ಐಪಿಎಲ್ 2020 – ಮುಂಬೈಗೆ ತಲೆಬಾಗಿದ ಡೆಲ್ಲಿ ಹುಡುಗರು..!
ಐಪಿಎಲ್ ಟೂರ್ನಿಯ 27ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಐದು ವಿಕೆಟ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪರಾಭವಗೊಳಿಸಿದೆ.
ಜಿದ್ದಾಜಿದ್ದಿನ ಪಂದ್ಯದಲ್ಲಿ ಡೆಲ್ಲಿ ತಂಡ ಕಳಪೆ ಫೀಲ್ಡಿಂಗ್ ನ ಲಾಭ ಪಡೆದುಕೊಂಡ ಮುಂಬೈ ಇಂಡಿಯನ್ಸ್ ರೋಚಕ ಜಯವನ್ನು ದಾಖಲಿಸಿಕೊಂಡಿತು.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದ್ರೆ ಪೃಥ್ವಿ ಶಾ 4 ರನ್ ಗಳಿಸಿ ನಿರಾಸೆ ಮೂಡಿಸಿದ್ರೆ, ಅಜ್ಯಂಕ್ಯಾ ರಹಾನೆ 15 ರನ್ಗೆ ಸೀಮಿತವಾದ್ರು.
ಬಳಿಕ ಆರಂಭಿಕ ಶಿಖರ್ ಧವನ್ ಮತ್ತು ನಾಯಕ ಶ್ರೇಯರ್ ಅಯ್ಯರ್ ತಂಡಕ್ಕೆ ಆಧಾರವಾಗಿ ನಿಂತ್ರು. ಇವರಿಬ್ಬರು ಮೂರನೇ ವಿಕೆಟ್ಗೆ 76 ರನ್ ಕಲೆ ಹಾಕಿದ್ರು.
ಈ ಹಂತದಲ್ಲಿ ಶ್ರೇಯಸ್ ಅಯ್ಯರ್ 42 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದ್ರೆ, ಮಾರ್ಕಸ್ ಸ್ಟೋನಿಸ್ 13 ರನ್ ಗಳಿಸಿ ರನೌಟಾದ್ರು.
ಅಲೆಕ್ಸ್ ಕ್ಯಾರೆ ಅಜೇಯ 14 ರನ್ ದಾಖಲಿಸಿದ್ರು. ಇನ್ನೊಂದೆಡೆ ಶಿಖರ್ ಧವನ್ 52 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ನ ಸಹಾಯದಿಂದ ಅಜೇಯ 69 ರನ್ ಗಳಿಸಿದ್ರು.
ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು.
ಸವಾಲನ್ನು ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಆಘಾತ ಅನುಭವಿಸಿತ್ತು.
ರೋಹಿತ್ ಶರ್ಮಾ ಅಬ್ಬರ 5 ರನ್ಗೆ ಕೊನೆಗೊಂಡಿತು. ನಂತರ ಆರಂಭಿಕ ಕ್ವಿಂಟನ್ ಡಿ ಕಾಕ್ ಮತ್ತು ಸೂರ್ಯ ಕುಮಾರ್ ಯಾದವ್ ಡೆಲ್ಲಿ ಬೌಲರ್ ಗಳನ್ನು ತಲ್ಲಣಗೊಳಿಸುವಂತೆ ಮಾಡಿದ್ರು.
ಕ್ವಿಂಟನ್ ಡಿ ಕಾಕ್ 36 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ ಅಜೇಯ 53 ರನ್ ಗಳಿಸಿದ್ರು.
ಹಾಗೇ ಸೂರ್ಯ ಕುಮಾರ್ ಮತ್ತೊಮ್ಮೆ ಅಪಾಯಕಾರಿ ಬ್ಯಾಟ್ಸ್ ಮೆನ್ ಎಂಬುದನ್ನು ನಿರೂಪಿಸಿದ್ರು. 32 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ನ ನೆರವಿನಿಂದ ಸೂರ್ಯಕುಮಾರ್ ಯಾದವ್ 53 ರನ್ ಸಿಡಿಸಿದ್ರು.
ಇನ್ನೊಂದೆಡೆ ಇಶಾನ್ ಕಿಶಾನ್ 15 ಎಸೆತಗಳಲ್ಲಿ 2 ಬೌಂಡರಿ ಮತ್ತು ಎರಡು ಸಿಕ್ಸರ್ ಸಿಡಿಸಿ ಪಂದ್ಯವನ್ನು ಗೆಲುವಿನ ಹಾದಿ ಹಿಡಿಯಲು ಸಹಕರಿಸಿದ್ರು.
ಈ ನಡುವೆ ಹಾರ್ದಿಕ್ ಪಾಂಡ್ಯ ಸೊನ್ನೆ ಸುತ್ತಿದ್ರು. ಆದ್ರೆ ಕಿರಾನ್ ಪೊಲಾರ್ಡ್ ಮತ್ತು ಕೃನಾಲ್ ಪಾಂಡ್ಯ ಅವರು ಅಂತಿಮ ಓವರ್ ನ ನಾಲ್ಕನೇ ಎಸೆತದಲ್ಲಿ ತಂಡವನ್ನು ಗೆಲುವಿನ ನಗು ಬೀರುವಂತೆ ಮಾಡಿದ್ರು.
ಕಿರಾನ್ ಪೊಲಾರ್ಡ್ ಅಜೇಯ 11 ರನ್ ಹಾಗೂ ಕೃನಾಲ್ ಪಾಂಡ್ಯ ಅಜೇಯ 12 ರನ್ ದಾಖಲಿಸಿದ್ರು.
ಪರಿಣಾಮ ಮುಂಬೈ ಇಂಡಿಯನ್ಸ್ 19.4 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು. ಕ್ವಿಂಟನ್ ಡಿ ಕಾಕ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.