ಬೆಂಗಳೂರು : ಈ ಬಾರಿ ಪ್ರವಾಹದಿಂದ ಹತ್ತರಿಂದ ಹದಿನೈದು ಸಾವಿರ ಕೋಟಿ ರೂಪಾಯಿಯಷ್ಟು ನಷ್ಟ ಆಗಿದೆ. ಎಷ್ಟೇ ಪತ್ರ ಬರೆದರೂ ಉತ್ತರವಿಲ್ಲ. ಇಷ್ಟು ದಪ್ಪ ಚರ್ಮದ ಸರ್ಕಾರ ನಾನು ಎಂದೂ ನೋಡಿಲ್ಲ. ಎಲ್ಲಾ ದುಡ್ಡು ಮಾಡಲು ಕುಳಿತು ಬಿಟ್ಟಿದ್ದಾರೆ. ಎಲೆಕ್ಷನ್ ಬಂದಾಗ ದುಡ್ಡು ಖರ್ಚು ಮಾಡಿ ಗೆಲ್ಲಬಹುದು ಎಂದುಕೊಂಡಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ( Siddaramaiah )ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 10 ನೇ ತಾರೀಕಿನಿಂದ ನಿರಂತರವಾಗಿ ಮಳೆ ಬರ್ತಿದೆ.
ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಬಂದಿದೆ. ಆದ್ರೆ ಡಿಸಿಎಂ ಕಾರಜೋಳ ಅಲ್ಲಿಗೆ ಹೋಗೋದು ಬಿಟ್ಟು ಇಲ್ಲಿ ಎಲೆಕ್ಷನ್ ಮೆರವಣಿಗೆ ಮಾಡ್ತಾ ಕೂತಿದ್ದಾರೆ.
ಪ್ರಧಾನ ಮಂತ್ರಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿದ್ದಾರೆ.
ಇದನ್ನೂ ಓದಿ : `FIR ಹಾಕಿಸಿದವ್ರು ಗಂಡಸರೇ’ ಡಿಕೆಶಿ ಹೇಳಿಕೆ : ವರ್ಕೌಟ್ ಆಗಲ್ಲ ಎಂದ ರಾಮುಲು
ಕಳೆದ ವರ್ಷ ಪ್ರವಾಹ ಸಂದರ್ಭದಲ್ಲಿ ಮೋದಿ ಬಿಹಾರಕ್ಕೆ ಹೋದರೂ ಸಹ, ಕರ್ನಾಟಕಕ್ಕೆ ಬರಲಿಲ್ಲ. ಒಮ್ಮೆಯೂ ಕರ್ನಾಟಕಕ್ಕೆ ಬರಲೇ ಇಲ್ಲ.
ಈ ಬಾರಿ ಹತ್ತು ಸಾವಿರ ಕೋಟಿಗೂ ಹೆಚ್ಚು ನಷ್ಟ ಆಗಿದೆ. ರಾಜ್ಯ ಸರ್ಕಾರದ ಮಾತಿಗೆ ಕೇಂದ್ರ ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ಕೊಡ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಕಂದಾಯ ಸಚಿವ ಆರ್.ಅಶೋಕ್ ಬಗ್ಗೆ ಮಾತನಾಡಿದ ಅವರು, ಆ ಕಂದಾಯ ಸಚಿವರು ಕಾಟಾಚಾರಕ್ಕೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಗುತ್ತಾರೆ.
ಇನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಹೋಗೆ ಇಲ್ಲ. ಪ್ರವಾಹ ಹೊಡೆತಕ್ಕೆ ರಸ್ತೆ, ಕರೆಂಟ್ ಕಂಬ, ಮನೆಗಳೇ ಕೊಚ್ಚಿ ಹೋಗಿವೆ.
ಇದಕ್ಕೆಲ್ಲ ಈ ಸರ್ಕಾರ ಏನೂ ಮಾಡ್ತಿಲ್ಲ, ಕೇಂದ್ರ ಸರ್ಕಾರವೂ ನೆರವು ಕೊಡ್ತಿಲ್ಲ. ಕೇಂದ್ರ ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ನನಗೆ 70 ವರ್ಷ ವಯಸ್ಸಾಗಿದೆ, ಓಡಾಡಲು ಆಗೋಲ್ಲ : ಕಾರಜೋಳ ಕಣ್ಣೀರು
ಮುಂದುವರಿದು ಬಿಜೆಪಿ ಸಂಸದರ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಈ ಉಪಚುನಾವಣೆಗಳಲ್ಲಿ ಜನ ಬಿಜೆಪಿಗೆ ಪಾಠ ಕಲಿಸುತ್ತಾರೆ.
ರಾಜ್ಯದಿಂದ 25 ಜನ ಎಂಪಿಗಳಿದ್ದಾರೆ ಒಮ್ಮೆಯಾದರೂ ಹೋಗಿ ಜನರಿಗೆ ಅನ್ಯಾಯ ಆಗ್ತಿದೆ ಅಂತ ಕೇಳಿದ್ದಾರಾ..? ಕೇಂದ್ರದ ಎದುರು ಕೊಲೆ ಬಸವನ ಬಳಿ ತಲೆ ಅಲ್ಲಾಡಿಸುತ್ತಾರೆ.
ಕೇಂದ್ರದ ಎದುರು ಮಾತನಾಡಲು ಸಿಎಂಗೂ ಧೈರ್ಯ ಇಲ್ಲ, 25 ಎಂಪಿಗಳಿಗೂ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel