ಹಕ್ಕಿಜ್ವರ ಎಫೆಕ್ಟ್ : ಹರ್ಯಾಣ, ಮಧ್ಯ ಪ್ರದೇಶದಲ್ಲಿ ಜನ ಕಂಗಾಲು
ಹರಿಯಾಣ/ ಮಧ್ಯಪ್ರದೇಶ : ರಾಜಸ್ಥಾನದ ಬಳಿಕ ಹರಿಯಾಣ ಹಾಗೂ ಮಧ್ಯಪ್ರದೇಶದಲ್ಲೂ ಹಕ್ಕಿ ಜ್ವರ ಕಾಣಿಸಿಕೊಂಡಿದೆ.
ಕಳೆದೊಂದು ವಾರದಲ್ಲಿ ಮಧ್ಯಪ್ರದೇಶದಲ್ಲಿ 200ಕ್ಕೂ ಹೆಚ್ಚು ಕಾಗೆಗಳು ಮೃತಪಟ್ಟಿವೆ. ಇತ್ತ ಹರ್ಯಾಣದಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಕೋಳಿಗಳು ಹಕ್ಕಿ ಜ್ವರಕ್ಕೆ ಬಲಿಯಾಗಿವೆ.
ಸತ್ತ ಕೋಳಿಗಳ ಮಾದರಿಗಳನ್ನು ತನಿಖೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. .
ಹರಿಯಾಣದ ಪಂಚಕುಲದಲ್ಲಿ ಸಾವಿರಾರು ಕೋಳಿಗಳು ಹಠಾತ್ ಸಾವನ್ನಪ್ಪಿದ್ದು, ಕೋಳಿ ಸಾಕಾಣಿಕೆ ಕೇಂದ್ರಗಳು ಮುನ್ನೆಚ್ಚರಿಕೆ ವಹಿಸಬೇಕೆಂದು ಪಶುಸಂಗೋಪನಾ ಇಲಾಖೆ ತಿಳಿಸಿದೆ.
ಬೆಂಗಳೂರಿನ ಜನರಿಗೆ ಭರ್ಜರಿ ಸಿಹಿಸುದ್ದಿ
ಇತ್ತ ಮಧ್ಯಪ್ರದೇಶದ ಮಂಡ್ಸಾರ್, ಇಂದೋರ್, ಕೋಟಾ ಸೇರಿದಂತೆ ಅನೇಕ ನಗರಗಳಲ್ಲಿ ಕಾಗೆಗಳು ಇದ್ದಕ್ಕಿದ್ದಂತೆ ಸತ್ತು ಬೀಳುತ್ತಿವೆ. ಇವುಗಳ ಮಾದರಿಗಳನ್ನೂ ಕೂಡ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಇನ್ನ ಹಕ್ಕಿ ಜ್ವರ ಕಂಡುಬಂದಿರುವ ಪ್ರದೇಶಗಳ ಜನರಲ್ಲಿ ಏನಾದರೂ ಶೀತ, ಕೆಮ್ಮು, ಜ್ವರದ ಲಕ್ಷಣಗಳು ಕಾಣಿಸಿಕೊಂಡರೇ ಕೂಡಲೇ ವೈದ್ಯರನ್ನು ಸಂಪರ್ಕಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









