ಕೇಂದ್ರ ಬಜೆಟ್ 2021 : `ನಾಲ್ಕು ರಾಜ್ಯಗಳಿಗೆ ಬಂಪರ್’ ನಮೋ `ಎಲೆಕ್ಷನ್ ಬಜೆಟ್’
ನವದೆಹಲಿ : ಕೊರೊನಾ ಸಂಕಷ್ಟ, ಆರ್ಥಿಕ ಕುಸಿತದ ಮಧ್ಯೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ದಶಕದ ಮೊದಲ ಆಯವ್ಯಯವನ್ನು ಮಂಡನೆ ಮಾಡಿಸಿದ್ದಾರೆ. 2020 ವರ್ಷದಲ್ಲಿ ಎದುರಾದ ಸಂಕಷ್ಟದಿಂದ ದೇಶವನ್ನ ಪಾರು ಮಾಡುವ ನಿಟ್ಟಿನಲ್ಲಿ ಈ ಬಜೆಟ್ ನಲ್ಲಿ ಒಂದಿಷ್ಟು ಕ್ರಾಂತಿಕಾರಿಕ ಬದಲಾವಣೆಗಳನ್ನ ಮಾಡಲಾಗುತ್ತದೆ ಎಂದು ಎಲ್ಲರು ನಿರೀಕ್ಷೆ ಮಾಡಿದ್ದರು. ಕೊರೊನಾ ಹೊಡೆತಕ್ಕೆ ಸಿಲುಕಿ ಇನ್ನೂ ಚೇತರಿಸಿಕೊಳ್ಳದ ಉದ್ಯಮಗಳಿಗೆ ಇಂದಿಷ್ಟು ಬೂಸ್ಟ್ ನೀಡುತ್ತಾರೇನೋ ಎಂಬ ಆಸೆ ಆಕಾಂಕ್ಷೆಗಳಿಂದ ಎಲ್ಲರು ಎದುರು ನೋಡುತ್ತಿದ್ದರು. ಆದ್ರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವರ್ಷ ಚುನಾವಣೆ ನಡೆಯಲಿರುವ ನಾಲ್ಕು ರಾಜ್ಯಗಳಿಗೆ ಮಾತ್ರ ಬಂಪರ್ ಗಿಫ್ಟ್ ನೀಡಿದ್ದಾರೆ.
ಹೌದು..! ಈ ವರ್ಷ ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಈ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕೇವಲ ಈ ನಾಲ್ಕೂ ರಾಜ್ಯಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನ ಘೋಷಣೆ ಮಾಡಲಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
ಬಜೆಟ್ ನಲ್ಲಿ ತಮಿಳುನಾಡಿನಲ್ಲಿ 3,500 ಕಿ.ಮೀ. ದೂರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆಗೆ 1 ಲಕ್ಷ ಕೋಟಿ ರೂ.ಅನುದಾನ ನೀಡಲಾಗಿದೆ.
ಅಲ್ಲದೆ ಚೆನ್ನೈನಲ್ಲಿ ಮೆಟ್ರೋ ಮಾರ್ಗ ನಿರ್ಮಾಣಕ್ಕೆ 63,246 ಕೋಟಿ ಹಣ ಘೋಷಣೆ ಮಾಡಲಾಗಿದೆ.
ಇನ್ನು ಕೇರಳ ವಿಚಾರಕ್ಕೆ ಬಂದ್ರೆ ಕೇರಳದಲ್ಲಿ 1,100 ಕಿ.ಮೀ. ಹೊಸ ಹೆದ್ದಾರಿ ಯೋಜನೆ, ಮೂಲಸೌಕರ್ಯಕ್ಕೆ 65 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.
ದೀದಿ ನಾಡು ಪಶ್ಚಿಮ ಬಂಗಾಳದಲ್ಲಿ ಹೊಸ ಹೆದ್ದಾರಿ ನಿರ್ಮಾಣಕ್ಕಾಗಿ 25 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ. ಅದೇ ರೀತಿ ಅಸ್ಸಾಂ ನಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ 3,400 ಕೋಟಿ ರೂ. ಅನುದಾನ ಘೋಷಿಸಿದ್ದಾರೆ.
ಇದಲ್ಲದೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಚಹಾ ವ್ಯಾಪಾರಿಗಳಿಗೆ 1,000 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಇವು ಮಾತ್ರವಲ್ಲದೇ ಇನ್ನು ಹತ್ತು ಹಲವು ಯೋಜನೆಗಳನ್ನು ಈ ರಾಜ್ಯಗಳಿಗೆ ನೀಡಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









