ಇಂಡೋ ಆಸಿಸ್ ಟೆಸ್ಟ್- ಎರಡನೇ ಟೆಸ್ಟ್ ಪಂದ್ಯಕ್ಕೆ ಮಹಮ್ಮದ್ ಶಮಿ ಅಲಭ್ಯ..?
ಆಸೀಸ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಟೀಮ್ ಇಂಡಿಯಾಗೆ ಮತ್ತೊಂದು ಆಘಾತವಾಗಿದೆ.
ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಬೌಲರ್ ಮಹಮ್ಮದ್ ಶಮಿ ಗಾಯದಿಂದ ಎರಡನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಪ್ಯಾಟ್ ಕಮಿನ್ಸ್ ಅವರ ಮಾರಕ ಎಸೆತ ಮಹಮ್ಮದ್ ಶಮಿ ಅವರ ಎಡಗೈ ಎಲ್ಬೊಗೆ ಬಡಿದಿತ್ತು. ಹೀಗಾಗಿ ಮಹಮ್ಮದ್ ಶಮಿ ಅವರು ರಿಟರ್ಡ್ ಹಟ್ ಆಗಿ ಪೆವಿಲಿಯನ್ ಸೇರಿಕೊಂಡ್ರು.
ಎರಡನೇ ಇನಿಂಗ್ಸ್ ನಲ್ಲಿ ಟೀಮ್ ಇಂಡಿಯಾ 9 ವಿಕೆಟ್ ನಷ್ಟಕ್ಕೆ 36 ರನ್ ಗೆ ತನ್ನ ಇನಿಂಗ್ಸ್ ಮುಗಿಸಿತ್ತು. ಅಲ್ಲದೆ ಶಮಿ ಅವರು ನೋವಿನಿಂದಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಿಲ್ಲ.
ಪಂದ್ಯ ಮುಗಿದ ಬಳಿಕ ನಾಯಕ ವಿರಾಟ್ ಕೊಹ್ಲಿ ಮಹಮ್ಮದ್ ಶಮಿ ಅವರ ಗಾಯದ ಬಗ್ಗೆ ಮಾಹಿತಿ ನೀಡಿದ್ದಾರೆ. ವೇಗದ ಎಸೆತ ಅವರ ಎಡಗೈಯ ಎಲ್ಬೋ ಗೆ ಬಡಿದ ಕಾರಣ ಅವರಿಗೆ ಕೈಯನ್ನು ಮೇಲಕ್ಕೆತ್ತಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಸದ್ಯ ಮಹಮ್ಮದ್ ಶಮಿ ಅವರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಕಾನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ 0-1ರಿಂದ ಹಿನ್ನೆಡೆಯಲ್ಲಿದೆ. ಹಾಗೇ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ ಗೆದ್ದುಕೊಂಡ್ರೆ, ಟಿ-ಟ್ವೆಂಟಿ ಸರಣಿಯನ್ನು ಟೀಮ್ ಇಂಡಿಯಾ ಗೆದ್ದಿದೆ.
ಇದೀಗ ಎರಡನೇ ಟೆಸ್ಟ್ ಪಂದ್ಯ ಮೆಲ್ಬರ್ನ್ ನಲ್ಲಿ ಡಿಸೆಂಬರ್ 26ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕೆ ವಿರಾಟ್ ಕೊಹ್ಲಿ ಅಲಭ್ಯರಾಗಲಿದ್ದಾರೆ. ಹಾಗೆ ತಂಡವನ್ನು ಅಜ್ಯಂಕ್ಯಾ ರಹಾನೆ ಅವರು ಮುನ್ನಡೆಸಲಿದ್ದಾರೆ. ಆದ್ರೆ ಈ ವೇಳೆ ಮಹಮ್ಮದ್ ಶಮಿ ಗುಣಮುಕರಾಗಿ ತಂಡವನ್ನು ಸೇರಿಕೊಳ್ಳುತ್ತಾರೋ ಅನ್ನೋದನ್ನು ಕಾದು ನೋಡಬೇಕಿದೆ.








