ಭಾರತಕ್ಕೂ ಕಾಲಿರಿಸಿದ ಯುಕೆಯ ಹೊಸ ಕೋವಿಡ್ ವೈರಸ್ – ದೆಹಲಿ, ಚೆನ್ನೈನಲ್ಲಿ 6 ಮಂದಿಗೆ ಸೋಂಕು ಧೃಡ – ತಮಿಳುನಾಡಿನಲ್ಲಿ ಹೈ ಅಲರ್ಟ್ ಘೋಷಣೆ UK coronavirus India
ಹೊಸದಿಲ್ಲಿ, ಡಿಸೆಂಬರ್22: ಯುಕೆಯಲ್ಲಿ ಹೊಸ ಕೊರೋನವೈರಸ್ ಪತ್ತೆಯಾದ ಬೆನ್ನಲ್ಲೇ, ಭಾರತದಲ್ಲಿ 266 ಪ್ರಯಾಣಿಕರಲ್ಲಿ ಐದು ಜನರಿಗೆ ಮತ್ತು ವಿಮಾನದ ಸಿಬ್ಬಂದಿ ಸದಸ್ಯರಿಗೆ ಹೊಸ ಕೋವಿಡ್-19 ಸೋಂಕು ಧೃಡಪಟ್ಟಿದೆ. ವಿಮಾನವು ಸೋಮವಾರ ರಾತ್ರಿ ಲಂಡನ್‌ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿತು ಎಂದು ವರದಿಗಳು ತಿಳಿಸಿವೆ. ಮಂಗಳವಾರ ಬ್ರಿಟನ್ ನಿಂದ ಹಿಂದಿರುಗಿದ ದೆಹಲಿಯಲ್ಲಿ ಐವರಿಗೆ ಮತ್ತು ಚೆನ್ನೈ ನ ಒಬ್ಬರಿಗೆ ಹೊಸ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. UK coronavirus India

ಕೋವಿಡ್ -19 ರ ನೋಡಲ್ ಅಧಿಕಾರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅವರ ಮಾದರಿಗಳನ್ನು ಸಂಶೋಧನೆಗಾಗಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರಕ್ಕೆ (ಎನ್‌ಸಿಡಿಸಿ) ಕಳುಹಿಸಲಾಗಿದೆ ಮತ್ತು ಅವರನ್ನು ಆರೈಕೆ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಬ್ರಿಟನ್ ನಿಂದ ಹಿಂತಿರುಗಿದ 266 ಜನರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ, ಐವರಿಗೆ ಹೊಸ ಬಗೆಯ ಕೊರೋನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಏನಿದು ದೇಶದಲ್ಲಿ ಆತಂಕಕ್ಕೆ ಕಾರಣವಾಗಿರುವ ಹೊಸ ಶಿಗೆಲ್ಲಾ ಸೋಂಕು? ಇದರ ಲಕ್ಷಣಗಳೇನು?ಇದು ಹೇಗೆ ಹರಡುತ್ತದೆ?
ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣದಲ್ಲಿ ಯುನೈಟೆಡ್ ಕಿಂಗ್‌ಡಂನಿಂದ ಆಗಮಿಸಿದ ವ್ಯಕ್ತಿಯೊಬ್ಬರಿಗೂ ಹೊಸ ಮಾದರಿಯ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೊಸ ಕೊರೋನಾ ವೈರಸ್ ಸೋಂಕು ದೃಢಪಟ್ಟ ಬೆನ್ನಲ್ಲೇ ತಮಿಳುನಾಡಿನಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಬ್ರಿಟನ್‌ನಲ್ಲಿ ಕೊರೋನವೈರಸ್‌ನ ಹೊಸ ಸಾಂಕ್ರಾಮಿಕ ಹೊರಹೊಮ್ಮಿದ ನಂತರ ಯುಕೆ ಯಿಂದ ಭಾರತಕ್ಕೆ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ ಎಂದು ಸರ್ಕಾರ ಸೋಮವಾರ ಪ್ರಕಟಿಸಿದೆ.
ಯುಕೆ ಯಿಂದ ವಿಮಾನಗಳ ಅಮಾನತು ಮಂಗಳವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದ್ದು, ಡಿಸೆಂಬರ್ 31 ರವರೆಗೆ ಮುಂದುವರಿಯಲಿದೆ ಎಂದು ಸರ್ಕಾರ ತಿಳಿಸಿದೆ.

ಯುಕೆಯಿಂದ ಮಂಗಳವಾರದವರೆಗೆ ಭಾರತಕ್ಕೆ ಬರುವ ಎಲ್ಲಾ ಪ್ರಯಾಣಿಕರು ತಮ್ಮನ್ನು ತಾವೇ ಪರೀಕ್ಷಿಸಿಕೊಳ್ಳಬೇಕಾಗುತ್ತದೆ.
ನಾಗರಿಕ ವಿಮಾನಯಾನ ಸಚಿವಾಲಯವು ಈ ಬಗ್ಗೆ ಟ್ವೀಟ್ ಮಾಡಿದ್ದು, ಯುಕೆಯಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಪರಿಗಣಿಸಿ, ಯುಕೆ ಯಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳನ್ನು ಡಿಸೆಂಬರ್ 11 ರಾತ್ರಿ 11.59 ರಿಂದ ಡಿಸೆಂಬರ್ 31 ರ ರಾತ್ರಿ 11:59 ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕೆಂದು ಭಾರತೀಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1341059524690513922?s=19
https://twitter.com/SaakshaTv/status/1341059761136025600?s=19








