ಸಭಾಪತಿ ಎಲೆಕ್ಷನ್ : ನಾಸೀರ್ ಅಹಮದ್ ಕಣಕ್ಕೆ, ಕಾಂಗ್ರೆಸ್ ತಂತ್ರವೇನು..?
ಬೆಂಗಳೂರು : ವಿಧಾನ ಪರಿಷತ್ ಚುನಾವಣೆಗೆ ವೇದಿಕೆ ಸಿದ್ಧವಾಗಿದ್ದು, ಬಿಜೆಪಿ ಜೆಡಿಎಸ್ ದೋಸ್ತಿ ವಿರುದ್ಧ ಕಾಂಗ್ರೆಸ್ ಏಕಾಂಗಿಯಾಗಿ ತೊಡೆತಟ್ಟಿದೆ. ಪ್ರತಾಪ್ ಚಂದ್ರ ಶೆಟ್ಟ ಅವರ ರಾಜೀನಾಮೆಯಿಂದ ತೆರವಾಗಿರುವ ಪರಿಷತ್ ಸಭಾಪತಿ ಸ್ಥಾನಕ್ಕೆ ಸೋಮವಾರದಿಂದ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದ್ದು, ಮಂಗಳವಾರ ಚುನಾವಣೆ ನಡೆಯಲಿದೆ. ಬಿಜೆಪಿ ಜೆಡಿಎಸ್ ದೋಸ್ತಿ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ಕಣಕ್ಕಿಳಿಯೋದು ಪಕ್ಕಾ ಆಗಿದ್ದು, ಕಾಂಗ್ರೆಸ್ ನಿಂದ ನಸೀರ್ ಅಹಮದ್ ನಾಮಪತ್ರ ಸಲ್ಲಿಸಲಿದ್ದಾರೆ.
ಸಂಖ್ಯಾಬಲವನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೇ ಕಾಂಗ್ರೆಸ್ ಸೋಲು ಖಚಿತವಾಗಿದೆ. ಯಾಕೆಂದ್ರೆ ಪರಿಷತ್ ನಲ್ಲಿ ವಿಧಾನಪರಿಷತ್ ನಲ್ಲಿ ಬಿಜೆಪಿ 31, ಜೆಡಿಎಸ್ 13 ಸೇರಿ 44 ಸದಸ್ಯರ ಸಂಖ್ಯಾಬಲ ಹೊಂದಿದೆ. ಕಾಂಗ್ರೆಸ್ 29 ಸದಸ್ಯರನ್ನು ಹೊಂದಿದೆ. ಒಬ್ಬ ಪಕ್ಷೇತರರಿದ್ದು, ಮತ್ತೊಂದು ಸ್ಥಾನ ಖಾಲಿ ಇದೆ. ಸಂಖ್ಯಾಬಲವನ್ನು ನೋಡಿದರೆ ಕಾಂಗ್ರೆಸ್ ವಿಧಾನಪರಿಷತ್ ನಲ್ಲಿ ದುರ್ಬಲವಾಗಿದೆ..
ಜೆಡಿಎಸ್ ಗೆ ನೇರ ಸವಾಲು
ಮೈತ್ರಿ ಸರ್ಕಾರ ಇದ್ದಾಗ ಪರಿಷತ್ ನಲ್ಲಿ ಜೆಡಿಎಸ್ ಕಾಂಗ್ರೆಸ್ ದೋಸ್ತಿ ಮಾಡಿಕೊಂಡಿತ್ತು. ಜೆಡಿಎಸ್ ಗೆ ಉಪಸಭಾಪತಿ ಸ್ಥಾನ ನೀಡಿ ಕಾಂಗ್ರೆಸ್ ಸಭಾಪತಿ ಸ್ಥಾನ ಉಳಿಸಿಕೊಂಡಿತ್ತು.
ವಿವಿಧ ರಾಜಕೀಯ ಬೆಳವಣಿಗೆಗಳ ನಂತರ ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ನ ಸಂಖ್ಯಾಬಲ ಕುಗ್ಗಿದೆ. ಈ ನಡುವೆ ಜೆಡಿಎಸ್ ಕಾಂಗ್ರೆಸ್ ನ ಸಂಬಂಧ ಹಳಸಿಕೊಂಡಿದೆ.
ಈ ಮಧ್ಯೆ ಪರಿಷತ್ ನಲ್ಲಿ ಪದೇ ಪದೇ ಹಿನ್ನಡೆಯಿಂದ ಅಸಮಾಧಾನಗೊಂಡ ಬಿಜೆಪಿ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಅವರನ್ನು ಪದಚ್ಯುತಗೊಳಿಸಲು ಪ್ರಯತ್ನ ಮಾಡಿತ್ತು. ಆದ್ರೆ ಸಫಲವಾಗಿಲ್ಲ. ಈ ಬೆಳವಣಿಗೆಗಳ ಮಧ್ಯೆ ಜೆಡಿಎಸ್ ಬಿಜೆಪಿಗೆ ಬೆಂಬಲ ಸೂಚಿಸಿತು. ಪ್ರತಾಪ್ ಚಂದ್ರ ಶೆಟ್ಟಿ ಅವರನ್ನ ಪದಚ್ಯುತಗೊಳಿಸಲು ಪರಿಷತ್ ನಲ್ಲಿ ಹೈ ಡ್ರಾಮಾವೇ ನಡೆದು ಹೋಯ್ತು.
ಈ ನಡುವೆ ಎಸ್.ಎಲ್.ಧರ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ತೆರವಾದ ಉಪಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡು ಬಿಜೆಪಿಯ ಎಂ.ಕೆ.ಪ್ರಾಣೇಶ್ ಹೆಚ್ಚು ಮತ ಪಡೆದು ಆಯ್ಕೆಯಾಗಿದ್ದಾರೆ.
ಇನ್ನುಳಿದಂತೆ ಸಭಾಪತಿ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಲಿದೆ. ಸಂಖ್ಯಾಬಲ ಇಲ್ಲದಿದ್ದರೂ ಕಾಂಗ್ರೆಸ್ ಅಖಾಡಕ್ಕೆ ಧುಮುಖಲು ಸಿದ್ಧವಾಗಿದೆ. ಆ ಮೂಲಕ ಜೆಡಿಎಸ್ ನ ಜಾತ್ಯತೀತತೆಯನ್ನು ಬಯಲು ಮಾಡಬೇಕು ಎಂಬ ಹಠಕ್ಕೆ ಬಿದ್ದಂತಿದೆ ಕಾಂಗ್ರೆಸ್.
ಮೂಲಗಳ ಪ್ರಕಾರ ನಸೀರ್ ಅಹಮದ್ ಚುನಾವಣೆಯಲ್ಲಿ ಸ್ಪರ್ಧಿಸುವುದರ ಹಿಂದೆ ಸಿದ್ದರಾಮಯ್ಯ ಪಾತ್ರ ಇದೆ ಎಂದು ಹೇಳಲಾಗುತ್ತಿದೆ. ಇನ್ನ ನಸೀರ್ ಅಹಮದ್ ಸ್ಪರ್ಧೆ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









