ADVERTISEMENT
Tuesday, September 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಗಿಲ್ವಾ ಎಂಎಲ್ ಸಿ ಭಾಗ್ಯ!?

admin by admin
June 13, 2020
in Newsbeat, Samagra karnataka, ರಾಜ್ಯ
Share on FacebookShare on TwitterShare on WhatsappShare on Telegram

ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಗಿಲ್ವಾ ಎಂಎಲ್ ಸಿ ಭಾಗ್ಯ!?

ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿ ರಾಜ್ಯದಲ್ಲಿ ಕಮಲ ಅರಳೋದಕ್ಕೆ ಕಾರಣವಾದ ಹೆಚ್.ವಿಶ್ವನಾಥ್ ಅಂಡ್ ಟೀಂಗೆ ಭಾರಿ ನಿರಾಸೆ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಅದರಲ್ಲೂ ಬೈ ಎಲೆಕ್ಷನ್ ನಲ್ಲಿ ಸೋತಿರುವ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಗೆ ರಾಜ್ಯ ಬಿಜೆಪಿ ಭಾರಿ ಹೊಡೆತ ನೀಡಲಿದೆ. ಒಂದೇ ಮಾತಿನಲ್ಲಿ ಹೇಳೋದಾದ್ರೆ ಮಂತ್ರಿಗಿರಿ ಕನಸಿನಲ್ಲಿರುವ ಈ ಇಬ್ಬರು ನಾಯಕರ ಕನಸು ಕನಸಾಗಿಯೇ ಉಳಿಯಲಿದೆ.

Related posts

dk-shivakumar-5-percent-park-land-proposal-lalbagh-drought-declaration

ಪಾರ್ಕ್ ಜಾಗದ ಶೇ.5 ರಷ್ಟು ಬಳಕೆ ಪ್ರಸ್ತಾವನೆ ವಿವರಗಳ ಪರಿಶೀಲನೆ: ಸಿಎಂ ಡಿ.ಕೆ. ಶಿವಕುಮಾರ್

September 1, 2026
hv-ramesh-suspended-duty-lapse-bengaluru-street-light-maintenance |

ಕರ್ತವ್ಯ ಲೋಪ: ಕಾರ್ಯಪಾಲಕ ಅಭಿಯಂತರರು (ವಿದ್ಯುತ್) ಹೆಚ್. ವಿ. ರಮೇಶ್ ಅಮಾನತು.

September 1, 2026

ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಗಿಲ್ಲ ಎಂಎಲ್ ಸಿ ಭಾಗ್ಯ! ಈ ಮಾತು ನಾವು ಹೇಳುತ್ತಿರೋದಲ್ಲ. ಬದಲಾಗಿ ಬಿಜೆಪಿಯ ಪ್ರಭಾವಿ ಮುಖಂಡರೇ ಹೇಳ್ತಿರೋ ಮಾತು.
ಹೌದು..! ಉಪಕದನದಲ್ಲಿ ಸೋತು ನಿರಾಸೆ ಅನುಭವಿಸಿದ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಎಂಎಲ್ ಸಿಗಳಾಗುವ ಮೂಲಕ ಸಚಿವರಾಗಬಹುದೆಂದುಕೊಂಡಿದ್ದರು. ಅದೇ ವಿಶ್ವಾಸದಲ್ಲಿ ಕೂಡ ಇದ್ದಾರೆ. ಆದ್ರೆ ಬಿಜೆಪಿ ನಾಯಕರು ಇವರ ಕನಸಿಗೆ ನೀರೆರಚುವ ಮಾತುಗಳನ್ನಾಡುತ್ತಿದ್ದಾರೆ. ಅದಕ್ಕೆ ಉದಾಹರಣೆ ಡಿಸಿಎಂ ಅಶ್ವಥ್ ನಾರಾಯಣ ನೀಡಿದ ಹೇಳಿಕೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಶ್ವಥ್ ನಾರಾಯಣ್, ಉಪಚುನಾವಣೆಯಲ್ಲಿ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಅವರಿಗೆ ಪಕ್ಷದ ಟಿಕೆಟ್ ನೀಡಲಾಗಿತ್ತು. ಆದ್ರೆ ಅವರು ಸೋಲು ಕಂಡಿದ್ದಾರೆ. ನಾವು ವಿಧಾನ ಪರಿಷತ್ ನಲ್ಲಿ ಟಿಕೆಟ್ ನೀಡುತ್ತೇವೆ ಎಂದು ಎಲ್ಲೂ ಹೇಳಿಲ್ಲ ಎಂದು ಬಾಂಬ್ ಸಿಡಿಸಿದ್ದಾರೆ.

ಡಿಸಿಎಂರ ಇದೇ ಹೇಳಿಕೆ ಈಗ ವಿಶ್ವನಾಥ್ ಅಂಡ್ ಟೀಂ ನಲ್ಲಿ ಮಿಂಚಿನ ಸಂಚಲನವನ್ನು ಸೃಷ್ಠಿ ಮಾಡಿದೆ. ಅಲ್ಲದೆ ರಾಜಕೀಯ ಪಂಡಿತರೂ ಕೂಡ ವಿಶ್ವನಾಥ್, ನಾಗರಾಜ್ ಗೆ ಎಂಎಲ್ ಸಿ ಟಿಕೆಟ್ ಡೌಟ್ ಎನ್ನುತ್ತಿದ್ದಾರೆ.

‘ಹಣೆಯಲ್ಲಿ ಬರೆದಿದ್ದರೇ ಆಗುತ್ತೆ’
ಬಿಜೆಪಿ ನಾಯಕರ ಹೇಳಿಕೆಗಳು ಒಂದು ಕಡೆಯಾದ್ರೆ.. ಕೆಲ ದಿನಗಳ ಹಿಂದೆ ಎಂಟಿಬಿ ನಾಗರಾಜ್ ಅವರೇ ತಮಗೆ ಎಂಎಲ್ ಸಿ ಟಿಕೆಟ್ ಸಿಗೋದು ಡೌಟ್ ಎನ್ನುವ ರೀತಿ ಮಾತನಾಡಿದ್ದಾರೆ.
ಒಂದು ವಾರದ ಹಿಂದೆ ವಿಧಾನಪರಿಷತ್ ಚುನಾವಣೆ ವಿಚಾರವಾಗಿ ಸಿಎಂರನ್ನು ಭೇಟಿ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ, ಪರಿಷತ್ ಚುನಾವಣೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಏನು ತಿರ್ಮಾನ ತೆಗೆದುಕೊಳ್ಳುತ್ತಾರೋ ಆ ತೀರ್ಮಾನಕ್ಕೆ ನಮ್ಮ ಒಪ್ಪಿಗೆ ಇದೆ, ತ್ಯಾಗಕ್ಕೆ ಬೆಲೆ ಸಿಗುವ ಸಮಯ ಬಂದಾಗ ಸಿಗುತ್ತದೆ ಅದಕ್ಕೆ ಕಾದು ನೋಡಬೇಕು. ಇನ್ನೂ ಕಾಯುವ ತಾಳ್ಮೆ ಶೇ.100ರಷ್ಟು ಇದೆ. ಜನರಲ್ ಎಲೆಕ್ಷನ್ ಬೇಕಾದರೂ ಬರಲಿ ಅದಕ್ಕೂ ಬೇಕಾದರೂ ಒಂದು ಸಲ ನಿಂತು ಬಿಡೋಣ. ಕೊಟ್ಟ ಮಾತು ಭರವಸೆ ಈಡೇರಿಸಿದ್ದಾರೆ. ಉಪಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಕೊಟ್ಟಿದ್ದಾರೆ. ನಾವು ಸೋತಿದ್ದೇವೆ. ವಿಧಾನ ಪರಿಷತ್ ಗೆ ಹೋಗುವುದು ಹಣೆಬರಹದಲ್ಲಿ ಬರೆದಿದ್ರೆ ಆಗುತ್ತದೆ. ಇಲ್ಲದಿದ್ದರೆ ಆಗಲ್ಲ. ಹಣೆಬರಹದಲ್ಲಿ ಬರೆದಿರಬೇಕು, ದೇವರ ಅನುಗ್ರಹ, ಪಕ್ಷದ ಮುಖಂಡರ ಆಶೀರ್ವಾದ ಇದ್ದಲ್ಲಿ ಮಾತ್ರ ಎಲ್ಲವೂ ಸಿಗುತ್ತದೆ. ಏನಾಗುತ್ತದೆ ಅಂತಾ ಮುಂದೆ ನೋಡೋಣ ಎಂದಿದ್ದಾರೆ.

ಒಟ್ಟಾರೆ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನೇ ನಂಬಿಕೊಂಡಿರುವ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಮಂತ್ರಿಗಳಾಗುತ್ತಾರಾ ಇಲ್ಲವಾ ಎಂಬುವುದಕ್ಕೆ ಕಾಲವೇ ಉತ್ತರಿಸಬೇಕಿದೆ.

Tags: #ಕರ್ನಾಟಕCM BS YADIYURAPPAH vishwanathMlcMTB Nagarajಎಂಟಿಬಿಬೆಂಗಳೂರು
ShareTweetSendShare
Join us on:

Related Posts

dk-shivakumar-5-percent-park-land-proposal-lalbagh-drought-declaration

ಪಾರ್ಕ್ ಜಾಗದ ಶೇ.5 ರಷ್ಟು ಬಳಕೆ ಪ್ರಸ್ತಾವನೆ ವಿವರಗಳ ಪರಿಶೀಲನೆ: ಸಿಎಂ ಡಿ.ಕೆ. ಶಿವಕುಮಾರ್

by admin
September 1, 2026
0

ಬೆಂಗಳೂರು, ಉದ್ಯಾನಗಳಲ್ಲಿ ಶೇ.5ರಷ್ಟು ಜಾಗ ನೀಡುವ ಈ ಪ್ರಸ್ತಾವನೆ ಏಕೆ ಬಂತು, ಹಿಂದಿನವರು ಏನು ಮಾಡಿದ್ದಾರೆ, ಯಾವ ಜಾಗವನ್ನು ಯಾರಿಗೆ ನೀಡಿದ್ದಾರೆ ಎಂಬುದನ್ನು ಪರಿಶೀಲಿಸುತ್ತೇನೆ. ಕಡತ ತರಿಸಿಕೊಂಡು...

hv-ramesh-suspended-duty-lapse-bengaluru-street-light-maintenance |

ಕರ್ತವ್ಯ ಲೋಪ: ಕಾರ್ಯಪಾಲಕ ಅಭಿಯಂತರರು (ವಿದ್ಯುತ್) ಹೆಚ್. ವಿ. ರಮೇಶ್ ಅಮಾನತು.

by admin
September 1, 2026
0

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು (ವಿದ್ಯುತ್) ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಹೆಚ್. ವಿ. ರಮೇಶ್ ರವರು ಜವಾಬ್ದಾರಿಯುತ ಅಧಿಕಾರಿಯಾಗಿದ್ದು, ಬೀದಿ ದೀಪಗಳ ನಿರ್ವಹಣೆಯ ಉಸ್ತುವಾರಿಯನ್ನು...

karnataka-apartment-ownership-and-management-bill-2026-krishna-byre-gowda-vidhana-soudha

* “ಬೆಂಗಳೂರು ಸುಧಾರಣೆಯಾಗಬೇಕೆಂದು ನೀವು ಕೆಲಸ ಮಾಡುತ್ತಿಲ್ಲ, ಹಾಳು ಮಾಡಲೆಂದೇ ಕೆಲಸ ಮಾಡುತ್ತಿದ್ದೀರಾ?”

by admin
September 1, 2026
0

  ಬೆಂಗಳೂರು, ಜಿಬಿಎ ವ್ಯಾಪ್ತಿಯ ಎಲ್ಲಾ 5 ನಗರ ಪಾಲಿಕೆಗಳ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮುಖಚರ್ಯೆ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೊಳಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ...

r-ashoka-bjp-protest-will-not-stop-drought-kpsc-scam-bidadi-township

ಬಿಜೆಪಿಯ ಹೋರಾಟ ನಿಲ್ಲುವುದಿಲ್ಲ, ಇನ್ನಷ್ಟು ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
September 1, 2026
0

ಲಿಂಗಸಗೂರು, ಬಿ.ನಾಗೇಂದ್ರ ರಾಜೀನಾಮೆ ನೀಡಿದ ಕೂಡಲೇ ಬಿಜೆಪಿಯ ಹೋರಾಟ ನಿಲ್ಲುವುದಿಲ್ಲ. ಬರಗಾಲ, ಕೆಪಿಎಸ್‌ಸಿ ಹಗರಣ, ಬಿಡದಿ ಟೌನ್‌ಶಿಪ್‌ ಮೊದಲಾದ ಸಮಸ್ಯೆಗಳನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟದಿಂದಾಗಿ ಇನ್ನಷ್ಟು...

ತಾಯಿಯ ಸ್ಮರಣಾರ್ಥ ಮಾದರಿ ಕಾರ್ಯ: ಸಂಕಷ್ಟದಲ್ಲಿದ್ದ ನಾಲ್ಕು ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾ ವಿತರಿಸಿದ ಕಿಚ್ಚ ಸುದೀಪ್

ತಾಯಿಯ ಸ್ಮರಣಾರ್ಥ ಮಾದರಿ ಕಾರ್ಯ: ಸಂಕಷ್ಟದಲ್ಲಿದ್ದ ನಾಲ್ಕು ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾ ವಿತರಿಸಿದ ಕಿಚ್ಚ ಸುದೀಪ್

by admin
September 1, 2026
0

ಬೆಂಗಳೂರು: ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರು ಬೆಳ್ಳಿಪರದೆಯ ಮೇಲಷ್ಟೇ ಅಲ್ಲದೆ, ನಿಜ ಜೀವನದಲ್ಲೂ ಸಮಾಜಮುಖಿ ಕಾರ್ಯಗಳ ಮೂಲಕ ಸದಾ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಪ್ರೀತಿಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram