ಟಿಕ್ ಟಾಕ್ ಸದ್ಯ ವಿಶ್ವದಾದ್ಯಂತ ಎಲ್ಲರಿಗೂ ಮೋಡಿ ಮಾಡಿರುವ ಆಪ್. 6 ವರ್ಷದ ಮಕ್ಕಳಿಂದ 60 ವರ್ಷದ ವೃದ್ಧರ ವರೆಗೂ ಈ ಆಪ್ ಅನ್ನು ಬಳಕೆ ಮಾಡುತ್ತಿದ್ದಾರೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಟಿಕ್ ಟಾಕ್ ಗೆ ಅಡಿಕ್ಟ್ ಆಗಿದ್ದಾರೆ. ಭಾರತವೂ ಇದರಿಂದ ಹೊರತಾಗಿಲ್ಲ. ದೇಶದಲ್ಲಿ ಕೋಟಿ ಕೋಟಿ ಮಂದಿ ಈ ಆಪ್ ಬಳಸುತ್ತಿದ್ದಾರೆ. ಸಿನಿಮಾಗಳ ಸಾಂಗ್, ಡೈಲಾಗಿಗೆ ಟಿಕ್ ಟಾಕ್ ಮಾಡೋರ ಸಂಖ್ಯೆ ಜಾಸ್ತಿಯಿದೆ.
ಇದರ ಮಧ್ಯೆ ಟಿಕ್ ಟಾಕ್ ಇಂಡಿಯಾದಲ್ಲಿ ಸ್ಯಾಂಡಲ್ ವುಡ್ ಟಾಕ್ ಜೋರಾಗಿದೆ. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾ ಟಿಕ್ ಟಾಕ್ ನಲ್ಲಿ ಕಿಂಗ್ ಆಗಿ ಮಿಂಚುತ್ತಿದೆ.
ಟಿಕ್ ಟಾಕ್ ನಲ್ಲಿ ರಾಖಿಭಾಯ್ ಹವಾ ಜೋರಾಗಿ ಬೀಸುತ್ತಿದ್ದು, ಬಳಕೆದಾರರು ಕೆಜಿಎಫ್ ಸಿನಿಮಾದ ಡೈಲಾಗ್, ಸಾಂಗ್ ಗಳನ್ನು ಟಿಕ್ ಟಾಕ್ ಮಾಡುತ್ತಿದ್ದಾರೆ. ಸದ್ಯ ಭಾರತದಲ್ಲಿ ಕೆಜಿಎಫ್ ಗೆ ಸಿಕ್ಕಿರುವಷ್ಟು ಹ್ಯಾಶ್ ಟ್ಯಾಗ್ ಗಳು ಬೇರೆ ಯಾವ ಸಿನಿಮಾಗೂ ಸಿಕ್ಕಿಲ್ಲ. ಕನ್ನಡದ ಕೆಜಿಎಫ್
ಬರೋಬ್ಬರಿ 3.5 ಬಿಲಿಯನ್(350 ಕೋಟಿ) ಹ್ಯಾಶ್ ಟ್ಯಾಗ್ ಗಳನ್ನು ಹೊಂದಿದೆ. ಇದರ ಹತ್ತಿರದ ಸಂಖ್ಯೆಗೂ ಯಾವ ಸಿನಿಮಾನೂ ಬಂದಿಲ್ಲ.
ಇಂಡಿಯನ್ ಸಿನಿಮಾದ ಬ್ಲಾಕ್ ಬ್ಲಸ್ಟರ್ ಬಾಹುಬಲಿ ಕೂಡ ಕೆಜಿಎಫ್ ಎದುರು ಮಕಾಡೆ ಮಲಗಿಬಿಟ್ಟಿದೆ. ಬಾಹುಬಲಿ 1.4 ಬಿಲಿಯನ್(140 ಕೋಟಿ) ಹಾಗೂ ಬಿಗಿಲ್ ಸಿನಿಮಾ 1.6 ಬಿಲಿಯನ್(160 ಕೋಟಿ) ಹ್ಯಾಶ್ ಟ್ಯಾಗ್ ಗಳನ್ನ ಪಡೆದಿವೆ.








