Thalaivi
ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ಬಹುನಿರೀಕ್ಷೆಯ ಜಯಲಲಿತಾ ಬಯೋಪಿಕ್ ‘ತಲೈವಿ’ (Thalaivi) ಚಿತ್ರೀಕರಣ ಬಿರುಸಿನಿಂದ ನಡೀತಾಯಿದೆ.
ಆದ್ರೆ ಇದೀಗ ಕ್ಲೈಮ್ಯಾಕ್ಸ್ ಚಿತ್ರಕ್ಕೆ ತೊಡಕು ಎದುರಾಗಿದೆ ಎನ್ನಲಾಗ್ತಿದೆ. ಈಗಾಗಲೇ ಒಂದು ಶೆಡ್ಯೂಲ್ ಅನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.
ನಟಿ ಕಂಗನಾ ರಣಾವತ್ 7 ತಿಂಗಳ ಬಳಿಕ ಚಿತ್ರೀಕರಣದಲ್ಲಿ ಹಾಜರಾಗಿದ್ದು, ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಖುಷಿ ಹಂಚಿಕೊಂಡಿದ್ದರು.
ಅಲ್ಲದೇ ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾರನ್ನೇ ಹೋಲುವ ರೀತಿಯಾದ ಕಂಗನಾ ಲುಕ್ ನೆಟಿಜನ್ಸ್ ಗಮನ ಸೆಳೆದಿತ್ತು.
ಆದರೀಗ ಚಿತ್ರತಂಡ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ತೊಂದರೆ ಎದುರಾಗಿದೆ ಎನ್ನಲಾಗ್ತಿದೆ.
ಕೊರೊನಾ ಆತಂಕದ ಮಧ್ಯೆ ಚಿತ್ರೀಕರಣ ಪ್ರಾಂಭಮಾಡಿದ್ದು, ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಸಾಮಾಜಿಕ ಅಂತರ ಕಾಪಾಡಿಕೊಂಡು ಚಿತ್ರೀಕರಣ ಮಾಡುವುದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದೆ.
ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಸುಮಾರು 350ಕ್ಕು ಹೆಚ್ಚು ಜನ ಇರಬೇಕಂತೆ. ಆದರೀಗ ಸಾಮಾಜಿಕ ಅಂತರದ ಕಾರಣ ಇಷ್ಟು ಜನರನ್ನು ಚಿತ್ರೀಕರಣದಲ್ಲಿ ಸೇರಿಸುವ ಹಾಗಿಲ್ಲ.
ಹಾಗಾಗಿ ಈ ಸಮಯದಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡುವುದು ಅಸಾಧ್ಯವಾಗಿದೆ.
ಪರಿಸ್ಥಿತಿ ಸುಧಾರಿಸುವವರೆಗೂ ಕ್ಲೈಮ್ಯಾಕ್ಸ್ ಚಿತ್ರೀಕರಣ ನಿಲ್ಲಿಸುವ ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದೆ.
ರಾತ್ರೋರಾತ್ರಿ ಸ್ಟಾರ್ ಆದ ರಾನು ಮೊಂಡಲ್ ಸ್ಥಿತಿ ಈಗ ಹೇಗಿದೆ..?
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








