kalasipalya
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಾಸ್ ಲುಕ್ ಗೆ ಈಗಲೂ ಅಭಿಮಾನಿಗಳು ಫಿದಾ ಆಗ್ತಾರೆ.
ಆದ್ರೆ ಒಂದು ಕಾಲದಲ್ಲಿ ದರ್ಶನ್ ಅವರ ಇಮೇಜ್ ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದ ಚಿತ್ರ ಅಂದ್ರೆ “ಕಲಾಸಿಪಾಳ್ಯ”.
ಈ ಚಿತ್ರ ದರ್ಶನ್ ಅವರಿಗೆ ದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿತ್ತು. ಈ ಚಿತ್ರ ಇವತ್ತಿಗೂ ಡಿ ಬಾಸ್ ಭಕ್ತರ ಅಚ್ಚುಮೆಚ್ಚು.
ಅಂದ್ಹಾಗೆ ಈ ಚಿತ್ರ ತೆರೆಕಂಡು ಇಂದಿಗೆ 16 ವರ್ಷ. 2004ರಲ್ಲಿ ತೆರೆಕಂಡ “ಕಲಾಸಿಪಾಳ್ಯ” ಸಿನಿಮಾ ದರ್ಶನ್ ಅವರನ್ನು ಗಾಂಧಿನಗರಕ್ಕೆ ಮತ್ತೆ ಬಾಸ್ ಆಗಿ ಮಾಡಿತು.
‘ಜೇಮ್ಸ್’ ಗೆ ನಾಯಕಿ ಫಿಕ್ಸ್: ಮತ್ತೆ ಒಂದಾದ ‘ರಾಜಕುಮಾರ’ ಜೋಡಿ
ಈ ಚಿತ್ರದಿಂದ “ಕಲಾಸಿಪಾಳ್ಯ”ದ ಖದರೇ ಬದಲಾಗಿಬಿಟ್ಟಿತ್ತು.
ದರ್ಶನ್ ಮಾಸ್ ಸಿನಿಮಾಗಳ ಕಿಂಗ್ ಆಗಿ ಹೊರಹೊಮ್ಮಿದ್ರು.
ಅಭಿಮಾನಿಗಳ ಡಿ ಬಾಸ್ ಗೆ “ಕಲಾಸಿಪಾಳ್ಯ” ಸಿನಿಮಾ ದೊಡ್ಡ ಮಟ್ಟದ ಯಶಸ್ಸು ತಂದು ಕೊಟ್ಟಿತ್ತು.
ಇಂದು ಈ ಚಿತ್ರ ತೆರೆಕಂಡು 16 ವರ್ಷ ಪೂರೈಸಿರುವ ಹಿನ್ನೆಲೆ ದಚ್ಚು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಾಚರಣೆ ಮಾಡ್ತಾಯಿದ್ದಾರೆ.
ರಾಮು ಬ್ಯಾನರ್ ನಡಿ ಮೂಡಿಬಂದ ಈ ಚಿತ್ರಕ್ಕೆ ರಾಮು ಅವರು ಬಂಡವಾಳ ಹೂಡಿದ್ರೆ, ಓಂ ಪ್ರಕಾಶ್ ರಾವ್ ಅವರು ಆಕ್ಷನ್ ಕಟ್ ಹೇಳಿದ್ರು.
2004ರಲ್ಲಿ ತೆರೆಕಂಡ ಈ ಸಿನಿಮಾ ಶತದಿನಗಳ ಕಾಲ ಅದ್ಧೂರಿಯಾಗಿ ಓಡಿತ್ತು.
ಇನ್ನೂ “ಕಲಾಸಿಪಾಳ್ಯ” ಸಿನಿಮಾದ ಹಾಡುಗಳು ಈಗಲೂ ಫೇಮಸ್.
ಸಾಧು ಕೋಕಿಲಾ ಮತ್ತು ವೆಂಕಟ್ ನಾರಾಯಣ್ ಸಂಗೀತ ಚಿತ್ರದಲ್ಲಿ ಮೋಡಿ ಮಾಡಿತ್ತು.
ಇನ್ನೂ ರಕ್ಷಿತಾ ದರ್ಶನ್ ಜೋಡಿಯ ಮ್ಯಾಜಿಕ್ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ರು.
ಗಣಿನಾಡಲ್ಲಿ ಪವರ್ ಸ್ಟಾರ್ : ಮುಗಿಬಿದ್ದ ಅಭಿಮಾನಿಗಳು
ವಿಶೇಷ ಅಂದ್ರೆ ಇದೇ ಚಿತ್ರದಲ್ಲೇ ದರ್ಶನ್ ಅವರ ಸಿನಿಮಾದಲ್ಲಿ ರಕ್ಷಿತಾ ಮೊದಲ ಸಲ ನಾಯಕಿಯಾಗಿ ನಟಿಸಿದ್ದರು.
ಇದಾದ ಬಳಿಕ ಗಾಂಧಿನಗರದ ಸೂಪರ್ ಹಿಟ್ ಜೋಡಿಯಾಗಿ ದರ್ಶನ್ ಹಾಗೂ ರಕ್ಷಿತಾ ಹೊರಹೊಮ್ಮಿದ್ರು.
ಬಳಿಕ ಸುಂಟರಗಾಳಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಒಟ್ಟಾಗಿ ತೆರೆಹಂಚಿಕೊಂಡಿದ್ದರು.
kalasipalya
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel