ಮುಂಬೈ : ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ನಟಿ ಪೂನಂ ಪಾಂಡೆ ಹಾಗೂ ಆಕೆಯ ಬಾಯ್ ಫ್ರೆಂಡ್ ಸ್ಯಾಮ್ ಅಹ್ಮದ್ ನನ್ನ ಮುಂಬೈನ ಮರೀನ್ ಡ್ರೈವ್ ಪೊಲೀಸರು ಬಂಧಿಸಿದ್ದಾರೆ.
ಇಡೀ ದೇಶವೇ ಕೊರೊನಾ ಮಣಿಸುವ ಹೋರಾಟದಲ್ಲಿದೆ. ಆದ್ರೆ ಪೂನಂ ಮಾತ್ರ ಲಾಕ್ ಡೌನ್ ನಿಯಮ ಜಾರಿಯಲ್ಲಿದ್ದರೂ ಕ್ಯಾರೆ ಎನ್ನದೆ ಮುಂಬೈನ ಮರೀನ್ ಡ್ರೈವ್ ನಲ್ಲಿ ತನ್ನ ಗೆಳೆಯ ಸ್ಯಾಮ್ ಅಹ್ಮದ್ ಬಾಂಬೆ ಜತೆ ಸುತ್ತಾಡಲು ಕಾರಿನಲ್ಲಿ ಹೋಗಿದ್ದಳು. ಈ ವೇಳೆ ಇಬ್ಬರನ್ನೂ ಬಂಧಿಸಿ, ಕಾರು ಜಪ್ತಿ ಮಾಡಲಾಗಿದೆ.
ಜೀವಕ್ಕೆ ಅಪಾಯ ತರುವ ರೋಗದ ಸೋಂಕನ್ನು ಹರಡುವ ಸಾಧ್ಯತೆ ಇರುವ ನಿರ್ಲಕ್ಷ್ಯದ ಕ್ರಿಯೆ ಮತ್ತು ಲಾಕ್ ಡೌನ್ ಗೆ ಅಸಹಕಾರ, ರಾಷ್ಟ್ರೀಯ ವಿಪತ್ತು ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪೂನಂ ಪಾಂಡೆ ಮತ್ತು ಸ್ಯಾಮ್ ಅಹ್ಮದ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಇನ್ ಸ್ಪೆಕ್ಟರ್ ಮೃತ್ಯುಂಜಯ ಹಿರೇಮಠ್ ತಿಳಿಸಿದ್ದಾರೆ.
ಪಡ್ಡೆಹುಡುಗರ ಫೇವರಿಟ್ ನಟಿ, ಬಿಟೌನ್ ವೈಯ್ಯಾರಿ ಈಗ ಕಾನೂಕು ಸಂಕಷ್ಟಕ್ಕೆ ಸಿಲುಕಿರುವುದು ಅವರ ಅಭಿಮಾನಿಗಳಿಗೆ ಭಾರಿ ಬೇಸರದ ವಿಷಯವಾದರೂ, ಲಾಕ್ ಡೌನ್ ಉಲ್ಲಂಘಿಸುವ ಅನಿವಾರ್ಯತೆಯಾದಾರೂ ಏನಿತ್ತು ಎಂದು ಕೆಲವರು ಟೀಕಿಸಿದ್ದಾರೆ.








