PM Narendra Modi
ಲಾಕ್ ಡೌನ್ ಬಳಿಕ ಅಂತೂ ಇಂತು ಅಕ್ಟೋಬರ್ 15ರಿಂದ ಥಿಯೆಟರ್ ಗಳಲ್ಲಿ ಸಿನೆಮಾ ಬಿಡುಗಡೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದೀಗ ಚಿತ್ರಮಂದಿರಗಳಲ್ಲಿ ಯಾವೆಲ್ಲಾ ಸಿನೆಮಾಗಳು ರಿಲೀಸ್ ಆಗತ್ವೆ ಅನ್ನೋ ಕುತೂಹಲದಲ್ಲಿ ಸಿನಿಪ್ರೇಕ್ಷಕರು ಇದ್ದಾರೆ. ಸದ್ಯ ಸ್ಯಾಂಡಲ್ ವುಡ್ ನ ಅನೇಕ ಚಿತ್ರಗಳು ಮರಬಿಡುಗಡೆಗೆ ಸಜ್ಜಾಗ್ತಿವೆ. ಅಂತೆಯೇ ಬಾಲಿವುಡ್ ನಲ್ಲೂ ಕನ್ನಡದ ಮಾದರಿ ಅನುಕರಣೆ ಮಾಡಲು ಹೊರಟಿದ್ದಾರೆ. ಅದರಂತೆ ಹಳೆಯ ಚಿತ್ರಗಳನ್ನು ರಿ ರಿಲೀಸ್ ಮಾಡಲು ಸಜ್ಜಾಗಿದೆ ಬಿಟೌನ್..
ಮೂಲಗಳ ಪ್ರಕಾರ ಥೆಯೇಟರ್ ಓಪನ್ ಆದ ತಕ್ಷಣವೇ ಹಿಂದಿಯಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಕುರಿತು ಮೂಡಿ ಬಂದಿದ್ದ ”ಪಿಎಂ ನರೇಂದ್ರಮೋದಿ” (PM Narendra Modi) ಸಿನಿಮಾ. ಅಕ್ಟೋಬರ್ 15ಕ್ಕೆ ಈ ಚಿತ್ರ ರೀ ರಿಲೀಸ್ ಆಗಲಿದ್ದು, ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ.
ಓಮಂಗ್ ಕುಮಾರ್ ಆಕ್ಷನ್ ಕಟ್ ಹೇಳಿದ್ದ ಈ ಚಿತ್ರ ಮೇ 19, 2019ರಲ್ಲಿ ಬಿಡುಗಡೆಯಾಗಿತ್ತು. ಸುಮಾರು 8 ಕೋಟಿ ಬಜೆಟ್ ನಲ್ಲಿ ತಯಾರಾಗಿದ್ದ ಈ ಚಿತ್ರ ಬರೋಬ್ಬರಿ 14 ಕೋಟಿ ರೂಪಾಯಿ ಗಳಿಸಿತ್ತು.
ಬಾಲಿವುಡ್ “ಬಿಗ್ ಬಿ”ಗೆ ಬರ್ತ್ ಡೇ ಸಂಭ್ರಮ : 78ನೇ ವಸಂತಕ್ಕೆ ಕಾಲಿಟ್ಟ “ಶೆಹೆನ್ ಶಾ”..!
ಮೋದಿ ಪಾತ್ರದಲ್ಲಿ ವಿವೇಕ್ ಒಬೆರಾಯ್ ನಟಿಸಿದ್ದು, ಅಮಿತ್ ಶಾ ಪಾತ್ರಕ್ಕೆ ಮನೋಜ್ ಜೋಶಿ, ವಾಜಪೇಯಿ ಅವರ ಪಾತ್ರಕ್ಕೆ ಅಂಜನ್ ಶ್ರೀವಸ್ತವ್ ಅವರು ಬಣ್ಣ ಹಚ್ಚಿದ್ರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









