ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ರಥೋತ್ಸವ ಉದ್ಘಾಟಿಸುವ ಮೂಲಕ ಚಾಲನೆ ನೀಡಲಾಗಿದೆ.
ಅಜ್ಜನ ಜಾತ್ರೆ ಎಂದೇ ಮನೆಮಾತಾಗಿರುವ ಗವಿಸಿದ್ದೇಶ್ವರ ಜಾತ್ರೆಯ ರಥೋತ್ಸವವನ್ನು ಇದೇ ಮೊದಲ ಬಾರಿಗೆ ಕೋವಿಡ್-19 ಹಿನ್ನೆಲೆಯಲ್ಲಿ ಬೆಳಿಗ್ಗೆ 8 ಗಂಟೆಗೆ ಚಾಲನೆ ನೀಡಲಾಯಿತು. ಬಿಜಕಲ್ಲ ಮಠದ ಶಿವಲಿಂಗ ಮಹಾ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ಬಾರಿ 15 ದಿನಗಳ ಬದಲು ಮೂರು ದಿನಗಳಿಗೆ ಮಾತ್ರ ಜಾತ್ರೆಯನ್ನು ಸೀಮಿತಗೊಳಿಸಲಾಗಿದೆ.
ಕೊರೊನಾ ಮರೆತು ರಥೋತ್ಸವದಲ್ಲಿ ಭಕ್ತಗಣ
ಪ್ರತಿವರ್ಷ ಗವಿಸಿದ್ದೇಶ್ವರ ಜಾತ್ರೆಯ ರಥೋತ್ಸವ ಸಂಜೆ 5.45ಕ್ಕೆ ಆರಂಭವಾಗುತ್ತಿತ್ತು. ಆದರೆ, ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಬೆಳಿಗ್ಗೆ 8.45ಕ್ಕೆ ಚಾಲನೆ ನೀಡಲಾಗಿದೆ. ಇದು ಕೊಪ್ಪಳದ ಗವಿಸಿದ್ದೇಶ್ವ ಜಾತ್ರೆ ಮಟ್ಟಿಗೆ ಹೊಸ ಇತಿಹಾಸ ಸೃಷ್ಟಿಸಿದಂತಾಗಿದೆ.
ಕೊರೊನಾ ಕಾರಣಕ್ಕೆ ಜನರು ಸೇರುವುದನ್ನು ತಡೆಯಲು ಬೆಳಿಗ್ಗೆಯೇ ರಥೋತ್ಸವಕ್ಕೆ ಚಾಲನೆ ನೀಡಿದ್ದರೂ, ಭಕ್ತರು ಲಕ್ಷ ಲಕ್ಷ ಸಂಖ್ಯೆಯಲ್ಲಿ ಜಮಾಯಿಸಿ ಭಕ್ತಿ ಭಾವ ಮೆರೆದರು. ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ನಿಯಮವನ್ನು ಸಂಪೂರ್ಣವಾಗಿ ಜನರು ಗಾಳಿಗೆ ತೂರಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel