತು. ಬಳಿಕ ಸಿಎಂ ಆಗಮಿಸಿ ನವ ಜೋಡಿಗೆ ಹಾರೈಸಿದರು. ಐಶ್ವರ್ಯ ಹಾಗೂ ಅಮರ್ಥ್ಯ ಗುಲಾಬಿ ಬಣ್ಣದಲ್ಲಿ ಮಿಂಚಿದರು.. ಕೇವಲ ಆಪ್ತರು, ಸ್ನೇಹಿತರು, ಕುಟುಂಬದವರಿಗೆ ಮಾತ್ರವೇ ಎಂಗೇಜ್ಮೆಂಟ್ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಅನೇಕ ಗಣ್ಯರು ಬಂದು ನವಜೋಡಿಗೆ ಶುಭ ಹಾರೈಸಿ ಆಶಿರ್ವದಿಸಿದ್ದಾರೆ.
DK shivkumar Daughter
ದಿಲ್ಲಿಯಿಂದ ಬರಿಗೈಲಿ ಬಿಎಸ್ವೈ; `ರಾಜಾಹುಲಿ’ ಬದಲಾವಣೆ ಮುನ್ಸೂಚನೆ ಎಂದ ಕೆ.ಎನ್ ರಾಜಣ್ಣ..!
ಸಿಎಂ ಯಡಿಯೂರಪ್ಪ ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದಾರೆ: ಬಿ.ಸಿ.ಪಾಟೀಲ್
ಮರಾಠ ಅಭಿವೃದ್ದಿ ಪ್ರಾಧಿಕಾರ ರಚನೆ; ಹುಬ್ಬಳ್ಳಿಯಲ್ಲಿ ಕರವೇ ಪ್ರತಿಭಟನೆ
ಸಂಪುಟ ಸರ್ಕಸ್ಸೋ..ನಾಯಕತ್ವ ಬದಲಾವಣೆಯೋ; ದಿಲ್ಲಿಯಿಂದ ಪಟ್ಟಿ ಬರಬೇಕು ಎಂದಿದ್ದೇಕೆ ಬಿಎಸ್ವೈ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel