ಕನ್ನಡದ ಕೆಲಸಕ್ಕಾಗಿ, ಏಳಿಗೆಗಾಗಿ ನಮ್ಮ ಸರ್ಕಾರ ಬದ್ಧ : ಬಿಎಸ್ ವೈ
ಬೆಂಗಳೂರು : ಕನ್ನಡದ ಕೆಲಸಕ್ಕಾಗಿ, ಏಳಿಗೆಗಾಗಿ ನಮ್ಮ ಸರ್ಕಾರ ಸದಾ ಬದ್ಧವಾಗಿರುತ್ತೆ. ಕನ್ನಡ ಭಾಷೆಗಾಗಿ ಕನ್ನಡ ಕಾಯಕದ ವರ್ಷ ಆಚರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಇಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿವಿಧ ಕ್ಷೇತ್ರಗಳಗಳಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಪ್ರದಾನಕ್ಕೂ ಮುಂಚೆ ಮಾತಾನಾಡಿದ ಮುಖ್ಯಮಂತ್ರಿಗಳು, ಭಾಷೆ – ಸಂಸ್ಕೃತಿಯು ಹೆತ್ತ ತಾಯಿಗೆ ಸಮಾನ. ಹೀಗಾಗಿ ಎಂದಿಗೂ ಗೌರವ ಸಲ್ಲಿಸಬೇಕು. ಕನ್ನಡ ಭಾಷೆಯನ್ನು ಬೇರೆಲ್ಲೋ ಉಳಿಸಲು ಸಾಧ್ಯವಾಗುದಿಲ್ಲ.
ಈ ಜಾಗದಲ್ಲೇ ಉಳಿಸಬೇಕಿರುವುದರಿಂದ ಉಳಿಸುವ ಕೆಲಸ ಮಾಡಬೇಕು. ಹೀಗಾಗಿ ಕನ್ನಡದ ಕೆಲಸಕ್ಕಾಗಿ, ಏಳಿಗೆಗಾಗಿ ನಮ್ಮ ಸರ್ಕಾರ ಸದಾ ಬದ್ಧವಾಗಿರುತ್ತೆ. ಕನ್ನಡ ಭಾಷೆಗಾಗಿ ಕನ್ನಡ ಕಾಯಕದ ವರ್ಷ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಚಿಕ್ಕಮಗಳೂರಿನಲ್ಲಿ 30 ತಿಂಗಳಲ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆ : ಡಾ.ಕೆ.ಸುಧಾಕರ್
ಇನ್ನು ಸಚಿವ ಸಿ.ಟಿ.ರವಿ ಮಾತನಾಡಿ, ಕನ್ನಡ ಭಾಷೆ ಬೆಳೆಯಬೇಕು, ಉಳಿಯಬೇಕು. ಕನ್ನಡ ಭಾಷೆ ಸುದೀರ್ಘ ಇತಿಹಾಸ ಹೊಂದಿದ್ದು, ಭಾಷೆ ಕಳೆದುಕೊಂಡರೆ ಸಂಸ್ಕೃತಿ ಕಳೆದುಕೊಂಡಂತೆ.
ಹೀಗಾಗಿ ಸಾಂಸ್ಕೃತಿಕ ಶ್ರೀಮಂತಿಯನ್ನು ಹಣದಿಂದ ತೂಕ ಮಾಡಲು ಸಾಧ್ಯವಾಗುವುದಿಲ್ಲ. ಭವ್ಯ ಪರಂಪರೆಯ ನಾಡಿನಲ್ಲಿ ಹುಟ್ಟುವುದೇ ಅದೃಷ್ಟ ಎಂದರು.
ಇದೇ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿದ್ಧಗೊಳಿಸಿರುವ ಕಲಾತಂಡ ಆಪ್ ಬಿಡುಗಡೆಯಾಯಿತು. ಇದರಲ್ಲಿ ಕಲಾ ತಂಡಗಳು ನಡೆಸುವ ಕಾರ್ಯಕ್ರಮಗಳ ಸ್ಥಳದ ವಿವರ ಇದರಲ್ಲಿ ಸಿಗಲಿದೆ.
ಎಲ್ಲೆಲ್ಲಿ ರಂಗಭೂಮಿ ಕಲಾತಂಡಗಳು ಕಾರ್ಯಕ್ರಮ ಆಯೋಜಿಸಿವೆ ಎಂಬುದನ್ನು ಕೂಡ ತಿಳಿಯಬಹುದು.
ರೈತರೇ ಬೆಳೆ ಸಮೀಕ್ಷೆ ನಡೆಸುವ ಮಾದರಿಯಲ್ಲಿಯೇ ಹಿಂಗಾರು ಬೆಳೆ ಸಮೀಕ್ಷೆ
ಇನ್ನು ಈ ಕಾರ್ಯಕ್ರಮದಲ್ಲಿ ಸಚಿವ ಸಿ.ಟಿ.ರವಿ, ಸಂಸದ ತೇಜಸ್ವಿ ಸೂರ್ಯ, ಸಚಿವ ಲಕ್ಷ್ಮಣ ಸವದಿ, ಶಾಸಕ ಉದಯ್ ಗರಡುಚಾರ್ ಭಾಗಿಯಾಗಿದ್ದರು.