ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳ ಲ್ಯಾಬ್ ಗಳು ಅಲಂಕಾರಕ್ಕೆ ಇರೋದು ಬೇಡ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಖಾಸಗಿ ಆಸ್ಪತ್ರೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಖಾಸಗಿ ಆಸ್ಪತ್ರೆಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಸುಧಾಕರ್ ಅವರು, ಬೆಂಗಳೂರಲ್ಲಿ ಸಾಕಷ್ಟು ಕೊರೊನಾ ರಿಪೋರ್ಟ್ ಪೆಂಡಿಗ್ ಇವೆ. ಈ ವಿಚಾರದಲ್ಲಿ ಖಾಸಗಿ ಲ್ಯಾಬ್ ಗಳು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಸಹಕರಿಸಿಲ್ಲ. ಹೀಗಾಗಿ ಎಲ್ಲ ಲೋಡ್ ಸರ್ಕಾರಿ ಲ್ಯಾಬ್ ಗಳ ಮೇಲೆ ಬಿದ್ದ ಪರಿಣಾಮ ರಿಪೋರ್ಟ್ ವಿಳಂಬವಾಗಿದೆ ಎಂದು ದೂರಿದರು.
ಕೋಲಾರದ ಮೆಡಿಕಲ್ ಕಾಲೇಜಲ್ಲಿ ಕೇವಲ 30 ಕೊರೊನಾ ಟೆಸ್ಟ್ ಮಾಡಿದ್ದಾರೆ. ಅದೇ ರೀತಿ ರಾಜ್ಯದ ನಾನಾ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಇದೇ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿವೆ. ಇದೇ ರೀತಿ ಮುಂದುವರಿದರೇ ಖಾಸಗಿ ಮೆಡಿಕಲ್ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳುತ್ತೇವೆ. ರಾಜ್ಯದಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳ ಲ್ಯಾಬ್ ಗಳು ಅಲಂಕಾರಕ್ಕೆ ಇರೋದು ಬೇಡ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇನ್ನು ಲ್ಯಾಬ್ ಇದ್ದ ಮೇಲೆ ಟೆಸ್ಟ್ ಗಳನ್ನು ಮಾಡಲೇಬೇಕು. ಪ್ರತಿ ಟೆಸ್ಟ್ ಗೂ ಸರ್ಕಾರದಿಂದ 2250 ರೂ. ನಂತೆ ಹಣ ಕೊಡುತ್ತೇವೆ. ನಾವೇ ಸ್ಯಾಂಪಲ್ ಕೊಟ್ಟು ನಾವೇ ದುಡ್ಡು ಸಹ ಕೊಡುತ್ತೇವೆ. ಅದರೂ ಕೆಲ ಖಾಸಗಿ ಸಂಸ್ಥೆಗಳು ನಮಗೆ ಸಹಕರಿಸುತ್ತಿಲ್ಲ. ಹೀಗಾಗಿ ಅಂತಹವರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳುತ್ತೇವೆ. ಕೊರೊನಾ ವಿಚಾರದಲ್ಲಿ ಖಾಸಗಿ ಸಂಸ್ಥೆಗಳ ಸಹಕಾರ ಸಿಕ್ಕಿಲ್ಲ. ಆದರೆ ಅವರನ್ನು ಸರಿ ದಾರಿಗೆ ತರುವುದು ಸರ್ಕಾರಕ್ಕೆ ಗೊತ್ತಿದೆ ತರುತ್ತೇವೆ ಎಂದು ಸುಧಾಕರ್ ಎಚ್ಚರಿಕೆ ನೀಡಿದರು.