ಬೆಂಗಳೂರು ; ಬಿಜೆಪಿಯಿಂದ (BJP) ನನಗೆ ಡಿಸಿಎಂ ಆಗಲು ಆಫರ್ ಬಂದಿತ್ತು ಎಂದು ಮಾಜಿ ಸಚಿವ, ಶಾಸಕ ಜಿ.ಟಿ. ದೇವೇಗೌಡ (GT Deve Gowda) ಹೇಳಿದ್ದಾರೆ. ಇಂದು ಜಿ.ಟಿ.ದೇವೇಗೌಡ (GT Deve Gowda) ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಬಿಜೆಪಿಯಿಂದ ಡಿಸಿಎಂ ಆಫರ್ ಬಂದಿತ್ತು.
ಆದರೆ ನಾವು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ವಿ, ಐದು ವರ್ಷ ಅವರೇ ಸಿಎಂ ಆಗುತ್ತಾರೆ ಎಂದು ಬಯಸಿದ್ದೇವು.
ಇದನ್ನೂ ಓದಿ : ದೆಹಲಿಯಲ್ಲಿ ದಿ.ಸುರೇಶ್ ಅಂಗಡಿ ಸ್ಮಾರಕ : ಸಿಎಂ ಬಿಎಸ್ ವೈ
ನಾವೇ ಕುಮಾರಸ್ವಾಮಿಯನ್ನು ಸಿಎಂ ಮಾಡಿ, ನಾವೇ ಇಳಿಸೋಕೆ ಆಗುತ್ತಾ ಎಂದರು.
ಇದೇ ವೇಳೆ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲೆ ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯ ನೀಡಿದ ಜಿ.ಟಿ. ದೇವೇಗೌಡ, ಡಿ.ಕೆ.ಶಿವಕುಮಾರಸ್ವಾಮಿ ಮನೆ ಮೇಲೆ ಸಿಬಿಐ ದಾಳಿ ನಡೆಸಿದ್ದು ತಪ್ಪು ಎಂದು ಹೇಳಿದರು.
ಈ ಹಿಂದೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಕೂಡ ಮೈತ್ರಿ ಸರ್ಕಾರದ ವೇಳೆ ನನಗೆ ಬಿಜೆಪಿಯಿಂದ ಸಿಎಂ ಆಫರ್ ಬಂದಿತ್ತು. ಸ್ವತಃ ಪ್ರಧಾನಿಗಳೇ ಈ ಆಫರ್ ಕೊಟ್ಟಿದ್ದರು ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ : “ಬಿಜೆಪಿ & ಜೆಡಿಎಸ್ ಒಳ ಒಪ್ಪಂದ” : ಸಿದ್ದು ಆರೋಪಕ್ಕೆ ಹೆಚ್ ಡಿಕೆ ಗುದ್ದು