ಬಾಗಲಕೋಟೆ: ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಇಂದೂ ಕೂಡ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ ಕಳೆದ ರಾತ್ರಿಯಿಂದ ಬೆಳಿಗ್ಗೆಯವರೆಗೆ ಬಿಡುವ ಕೊಟ್ಟಿದ್ದ ಮಳೆ ಮಧ್ಯಾಹ್ನ ವೇಳೆಗೆ ಮತ್ತೆ ಬಿರುಸುಗೊಂಡಿದೆ.
ಧಾರಾಕಾರ ಮಳೆಯಿಂದ ಬಾದಾಮಿಯ ಬೆಟ್ಟದಲ್ಲಿ ಅಕ್ಕ-ತಂಗಿ ಕಿರು ಜಲಪಾತ ಮೈದುಂಬಿದ್ದು, ಜಲಪಾತ ನೋಡಲು ಜನರು ಮುಗಿಬಿದ್ದಿದ್ದಾರೆ.
ಪ್ರವಾಹದ ನಡುವೆಯೂ ಹಳ್ಳ ದಾಟಲು ಹೋಗಿದ್ದ ಯುವಕ ನೀರುಪಾಲಾಗಿದ್ದಾನೆ. ಮುಧೋಳ ತಾಲೂಕಿನ ಒಂಟಗೋಡಿ ಗ್ರಾಮದ ಸುಭಾಷ್ ಅಡವಿ ಮೃತ ದುರ್ದೈವಿಯಾಗಿದ್ದಾನೆ. ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಸಿ ಯುವಕನ ಶವ ಹೊರ ತೆಗೆಯಲಾಗಿದೆ. ಮೃತ ಯುವಕ ಡಿಸಿಸಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಕಚೇರಿಗೆ ತೆರಳುವ ಆತುರದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಅವಘಡ ಸಂಭವಿಸಿದೆ.