ಯುಎಸ್ ಅಧ್ಯಕ್ಷೀಯ ಚುನಾವಣೆ – ಜೋ ಬಿಡೆನ್ ಮುಂದಿನ ಅಮೆರಿಕ ಅಧ್ಯಕ್ಷ Joe Biden won
ವಾಷಿಂಗ್ಟನ್, ನವೆಂಬರ್08: ಡೆಮೋಕ್ರಾಟ್ ಪಕ್ಷದ ಜೋ ಬಿಡೆನ್ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಪ್ರಸ್ತುತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹಿಂದಿಕ್ಕಿ ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ಅಮೆರಿಕ ಮಾಧ್ಯಮಗಳಲ್ಲಿ ಮುಂದಿನ ಅಧ್ಯಕ್ಷ ಬಿಡೆನ್ ಎಂದು ಪ್ರದರ್ಶಿಸಲಾಯಿತು.
ಈ ಮೂಲಕ ಜಾಗತಿಕವಾಗಿ ಭಾರೀ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿನ ಗೊಂದಲ ಮುಕ್ತಾಯಗೊಂಡಿತು. Joe Biden won
ಕಮಲಾ ಹ್ಯಾರಿಸ್ ಯುಎಸ್ ಇತಿಹಾಸದಲ್ಲಿ ಮೊದಲ ಮಹಿಳಾ ಉಪಾಧ್ಯಕ್ಷರಾಗಲಿದ್ದಾರೆ. ಬಿಡೆನ್ ಈ ಹಿಂದೆಯೂ ಮಿಚಿಗನ್ ಮತ್ತು ವಿಸ್ಕಾನ್ಸಿನ್ ರಾಜ್ಯಗಳನ್ನು ಗೆದ್ದಿದ್ದರು. ಆದರೆ ಪ್ರಮುಖ ರಾಜ್ಯವಾದ ಜಾರ್ಜಿಯಾದಲ್ಲಿ ಮುನ್ನಡೆ ಸಾಧಿಸಿದರು. ವಿಸ್ಕಾನ್ಸಿನ್, ಅರಿಜೋನಾ ಮತ್ತು ಮಿಚಿಗನ್ ರಾಜ್ಯಗಳು ಜೋ ಬಿಡೆನ್ ಗೆಲುವಿಗೆ ಕಾರಣವಾದ ರಾಜ್ಯಗಳಾಗಿವೆ.
ಕೋವಿಡ್ ಸೋಂಕಿನ ನಂತರ ಚೀನಾದಲ್ಲಿ ಬ್ರೂಸೆಲೋಸಿಸ್ – 6,000 ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ
ನಾನು ಅಮೆರಿಕಾದ ಅಧ್ಯಕ್ಷನಾಗಿ ಆಡಳಿತ ನಡೆಸುತ್ತೇನೆ ಎಂದು ಬಿಡೆನ್ ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ನಾವು ಗೆದ್ದಾಗ ಯಾವುದೇ ಕೆಂಪು ರಾಜ್ಯಗಳು ಮತ್ತು ನೀಲಿ ರಾಜ್ಯಗಳು ಇರುವುದಿಲ್ಲ. ಕೇವಲ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಎಂದು ಅವರು ಹೇಳಿದ್ದಾರೆ.
77 ವರ್ಷ ವಯಸ್ಸಿನ ಬಿಡೆನ್ ಅವರನ್ನು ಅಮೆರಿಕನ್ನರು ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ರಾಷ್ಟ್ರವನ್ನು ಮುನ್ನಡೆಸಲು ಆಯ್ಕೆ ಮಾಡಿದ್ದಾರೆ.
ಒಟ್ಟು 538 ಮತಗಳ ಪೈಕಿ ಅಧ್ಯಕ್ಷ ಗಾದಿಗೇರಲು ಕನಿಷ್ಠ 270 ಎಲೆಕ್ಟ್ರೋಲ್ ಮತಗಳನ್ನು ಪಡೆಯುವ ಅಗತ್ಯವಿದ್ದು, ಜೋ ಬಿಡೆನ್ 284 ಎಲೆಕ್ಟರಲ್ ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿದ್ದಾರೆ. ಟ್ರಂಪ್ 214 ಎಲೆಕ್ಟರಲ್ ಮತಗಳನ್ನು ಪಡೆದರು.
ಚುನಾವಣೆಯ ಫಲಿತಾಂಶವನ್ನು ಗೌರವಿಸುವುದಾಗಿ ಖಾತರಿ ನೀಡಲು ನಿರಾಕರಿಸಿದ ಟ್ರಂಪ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಪಟಾಕಿ ಬ್ಯಾನ್ – ಹಸಿರು ಪಟಾಕಿಗೆ ಗ್ರೀನ್ ಸಿಗ್ನಲ್; ಅಸಲಿಗೆ ಯಾವುದಿದು ಹಸಿರು ಪಟಾಕಿ?https://t.co/tVs0wPf1v3
— Saaksha TV (@SaakshaTv) November 7, 2020
ಎದೆಯುರಿ ನಿವಾರಣೆಗೆ 7 ನೈಸರ್ಗಿಕ ಮನೆಮದ್ದುhttps://t.co/dvehOAVu77
— Saaksha TV (@SaakshaTv) November 7, 2020