ಕೆಜಿಎಫ್-2 (KGF-2) ಇಡೀ ಭಾರತೀಯ ಚಿತ್ರರಂಗದಲ್ಲೇ ಜಾತಕ ಪಕ್ಷಿಯಂತೆ ಕಾಯುತ್ತಿರುವ ಸಿನಿಮಾ. ಕೆಜಿಎಫ್-1 ರಲ್ಲಿ ಗರುಡನ ಕೊಲೆಯೊಂದಿಗೆ ಸಿನಿಮಾ ಅಂತ್ಯವಾಗುತ್ತದೆ. ಆದ್ರೆ ಅಸಲಿ ಕಹಾನಿಯನ್ನು ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್-2 ನಲ್ಲಿಟ್ಟಿದ್ದಾರೆ. ಕೆಜಿಎಫ್ 2 (KGF-2) ನೇ ಭಾಗ ಇನ್ನಷ್ಟು ರಸವತ್ತಾಗಿ ಇರಲಿದ್ದು, ಕೌತುಕ ಮೂಡಿಸಿರುವ ಅದರ ಕ್ಲೈಮ್ಯಾಕ್ಸ್ ಹೇಗಿರಲಿದೆ ಎಂಬುದರ ಸಣ್ಣ ವಿಶ್ಲೇಷಣೆ ಇಲ್ಲಿದೆ..
ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಕೆಜಿಎಫ್ ನ ಶೂಟಿಂಗ್ ಇದೀಗ ಮತ್ತೆ ಆರಂಭವಾಗಿದೆ. ಸುಮಾರು 30 ದಿನಗಳ ಚಿತ್ರೀಕರಣ ಇನ್ನೂ ಬಾಕಿ ಇದೆ. ಕಾರವಾರ, ಮಲ್ಪೆ ಬೀಜ್ ಗಳಲ್ಲಿ ಸದ್ಯ ಶೂಟಿಂಗ್ ನಡೆಯುತ್ತಿದೆ.
ರಾಖಿ ಭಾಯ್ ಮೇಲೆ ಅತಿ ಭಯಂಕರನ ದಾಳಿ
ಇಡೀ ಭಾರತೀಯ ಸಿನಿಮಾರಂಗವೇ ಕಾಯುತ್ತಿರುವ ಕೆಜಿಎಫ್-2 ನಲ್ಲಿ ಕುತೂಹಲ ಮೂಡಿಸಿದ ಪಾತ್ರಗಳಲ್ಲಿ ಅಧೀರ ಪಾತ್ರ ಕೂಡ ಒಂದು. “ಮೊದಲ ಭಾಗದಲ್ಲಿ ಯಾರಿಗೂ ಕಾಣದೇ ಕಥೆ ನಡೆಸಿದ್ದ ಅಧೀರ, 2ನೇ ಭಾಗದಲ್ಲಿ ರಾಕಿಭಾಯ್ ಗೆ ಎದುರಾಗಲಿದ್ದಾನೆ. ಇದು ರಾಕಿಭಾಯ್ ಸಹ ಊಹಿಸಿರೋದಿಲ್ಲ. ಯಾಕೆಂದರೆ ರಾಕಿಭಾಯ್ ಗೆ ಅಧೀರನ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಇಲ್ಲ. ಸದ್ಯ ನಾವೆಲ್ಲರೂ ನೋಡಿದ ಕೆಜಿಎಫ್-1 ಸಿನಿಮಾದಲ್ಲಿ ರಾಕಿಭಾಯ್ ಗರುಡನನ್ನೇ ಟಾರ್ಗೆಟ್ ಮಾಡಿದ್ದಾನೆಯೇ ಹೊರೆತು ಅಧೀರನ್ನಲ್ಲ. ಹೀಗಾಗಿ ಕೆಜಿಎಫ್ 2 ನಲ್ಲಿ ಅಧೀರನ ಪಾತ್ರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕೆಜಿಎಫ್ – 1ರಲ್ಲಿ ಭಾರಿ ಆಕ್ಷನ್ ಸನ್ನಿವೇಶಗಳನ್ನು ಇಟ್ಟಿದ್ದ ಪ್ರಶಾಂತ್ ನೀಲ್, ಭಾಗ ಎರಡರಲ್ಲೂ ಅದನ್ನು ಮುಂದುವರಿಸಿರುತ್ತಾರೆ. ಚಿತ್ರದ ಮೊದಲ ಭಾಗದಲ್ಲಿ ರಾಖಿ ಭಾಯ್ ನರಾಚಿಯನ್ನು ವಶಪಡಿಸಿಕೊಂಡು ಅಲ್ಲಿನ ಜನರನ್ನು ಬಂಧಮುಕ್ತಿ ಮಾಡುತ್ತಾನೆ. ಈ ವೇಳೆ ನರಾಚಿ ಮೇಲೆ ಕಣ್ಣಿಟ್ಟಿರುವ ಅಧೀರ ಅಜ್ಞಾತದಲ್ಲಿ ಇದ್ದುಕೊಂಡೇ ಕ್ರೂರತನದ ಮೂಲಕ ತನ್ನ ಇರುವಿಕೆಯ ಬಗ್ಗೆ ಸುಳಿವುಗಳನ್ನು ನೀಡುತ್ತಾನೆ. ಇದರಿಂದ ರಾಖಿಭಾಯ್ ಅಧೀರನ ಜಾಡು ಹುಡುಕಲು ಆರಂಭಿಸುತ್ತಾನೆ. ಈ ಹಂತದಲ್ಲಿ ಕ್ರೂರತನಗಳಿಂದ ಪ್ರಭಾವಿತನಾದ ನಿರ್ಭಿತ ಅಧೀರ ರಾಖಿಭಾಯ್ ಗೆ ಎದುರಾಗುತ್ತಾನೆ.
ಇನ್ನು ದ್ವಿತೀಯಾರ್ಧದಲ್ಲಿ ಅಧೀರನನ್ನು ಮಟ್ಟಹಾಕುವ ರಾಕಿ ಭಾಯ್ ನ ಆರ್ಭಟ ಮತ್ತಷ್ಟು ಜೋರಾಗುತ್ತೆ. ಹೀಗಾಗಿ ಪ್ರಧಾನಿ ರಸಿಕಾ ಸೇನ್ ರಾಖಿಭಾಯ್ ಕೋಟೆ ಬೇಧಿಸಲು ಸೇನೆಯನ್ನು ಕಳಿಹಿಸುತ್ತಾಳೆ. ಈ ವೇಳೆ ಸೇನೆ ವಿರುದ್ಧ ರಾಕಿಭಾಯ್ ಪಡೆ ಹೋರಾಡುತ್ತದೆ. ಈ ದೃಶ್ಯಗಳು ತುಂಬಾ ರೋಚಕತೆಯಿಂದ ಕೂಡಿರಲಿದೆ.
ಚಿತ್ರದ ಪೂರ್ತಿ ಅಬ್ಬರಿಸಿ ಬೊಬ್ಬಿರಿಯೋ ರಾಕಿ ಭಾಯ್, ನೂರಾರು ಎದುರಾಳಿಗಳನ್ನು ಪುಡಿಗಟ್ಟಿ ಕ್ಲೈಮ್ಯಾಕ್ಸ್ ನಲ್ಲಿ ದುರಂತ ಅಂತ್ಯ ಕಾಣಲಿದ್ದಾನೆ. ರಾಖಿಭಾಯ್ ಚಿಕ್ಕಂದಿನಲ್ಲಿ ಅಮ್ಮ ಹೇಳಿದಂತೆಯೇ ಶ್ರೀಮಂತನಾಗಿ ಜನರನ್ನು ಜೀತದಿಂದ ಮುಕ್ತಗೊಳಿಸಿ ಸಾಯುತ್ತಾನೆ.
ಇಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಎಮೋಷನ್ ಟಚ್ ನೀಡಲಿದ್ದಾರೆ. ಸಿನಿಮಾದ ಅಂತ್ಯದಲ್ಲಿ ಪ್ರೇಕ್ಷಕನ ಕಣ್ಣಲ್ಲಿ ನೀರು ಜಿನುಗಿಸುವ ಉದ್ದೇಶ ನಿರ್ದೇಶಕರುತ್ತೆ.
ಮಹೇಶ್ ಎಂ ದಂಡು








