ಐಪಿಎಲ್ 2020- ಅಬುಧಾಬಿಯಲ್ಲಿ ಪ್ರಕಾಶಿಸಿದ ಸೂರ್ಯ… ಮುಂಬೈ ಇಂಡಿಯನ್ಸ್ ವಿರುದ್ಧ ಮಂಕಾದ ಆರ್ ಸಿಬಿ
ಐಪಿಎಲ್ ಟೂರ್ನಿಯು 48ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಐದು ವಿಕೆಟ್ ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪರಾಭವಗೊಳಿಸಿದೆ.
ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಆರ್ ಸಿಬಿಯನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತ್ತು.
ಗೇಮ್ ಪ್ಲಾನ್ ಗೆ ತಕ್ಕಂತೆ ಆರ್ ಸಿಬಿ ತಂಡ ಉತ್ತಮ ಆರಂಭವನ್ನೇ ಪಡೆದುಕೊಂಡಿತ್ತು. ದೇವದತ್ತ್ ಪಡಿಕ್ಕಲ್ ಮತ್ತು ಜೋಶ್ ಫಿಲಿಪ್ಪೆ 7.5 ಓವರ್ ಗಳಲ್ಲಿ 71 ರನ್ ಕಲೆ ಹಾಕಿದ್ದರು.
ಈ ಹಂತದಲ್ಲಿ ಜೋಶ್ ಫಿಲಿಪ್ಪೆ 33 ರನ್ ಗಳಿಸಿ ಚಾಹರ್ಗೆ ವಿಕೆಟ್ ಒಪ್ಪಿಸಿದ್ರು. ಆದ್ರೆ ವಿರಾಟ್ ಕೊಹ್ಲಿ 9 ರನ್ ಮತ್ತು ಎಬಿಡಿ ವಿಲಿಯರ್ಸ್ 15 ರನ್ ಗಳಿಸಿ ತಮ್ಮ ಹೋರಾಟವನ್ನು ಮುಗಿಸಿದ್ರು.
ಇನ್ನೊಂದೆಡೆ ದೇವದತ್ತ್ ಪಡಿಕ್ಕಲ್ ಅವರು 45 ಎಸೆತಗಳಲ್ಲಿ 12 ಬೌಂಡರಿ ಮತ್ತು ಒಂದು ಸಿಕ್ಸರ್ ನ ಸಹಾಯದಿಂದ 74 ರನ್ ಸಿಡಿಸಿದ್ರು.
ಮತ್ತೊಂದೆಡೆ ಆರ್ ಸಿಬಿಯ ಕೆಳ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ನಿರಾಸೆ ಮೂಡಿಸಿದ್ರು. ಶಿವಮ್ ದುಬೆ 2 ರನ್, ಕ್ರಿಸ್ ಮೋರಿಸ್ 4 ರನ್ಗೆ ಸೀಮಿತವಾದ್ರು. ಕೇವಲ ಏಳು ರನ್ ಗಳ ಅಂತರದಲ್ಲಿ ಆರ್ ಸಿಬಿ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡಿತ್ತು.
ಕೊನೆ ಕ್ಷಣದಲ್ಲಿ ಗುರು ಕೀರತ್ ಸಿಂಗ್ ಮಾನ್ ಅಜೇಯ 14 ರನ್ ಹಾಗೂ ವಾಷಿಂಗ್ಟನ್ ಸುಂದರ್ ಅಜೇಯ 10 ರನ್ ಗಳಿಸಿದ್ರು. ಅಂತಿಮವಾಗಿ ಆರ್ ಸಿಬಿ ತಂಡ 6 ವಿಕೆಟ್ ನಷ್ಟಕ್ಕೆ 164 ರನ್ ದಾಖಲಿಸಿತ್ತು.
ಸವಾಲನ್ನು ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ಆರಂಭಿಕರು ಬಿರುಸಿನ ಆಟವನ್ನಾಡಿದ್ರು. ಆದ್ರೆ ಕ್ವಿಂಟನ್ ಡಿಕಾಕ್ 18 ರನ್ ಗೆ ಔಟಾದ್ರು. ಅದೇ ರೀತಿ ಇಶಾನ್ ಕಿಶಾನ್ 25 ರನ್ಗೆ ತನ್ನ ಆರ್ಭಟವನ್ನು ಕೊನೆಗೊಳಿಸಿದ್ರು.
ನಂತರ ಆರ್ ಸಿಬಿ ತಂಡಕ್ಕೆ ಕಂಟಕವಾಗಿ ಪರಿಣಮಿಸಿದ್ದು ಸೂರ್ಯಕುಮಾರ್ ಯಾದವ್. ಈ ನಡುವೆ ಸೌರಬ್ ತಿವಾರಿ 5 ರನ್ ಹಾಗೂ ಕೃನಾಲ್ ಪಾಂಡ್ಯ 10 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.
ಆದ್ರೂ ತಲೆಕೆಡಿಸಿಕೊಳ್ಳದ ಸೂರ್ಯಕುಮಾರ್ ಯಾದವ್ ತನ್ನ ಆಕರ್ಷಕ ಹೊಡೆತಗಳ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಧಾರವಾಗಿ ನಿಂತ್ರು.
ಇನ್ನೊಂದೆಡೆ ಹಾರ್ದಿಕ್ ಪಾಂಡ್ಯ 17 ರನ್ ಗಳಿಸಿ ಕ್ರಿಸ್ ಮೋರಿಸ್ಗೆ ವಿಕೆಟ್ ಒಪ್ಪಿಸಿದ್ರು.
ಸೂರ್ಯಕುಮಾರ್ ಯಾದವರ್ 43 ಎಸೆತಗಳಲ್ಲಿ 10 ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ ಅಜೇಯ 79 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು.
ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಯಾದವ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.








