ಮುಂಬುರುವ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯುತ್ತಾ ಇಲ್ವೋ ಗೊತ್ತಿಲ್ಲ… ಆದ್ರೆ ಟಿ-ಟ್ವೆಂಟಿ ವಿಶ್ವಕಪ್ ಬಗ್ಗೆ ಎಲ್ಲಾ ಕ್ರಿಕೆಟಿಗರು ಸಾಕಷ್ಟು ಕನಸು ಕಾಣುತ್ತಿದ್ದಾರೆ. ಇದಕ್ಕೆ ಟೀಮ್ ಇಂಡಿಯಾದ ಟರ್ಬನೇಟರ್ ಹರ್ಭಜನ್ ಸಿಂಗ್ ಕೂಡ ಹೊರತಲ್ಲ. ಟೀಮ್ ಇಂಡಿಯಾದಿಂದ ಹಲವು ವರ್ಷಗಳಿಂದ ದೂರವೇ ಉಳಿದಿರುವ ಹರ್ಭಜನ್ ಮತ್ತೆ ದೇಶದ ಪರ ಆಡಬೇಕು ಅನ್ನೋ ಹೆಬ್ಬಯಕೆಯಲ್ಲಿದ್ದಾರೆ.
ಹೌದು, ಹರ್ಭಜನ್ ಸಿಂಗ್ ಮುಂಬರುವ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಆಡಲು ನಾನು ಫಿಟ್ ಆಗಿದ್ದೇನೆ. ಆಡಲು ರೆಡಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. 2016ರ ಏಷ್ಯಾಕಪ್ ಟಿ-ಟ್ವೆಂಟಿ ಟೂರ್ನಿಯಲ್ಲಿ ಆಡಿದ್ದ ಬಳಿಕ ಭಜ್ಜಿ ಟೀಮ್ ಇಂಡಿಯಾದಿಂದ ದೂರವೇ ಉಳಿದುಕೊಂಡಿದ್ದರು.
ನಾನು ರೆಡಿ ಇದ್ದೀನಿ. ನಾನು ಐಪಿಎಲ್ ನಲ್ಲಿ ಶ್ರೇಷ್ಠ ನಿರ್ವಹಣೆ ಮಾಡಬೇಕು. ಆದ್ರೆ ಬೌಲರ್‍ಗಳಿಗೆ ಐಪಿಎಲ್‍ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುವುದು ಅಷ್ಟೊಂದು ಸುಲಭವಿಲ್ಲ.
ಒಂದು ಮೈದಾನ ಚಿಕ್ಕದಾಗಿರುತ್ತೆ. ಜೊತೆಗೆ ವಿಶ್ವದ ಅಪ್ರತಿಮ ಆಟಗಾರರು ಭಾಗಿಯಾಗಿರುತ್ತಾರೆ. ಶ್ರೇಷ್ಠ ಬ್ಯಾಟ್ಸ್ ಮೆನ್‍ಗಳ ವಿರುದ್ಧ ಬೌಲಿಂಗ್ ಮಾಡುವುದೇ ಒಂದು ದೊಡ್ಡ ಸವಾಲು. ಒಂದು ವೇಳೆ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ್ರೆ ವಿಶ್ವ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬಹುದು. ನಾನು ಪವರ್ ಪ್ಲೇ ಮತ್ತು ಪಂದ್ಯದ ಮಧ್ಯಂತರದಲ್ಲಿ ಬೌಲಿಂಗ್ ಮಡಿ ವಿಕೆಟ್ ಕೂಡ ಪಡೆದುಕೊಂಡಿರುತ್ತೇನೆ ಎಂದರು.
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಯಲ್ಲಿ ಎಲ್ಲರೂ ಗುಣಮಟ್ಟದ ಆಟಗಾರರು ಇರಲ್ಲ. ಪ್ರತಿ ತಂಡದಲ್ಲಿ ಟಾಪ್ ಆರು ಮಂದಿ ಅತ್ಯುತ್ತಮ ಆಟಗಾರರಿರುತ್ತಾರೆ. ಅದ್ರಲ್ಲೂ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ ತಂಡದಲ್ಲಿ ಶ್ರೇಷ್ಠ ಆಟಗಾರರ ದಂಡೇ ಇದೆ. ಆದ್ರೆ ಐಪಿಎಲ್‍ನಲ್ಲಿ ಎಲ್ಲರೂ ಗುಣಮಟ್ಟದ ಆಟಗಾರರು ಇರುತ್ತಾರೆ ಎಂದು ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಹರ್ಭಜನ್ ಸಿಂಗ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಡ ಆಡಿದ್ದಾರೆ. ಅದ್ರಲ್ಲೂ ಹರ್ಭಜನ್ ಸಿಂಗ್ ಮುಂಬೈ ಇಂಡಿಯನ್ಸ್ ಪರ ಹತ್ತು ವರ್ಷಗಳ ಕಾಲ ಆಡಿದ್ದಾರೆ. ಆನಂತರ ಚೆನ್ನೈ ಸೂಪರ್ ಕಿಂಗ್ಸ್ ಪಡ ಆಡುತ್ತಿದ್ದಾರೆ. ಹರ್ಭಜನ್ ಸಿಂಗ್ ಐಪಿಎಲ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಮೂರನೇ ಬೌಲರ್ ಕೂಡ ಹೌದು. 2019ರ ಐಪಿಎಲ್ ನಲ್ಲಿ ಹರ್ಭಜನ್ ಸಿಂಗ್ 11 ಪಂದ್ಯಗಳಲ್ಲಿ 16 ವಿಕೆಟ್ ಉರುಳಿಸಿದ್ದಾರೆ.








