ಅತ್ತೆ ಮಾವನ ಮನೆಯಲ್ಲಿ ಸೊಸೆಗೆ ವಾಸಿಸುವ ಹಕ್ಕಿದೆ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು Supreme judgement woman
ಹೊಸದಿಲ್ಲಿ, ಅಕ್ಟೋಬರ್16: ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ, ಸುಪ್ರೀಂ ಕೋರ್ಟ್ ಒಂದು ಮಹತ್ವದ ತೀರ್ಪು ನೀಡಿದೆ. Supreme judgement woman

ಸುಪ್ರೀಂ ಕೋರ್ಟ್, ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ ಸೊಸೆಗೆ ತನ್ನ ಅತ್ತೆ ಮಾವನ ಮನೆಯಲ್ಲಿ ವಾಸಿಸುವ ಹಕ್ಕಿದೆ ಎಂದು ಹೇಳಿದೆ. ತರುಣ್ ಬಾತ್ರಾ ಪ್ರಕರಣದಲ್ಲಿ ಇಬ್ಬರು ನ್ಯಾಯಾಧೀಶರ ತೀರ್ಪನ್ನು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಮೂವರು ನ್ಯಾಯಾಧೀಶರ ನ್ಯಾಯಪೀಠ ಬದಲಾಯಿಸಿದೆ.
ದೇಶದಲ್ಲಿ ಹವಾನಿಯಂತ್ರಣಗಳ (ಎಸಿ) ಅಮದು ನಿಷೇಧಿಸಿದ ಕೇಂದ್ರ ಸರ್ಕಾರ
ತರುಣ್ ಬಾತ್ರಾ ಪ್ರಕರಣದಲ್ಲಿ ಇಬ್ಬರು ನ್ಯಾಯಾಧೀಶರ ಪೀಠವು ಕಾನೂನಿನ ಪ್ರಕಾರ ಮಹಿಳೆ ತನ್ನ ಪತಿಯ ಹೆತ್ತವರ ಒಡೆತನದ ಆಸ್ತಿಯಲ್ಲಿ ವಾಸಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಈಗ ಮೂವರು ಸದಸ್ಯರ ಪೀಠವು ತರುಣ್ ಬಾತ್ರಾ ಪ್ರಕರಣದಲ್ಲಿ ನಿರ್ಧಾರವನ್ನು ಬದಲಾಯಿಸಿದೆ.
ಪೇಟಿಎಂ ನಲ್ಲಿ ಇನ್ನು ಪೇಟಿಎಂ ವ್ಯಾಲೆಟ್ ಗೆ ಸೇರಿಸುವ ಮೊತ್ತದ ಮೇಲೆ 2% ಶುಲ್ಕ
ಕೌಟುಂಬಿಕ ಹಿಂಸಾಚಾರದಿಂದಾಗಿ ಪತಿಯ ಮನೆಯಿಂದ ಹೊರ ಹಾಕಲ್ಪಟ್ಟು, ತನ್ನ ತವರು ಮನೆಗೆ ಮರಳಿ ತೆರಳಲು ಇಚ್ಛಿಸದ ಮಹಿಳೆಯರ ಪಾಲಿಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮೊದಲ ಎರಡು ಸದಸ್ಯರ ಪೀಠವು ಪತ್ನಿಗೆ ತನ್ನ ಪತಿಯ ಆಸ್ತಿಯ ಮೇಲೆ ಮಾತ್ರ ಹಕ್ಕಿದೆ ಎಂದು ತೀರ್ಪು ನೀಡಿತ್ತು. ತರುಣ್ ಬಾತ್ರಾ ಪರವಾಗಿ ಹಿರಿಯ ವಕೀಲ ನಿಧಿ ಗುಪ್ತಾ ವಾದಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ








