rathnan prapancha
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಡಾಲಿ ಧನಂಜಯ್ ಅವರು ಇತ್ತೀಚೆಗಷ್ಟೇ ರತ್ನನ್ ಪ್ರಪಂಚ ಎಂಬ ಹೊಸ ಸಿನಿಮಾಗೆ ಸಹಿ ಹಾಕಿದ್ರು. ಇದೀಗ ಈ ಚಿತ್ರದ ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಧನಂಜಯ್ ಅಭಿನಯದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ರತ್ನನ್ ಪ್ರಪಂಚ ಚಿತ್ರದ ಚಿತ್ರೀಕರಣ ನವೆಂಬರ್ 9ರಿಂದ ಪ್ರಾರಂಭ ಮಾಡಲು ಸಿನಿಮಾತಂಡ ನಿರ್ಧರಿಸಿದೆ ಎನ್ನಲಾಗ್ತಿದೆ.
ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಡಾಲಿ ನಿರ್ಮಾಪರಾಗಿಯೂ ಗುರುತಿಸಿಕೊಂಡಿದ್ದು, ಈಗಾಗಲೇ ಒಂದು ಸಿನಿಮಾವನ್ನೂ ಮಾಡಿ ಮುಗಿಸಿದ್ದಾರೆ. ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಬಡವ ರಾಸ್ಕಲ್ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಸಿನಿಮಾದಲ್ಲಿ ಅವರೇ ನಟಿಸಿರೋದು ವಿಶೇಷ. ಕನ್ನಡ ಮಾತ್ರವಲ್ಲದೆ ತೆಲುಗು ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ. ತೆಲುಗಿನ ‘ಪುಷ್ಪ’ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ. ಕೊನೆಯದಾಗಿ ಪಾಪ್ ಕಾರ್ನ್ ಮಂಕಿ ಟೈಗರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು ಧನಂಜಯ್
“ರತ್ನನ್ ಪ್ರಪಂಚ”ಕ್ಕೆ ರೋಹಿತ್ ಪದಕಿ ಅವರು ಆಕ್ಷನ್ ಕಟ್ ಹೇಳ್ತಾಯಿದ್ದಾರೆ. ಸಿನಿಮಾಗಗೆ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಅವರು ಬಂಡವಾಳ ಹೂಡುತ್ತಿದ್ದಾರೆ. ಅಂದ್ಹಾಗೆ ಸಿನಿಮಾದ ಮೊದಲ ಹಂತದ ಚಿತ್ರೀಕರಣವನ್ನ ಸಾಂಸ್ಕೃತಿಕ ನಗರಿ ಮೈಸೂರಿನಿಂದ ಶುರು ಮಾಡಲು ಪ್ಲಾನ್ ಮಾಡಿಕೊಂಡಿದ್ಯಂತೆ ಚಿತ್ರತಂಡ. ಇದಾದ ಬಳಿಕ ಹಾವೇರಿ, ಕಾಶ್ಮೀರಗಳಲ್ಲಿ ಶೂಟಿಂಗ್ ನಡೆಯಲಿದೆ ಎಂದು ಕೆಲ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಇನ್ನೂ ಈಗಾಗಲೇ ಚಿತ್ರದ ಫಸ್ಟ್ ಲುಕ್ ಅಭಿಮಾನಿಗಳ ಮನಗೆದ್ದಿದೆ. ಚಿತ್ರದಲ್ಲಿ ಡಾಲಿಗೆ ರೆಬಾ ಮೋನಿಕಾ ಜಾನ್ ಜೋಡಿಯಾಗಿ ಕಾಣಿಸಿಕೊಳ್ತಾಯಿದ್ದಾರೆ. ಸದ್ಯ ಧನಂಜಯ್ ಅವರು ಹೈ ಬಜೆಟ್ ಸಿನಿಮಾಗಳಾದ ಸಲಗ, ಪೊಗರು, ಯುವರತ್ನ, ತೋತಾಪುರಿ, ಹೆಡ್ ಬುಷ್ ಸೇರಿದಂತೆ ಹತ್ತು ಹಲವು ಪ್ರಾಜೆಕ್ಟ್ ಗಳಲ್ಲಿ ನಿರತರಾಗಿದ್ದಾರೆ.
rathnan prapancha
RR ನಗರ ‘ಉಪಸಮರ’: ಹಕ್ಕು ಚಲಾಯಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಕೋಮಲ್ ಅವರ ಮುಂದಿನ ಚಿತ್ರದ ಟೈಟಲ್ ಗೂ ‘ಕೊರೊನಾ’ಗೂ ಏನ್ ಸಂಬಂಧ..!
ಒಂದೇ ಸಿನಿಮಾ , ಐವರು ಸ್ಟಾರ್ ನಿರ್ದೇಶಕರು : ಚಂದನವನದಲ್ಲಿ ವಿಭಿನ್ನ ಪ್ರಯತ್ನ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








