ಶಾರ್ಜಾ : 13 ನೇ ಆವೃತ್ತಿಯ ಇಂದಿನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ.
ಉಭಯ ತಂಡಗಳು ಟೂರ್ನಿಯಲ್ಲಿ ತಲಾ ನಾಲ್ಕು ಪಂದ್ಯಗಳನ್ನಾಡಿದ್ದು, ತಲಾ ಎರಡು ಮ್ಯಾಚ್ ಗಳನ್ನು ಗೆದ್ದಿವೆ. ಹೀಗಾಗಿ ಮೂರನೇ ಗೆಲುವಿನ ಮೇಲೆ ಎರಡು ತಂಡಗಳು ಕಣ್ಣಿಟ್ಟಿವೆ.
ತಂಡಗಳ ಬಲಾಬಲ ಹೀಗಿದೆ
ಮುಂಬೈ ಇಂಡಿಯನ್ಸ್
ಮುಂಬೈ ತಂಡಕ್ಕೆ ಬ್ಯಾಟ್ಸ್ ಮೆನ್ ಗಳ ಪ್ರಮುಖ ಬಲ. ನಾಯಕ ರೋಹಿತ್ ಶರ್ಮಾ, ಇಶಾನ್ ಕಿಶನ್, ಕಿರಾನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ ಉತ್ತಮ ಫಾರ್ಮ್ನಲ್ಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ, ಟ್ರೆಂಟ್ ಬೌಲ್ಟ್, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್
ಹೈದರಾಬಾದ್ ತಂಡ ಮೂರು ವಿಭಾಗದಲ್ಲಿ ಸುಧಾರಿಸಬೇಕಿದೆ. ಬ್ಯಾಟಿಂಗ್ ನಲ್ಲಿ ವಾರ್ನರ್, ಬೈರ್ ಸ್ಟೋವ್, ವಿಲಿಯಮ್ಸನ್, ಮನೀಶ್ ಪಾಂಡೆ ಉತ್ತಮವಾಗಿ ಬ್ಯಾಟ್ ಬೀಸಿದರೂ ಕೊನೆಯವರೆಗೂ ಕ್ರೀಸ್ ನಲ್ಲಿ ನಿಲ್ಲಬೇಕಿದೆ. ಇನ್ನು ಯುವ ಆಟಗಾರಾದ ಅಭಿಷೇಕ್ ವರ್ಮಾ, ಪ್ರಿಯಂ ಗರ್ಗ್ ಉತ್ತಮ ಫಾರ್ಮ್ನಲ್ಲಿದ್ದು, ಇವರ ಮೇಲೆ ತಂಡ ಹೆಚ್ಚು ಭರವಸೆ ಇರಿಸಿದೆ. ಇನ್ನು ತಂಡದ ಪ್ರಮುಖ ವೇಗಿ ಭುವನೇಶ್ವರ್ ಕುಮಾರ್ ಗಾಯಗೊಂಡಿದ್ದು, ಈ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ.
ಯಾರಿಗೆ ಯಾರೂ ಕಮ್ಮಿ ಇಲ್ಲ
ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ಈ ಎರಡು ತಂಡಗಳು 14 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಉಭಯ ತಂಡಗಳು ತಲಾ 7-7 ಮ್ಯಾಚ್ ಗಳನ್ನು ಗೆದ್ದುಕೊಂಡಿವೆ.









